ಜಿದ್ದಾ: ಕಿರಾಣಿ ಅಂಗಡಿಗಳು (ಬಖಾಲಾ) ಮತ್ತು ಮಿನಿ ಸೂಪರ್ ಮಾರ್ಕೆಟ್ ಮತ್ತು ಆಹಾರ ಮಳಿಗೆಗಳಲ್ಲಿನ ಬೆನಾಮಿ ವಹಿವಾಟುಗಳನ್ನು ತಡೆಯುವ ಸಲುವಾಗಿ ಪುರಸಭೆಯ ಕಾನೂನನ್ನು ತಿದ್ದುಪಡಿ ಮಾಡಲು ರಾಷ್ಟ್ರೀಯ ಬೆನಾಮಿ ವಿರೋಧಿ ಯೋಜನಾ ಸಮಿತಿ ಮುಂದಾಗಿದೆ ಎಂದು ಸಮಿತಿ ಕಾರ್ಯದರ್ಶಿ ಜನರಲ್ ಸಲ್ಮಾನ್ ಅಲ್ ಹಿಜಾರ್ ವ್ಯಕ್ತಪಡಿಸಿದ್ದಾರೆ.
ವಿದೇಶೀಯರು ವಾಣಿಜ್ಯ ಅವ್ಯವಹಾರ ಮೂಲಕ ತಮ್ಮ ಒಡೆತನದಲ್ಲಿರಿಸಿರುವ ವ್ಯಾಪಾರ ವಲಯಗಳಿಗೆ ಸ್ಥಳೀಯ ಜನರಿಗೆ ಪ್ರವೇಶಿಸಲು ಸರಕಾರವು ಖಾಸಗಿ ವಲಯದ ಸಹಾಯವನ್ನು ಪಡೆಯಲಿದೆ ಎಂದು ಅವರು ಹೇಳಿದರು.
ಪೂರ್ವ-ಪ್ರಾದೇಶಿಕ ಛೇಂಬರ್ನಲ್ಲಿ ನಡೆದ ಸಭೆಯಲ್ಲಿ ಅಲ್-ಹಿಜಾರ್ ಮಾತನಾಡಿ, ಬ್ಯಾಂಕುಗಳ ಸಹಯೋಗದೊಂದಿಗೆ ಸಣ್ಣ ಮತ್ತು ಸೂಕ್ಷ್ಮ ಚಿಲ್ಲರೆ ಯೋಜನೆಗಳ ಜಾರಿಗೆ ಸಹಾಯಧನ ಸ್ವರೂಪಿಸಲು ಈ ಕಾರ್ಯಕ್ರಮ ಸಹಾಯ ಮಾಡಲಿದೆ ಎಂದರು.
ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯ ಮತ್ತು ಸೌದಿ ಹಣಕಾಸು ಪ್ರಾಧಿಕಾರದ ಸಹಕಾರದೊಂದಿಗೆ, ಎಲೆಕ್ಟ್ರಾನಿಕ್ ಬಿಲ್‌ಗಳನ್ನು ವಿತರಿಸಲು ಮತ್ತು ಅಂಗಡಿಗಳಲ್ಲಿ ಬಿಲ್ಲಿಂಗ್ ವ್ಯವಸ್ಥೆ ರೂಪಿಸಲು ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲು ಆದೇಶಿಸಿ,ಎಲ್ಲಾ ಬಖಾಲಾ ಮತ್ತು ಸಮಾನ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ.
ಸಣ್ಣಪುಟ್ಟ ವ್ಯಾಪಾರಿ ವಲಯದ ಪಾರದರ್ಶಕತೆ ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸಲು ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯದ ಸಹಯೋಗದೊಂದಿಗೆ ಆಧುನಿಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುವಂತೆ ತಿಳಿಸಲಾಗುವುದು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ಅಲ್-ಹಿಜಾರ್ ಅವರು ಈ ಬಗ್ಗೆ ಮಾತನಾಡಿ, ಹೊಸ ಪ್ರಸ್ತಾವಗಳ ಕರಡನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ಶೂರಾ ಮಂಡಳಿಗೆ ಮಂಡಿಸಲಾಗುವುದು ಎಂದು ಹೇಳಿದರು.