janadhvani

Kannada Online News Paper

ಸೌದಿ ಅರೇಬಿಯಾ: ಆಗಸ್ಟ್ 10 ಕ್ಕೆ ಅರಫಾ ದಿನ, 11ಕ್ಕೆ ಈದ್

ರಿಯಾದ್: ದುಲ್ ಹಜ್ ತಿಂಗಳ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಆಗಸ್ಟ್ 2ರಂದು ದುಲ್ ಹಜ್ 1 ಆಗಿದ್ದು, ಆಗಸ್ಟ್ 10ರಂದು ಅರಫಾ ದಿನ ಮತ್ತು ಆಗಸ್ಟ್ 11ರಂದು ಈದುಲ್ ಅದ್’ಹಾ ಆಗಿರುತ್ತದೆ ಎಂದು ಸೌದಿ ಸುಪ್ರೀಂಕೋರ್ಟ್ ಘೋಷಿಸಿದೆ.

ಒಮಾನ್ ಹೊರತುಪಡಿಸಿ ಯುಎಇ, ಖತಾರ್, ಕುವೈತ್, ಬಹ್ರೇನ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲೂ ಆಗಸ್ಟ್ 11 ರಂದು ಈದುಲ್ ಅದ್’ಹಾ ಹಬ್ಬವನ್ನು ಆಚರಿಸಲಾಗುತ್ತದೆ.

ಒಮಾನಿನಲ್ಲಿ ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ದುಲ್ ಖಅದ್ 30 ಪೂರ್ತೀಕರಿಸಿ, ಆಗಸ್ಟ್ 3ಕ್ಕೆ ದುಲ್ ಹಜ್ ಮೊದಲನೇ ದಿನವಾಗಿದ್ದು, ಆಗಸ್ಟ್ 12 ಕ್ಕೆ ಈದ್ ಹಬ್ಬ ಆಚರಿಸಲಾಗುವುದು ಎಂದು ಒಮಾನ್ ಔಖಾಫ್ ತಿಳಿಸಿದೆ.