ಮಂಗಳೂರು.ಸೆ,07: ಕರ್ನಾಟಕ ಜಂಯ್ಯತುಲ್ ಉಲಮಾ ಮುಶಾವರ ಸದಸ್ಯರೂ, ಅಲ್ ಮದೀನಾ ಮಂಜನಾಡಿ ಶಿಲ್ಪಿಯೂ, ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ ಅಧ್ಯಕ್ಷರೂ ಆಗಿದ್ದ, ಇತ್ತೀಚೆಗೆ ನಮ್ಮನ್ನಗಲಿದ ಮರ್ಹೂಮ್ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ.)ರವರ ಸಂಸ್ಮರಣಾ ಸಮಾರಂಭವು ಪಾಣೆಮಂಗಳೂರು ಸಾಗರ ಅಡಿಟೋರಿಯಮ್ ನಲ್ಲಿ ಇಂದು ನಡೆಯಿತು.
ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಮದನಿ ಅಲ್ ಬುಖಾರಿ ಯವರ ದುಆ ದೊಂದಿಗೆ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿ, ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ಸಂಸ್ಮರಣಾ ಬಾಷಣ ಮಾಡಿದರು.ಕೋ ಆರ್ಡಿನೇಷನ್ ಅಧ್ಯಕ್ಷರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋ ಆರ್ಡಿನೇಷನ್ ಕೋಶಾಧಿಕಾರಿ ಸಯ್ಯಿದ್ ಇಸ್ಮಾಯಿಲ್ ತಂಙಲ್ ಉಜಿರೆ,ಕೋ ಆರ್ಡಿನೇಷನ್ ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ, SჄS ರಾಜ್ಯಾದ್ಯಕ್ಷ ಜಿ ಎಂ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಡಾ. ಝೈನಿ ಕಾಮಿಲ್, SEDC ರಾಜ್ಯಾಧ್ಯಕ್ಷ ಕೆ ಕೆ ಎಂ ಕಾಮಿಲ್ ನಾಯಕರಾದ ಹನೀಫ್ ಮಿಸ್ಬಾಹಿ, ಅಬ್ಡುಲ್ ಖಾದರ್ ಸಖಾಫಿ, KCF ನಾಯಕರಾದ ರಹೀಮ್ ಸಅದಿ ಕತ್ತರ್, ಪಿ ಪಿ ನಝೀರ್, ರಝ್ಝಾಕ್ ಹಾಜಿ, ಸಾದಿಕ್ ಮಲೆಬೆಟ್ಟು, ಅಬ್ಡುಲ್ ಹಮೀದ್ ಬಜ್ಪೆ ಭಾಗವಹಿಸಿದ್ದರು.
🖎ಅಶ್ರಪ್ ಕಿನಾರ ಮಂಗಳೂರು(ಕೋ ಆರ್ಡಿನೇಷನ್ ಕಾರ್ಯದರ್ಶಿ)