janadhvani

Kannada Online News Paper

ಭಯೋತ್ಪಾದಕ ಪಟ್ಟ: ಮಾಧ್ಯಮ ವಕ್ತಾರರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ವಿರಾಜಪೇಟೆ: ಅಮಾಯಕ ಅಬ್ದುಲ್ ರವೂಫ್ ಬೆಳ್ತಂಗಡಿ ರವರ ಮೇಲೆ ಭಯೋತ್ಪಾದಕ ಎಂಬ ಪಟ್ಟ ಕಟ್ಟಿದ ಮಾಧ್ಯಮ ವಕ್ತಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಷನ್ ವತಿಯಿಂದ ತಹಶಿಲ್ದಾರ್ ಮುಖಾಂತರ ರಾಜ್ಯದ ಮಾನ್ಯ ಮುಖ್ಯಮಂತ್ರಳಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ರಾಜ್ಯ ಎಸ್ಸೆಸ್ಸೆಫ್ ಪ್ರ. ಕಾರ್ಯದರ್ಶಿ ಯಾಕುಬ್ ಮಾಸ್ಟರ್ ಕೊಳಕೇರಿ, ವಿರಾಜಪೇಟೆ ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಅದಿ, ರಾಜ್ಯ ಸಮಿತಿ ಸದಸ್ಯರಾದ ರಫೀಕ್ ನೆಲ್ಲಿಹುದಿಕೇರಿ, ಜಿಲ್ಲಾ ಎಸ್ಸೆಸ್ಸೆಫ್ ಪ್ರ. ಕಾರ್ಯದರ್ಶಿ ಮುಸ್ತಫಾ ನೆಲ್ಲಿಹುದಿಕೇರಿ, ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ, ಜಿಲ್ಲಾ ಸಮಿತಿ ಸದಸ್ಯರಾದ ಜುನೈದ್ ಅಮ್ಮತ್ತಿ, ವಿರಾಜಪೇಟೆ ಡಿವಿಷನ್ ಸಮಿತಿ ಪ್ರ. ಕಾರ್ಯದರ್ಶಿ ಯೂಸುಫ್ ಝೈನಿ, ಕೋಶಾಧಿಕಾರಿ ಜಲೀಲ್ ಅಮೀನಿ, ಕ್ಯಾಂಪಸ್ ಕಾರ್ಯದರ್ಶಿ ನಿಝಾಂ ಮಟ್ಟಂ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಬೀಜಕೊಚ್ಚಿ ಉಪಸ್ಥಿತರಿದ್ದರು.