ಕುವೈಟ್ ಸಿಟಿ: ತೀವ್ರ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ವಿದೇಶಿ ಕುಟುಂಬಗಳು ಹಿಂತಿರುಗುತ್ತಿದ್ದು, ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ವಹಿವಾಟನ್ನು ಕುಂಠಿತಗೊಳಿಸಿದೆ ಎಂದು ರಿಯಲ್ ಎಸ್ಟೇಟ್ ಯೂನಿಯನ್ ಹೇಳಿದೆ.
ಇದಲ್ಲದೆ, ಕುಟುಂಬ-ಅವಲಂಬಿತ ವೀಸಾಗಳಿಗೆ ಸಂಬಳದ ಮಿತಿ ಹೆಚ್ಚಿಸಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ವಿದೇಶಿ ಕುಟುಂಬಗಳು ದೇಶವನ್ನು ತೊರೆಯುವ ಸಂಭವವಿದೆ. ದೇಶೀಕರಣದಿಂದಾಗಿ ಅನೇಕ ವಲಸಿಗರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವು ಅನೇಕ ವಲಸಿಗರನ್ನು ಊರಿಗೆ ಮರಳುವಂತೆ ಮಾಡಿದೆ. ಕುಟುಂಬಗಳನ್ನು ಊರಿಗೆ ಕಳುಹಿಸಿದ ಕಾರಣ ಹಲವಾರು ಸಮುಚ್ಚಯಗಳು ಖಾಲಿ ಉಳಿದಿವೆ.
ಪ್ರಸ್ತುತ, ಫಹಾಹೀಲ್, ಮಂಗಫ್, ಹವಲ್ಲಿ, ಸಾಲ್ಮಿಯಾ, ಖೈತಾನ್, ಫರ್ವಾನಿಯಾ ಜಲೀಬ್ ಶುಯೂಖ್‌ನಲ್ಲಿ ಹಲವಾರು ಫ್ಲ್ಯಾಟ್‌ಗಳು ಖಾಲಿ ಇವೆ. ಸಾಲ್ಮಿಯಾ ಮತ್ತು ಹಾವಲ್ಲಿಗಳಲ್ಲಿ ಬಾಡಿಗೆ ದರವನ್ನು ಕಡಿಮೆ ಮಾಡಲಾಗಿದೆ. ಏತನ್ಮಧ್ಯೆ, ಕೇರಳೀಯರು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶವಾದ ಅಬ್ಬಾಸಿಯಾದಲ್ಲಿ ಕೂಡ ಪ್ಲಾಟ್‌ಗಳು ಖಾಲಿಯಾಗಿವೆ. ಬಾಡಿಗೆಗೆ ಎನ್ನುವ ಬೋರ್ಡ್‌ಗಳನ್ನು ತೂಗುಹಾಕಲಾಗಿವೆ. ಆದರೆ ಬಾಡಿಗೆಯನ್ನು ಇಳಿಸಲಾಗಿಲ್ಲ.
ಆದರೆ ವಿದೇಶಿಯರು ಸ್ಥಳಾಂತರ ಮುಂದುವರಿಸಿದರೆ, ಹೆಚ್ಚಿನ ಫ್ಲ್ಯಾಟ್‌ಗಳು ಖಾಲಿ ಉಳಿಯಲಿದ್ದು, ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರವು ಇನ್ನಷ್ಟು ಹದಗೆಡಲಿದೆ ಎಂಬ ಆತಂಕವನ್ನು ರಿಯಲ್ ಎಸ್ಟೇಟ್ ಯೂನಿಯನ್ ಹೊಂದಿದೆ.






