janadhvani

Kannada Online News Paper

ಆಗಸ್ಟ್ 12 ಸೋಮವಾರ ಈದುಲ್ ಅದ್’ಹಾ: ಉಳ್ಳಾಲ ಖಾಝಿ ಕೂರತ್ ತಂಙಳ್ ಘೋಷಣೆ

ಉಳ್ಳಾಲ,ಆ.2: ಇಂದು ಶುಕ್ರವಾರ ಅಸ್ತ ಶನಿವಾರ ರಾತ್ರಿ ದುಲ್ ಹಜ್ ತಿಂಗಳ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಆಗಸ್ಟ್ 03 ಶನಿವಾರ ( ನಾಳೆ ) ದುಲ್ ಹಜ್ ತಿಂಗಳ ಚಾಂದ್ ಒಂದು ಆಗಿರುತ್ತದೆ.

ದ.ಕ.ಜಿಲ್ಲೆಯಲ್ಲಿ ಆಗಸ್ಟ್ 11 ರಂದು ಅರಫಾ ಉಪವಾಸ ಮತ್ತು ಆಗಸ್ಟ್ 12 ಸೋಮವಾರ ಈದುಲ್ ಅದ್’ಹಾ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ, ದ.ಕ.ಜಿಲ್ಲಾ ಸಂಯುಕ್ತ ಖಾಝಿಯವರಾದ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಘೋಷಿಸಿರುತ್ತಾರೆ.

ಮಂಗಳೂರು ಖಾಝಿ ಘೋಷಣೆ

ಮಂಗಳೂರು: ಶುಕ್ರವಾರ ಅಸ್ತ ಶನಿವಾರ ರಾತ್ರಿ ದುಲ್ ಹಜ್ ತಿಂಗಳ ಚಂದ್ರ ದರ್ಶನವಾಗಿದ್ದು,

ಆಗಸ್ಟ್ 03 ಶನಿವಾರ ದುಲ್ ಹಜ್ ತಿಂಗಳ ಪ್ರಥಮ ದಿನವಾಗಿರುತ್ತದೆ. 11 ರಂದು ಅರಫಾ ದಿನ ಮತ್ತು ಆಗಸ್ಟ್ 12 ಸೋಮವಾರ ಬಕ್ರೀದ್ ಆಗಿರುತ್ತದೆ ಎಂದು ಮಂಗಳೂರು ಖಾಝಿ, ದ.ಕ.ಜಿಲ್ಲಾ ಸಂಯುಕ್ತ ಖಾಝಿಯವರಾದ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.