ಬಂಟ್ವಾಳ: ರಸ್ತೆ ಅಪಘಾತದಿಂದಲ್ಲಿ ಗಾಯಗೊಂಡಿದ್ದ ಹಿರಿಯ ಧಾರ್ಮಿಕ ವಿದ್ವಾಂಸ, ವಾಗ್ಮಿ, ಅಡ್ಡೂರು ಯೂಸುಫ್ ಹಾಜಿ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಯೂಸುಫ್ ಹಾಜಿ ಅವರು ಇಂದು ಮಧ್ಯಾಹ್ನ 2.15ರ ವೇಳೆಗೆ ಬಿ.ಸಿ.ರೋಡಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕೈಂಕಬದ ಕಡೆಯಿಂದ ಬಂದ ಕಾರೊಂದು ಢಿಕ್ಕಿಯಾಗಿದೆ. ಪರಿಣಾಮ ಗಾಯಗೊಂಡಿದ್ದ ಅವರನ್ನು ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿತಾಗದೇ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಈ ಸಂಬಂಧ ಮೆಲ್ಕಾರ್ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಡ್ಡೂರು ನಿವಾಸಿಯಾಗಿರುವ ಯೂಸುಫ್ ಹಾಜಿಯವರು ಸುರಿಬೈಲಿನ ಮಸೀದಿಯ ಸ್ಥಾಪಕ ಖತೀಬರಾದ ಅಬ್ದುಲ್ ಖಾದಿರ್ ಉಸ್ತಾದರ ಪುತ್ರರಾಗಿದ್ದಾರೆ. ತಾಲೂಕಿನ ವಿವಿಧ ಮಸೀದಿ, ಮದ್ರಸ ಉಸ್ತಾದ್ ಆಗಿ ಸೇವೆ ಸಲ್ಲಿಸಿರುವ ಇವರು, ಅಡ್ಡೂರಿನ ಕಾಂಜಿಲಕೋಡಿಯಲ್ಲಿ ಸುಮಾರು ವರ್ಷಗಳಲ್ಲಿ ದೀನೀ ಸೇವೆ ಗೈದಿದ್ದಾರೆ.
ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ನೇತಾರರಾದ ಹಬೀಬ್ ಅಡ್ಡೂರು ರವರ ತಂದೆಯವರಾದ ಅಡ್ಡೂರು ಯೂಸುಫ್ ಹಾಜಿಯವರ ಅಕಾಲಿಕ ಮರಣವು ಅನಿವಾಸಿ ವೃಂದವನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಅವರ ವಿಯೋಗವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ಕುಟುಂಬಸ್ಥರಿಗಿ ನೀಡಲಿ ಎಂದು ಪ್ರಾರ್ಥಿಸುತ್ತಾ ಸೌದಿ ಕೆಸಿಎಫ್ ಸಂತಾಪವನ್ನು ಸೂಚಿಸುತ್ತಿದೆ.
ಮೃತರ ಹೆಸರಲ್ಲಿ ಖುರ್ಆನ್, ತಹ್ಲೀಲ್, ಹಾಗೂ ಮಯ್ಯಿತ್ ನಮಾಝ್ ನಿರ್ವಹಿಸುವಂತೆ ವಿನಂತಿ.
ಕೆಸಿಎಫ್ ಸಾಂತ್ವನ ವಿಭಾಗ
ಸೌದಿ ಅರೇಬಿಯಾ







Innalillah. …