ದಮ್ಮಾಮ್ : ನೇರ ನಡೆನುಡಿಯ, ನಿಷ್ಕಲಂಕ ವ್ಯಕಿತ್ವದ, ಅನಾಥರ ದುರ್ಬಲರ ಬಾಳಿಗೆ ಬೆಳಕಾಗಿದ್ದ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮರಣವು ಪ್ರಪಂಚದ ಮರಣ ಎಂದು ಝೈನುಲ್ ಅಬೀದೀನ್ ಝುಹರಿ ಹೇಳಿದರು.

ಅವರು ಅಲ್ ಮದೀನಾ ಸೌದಿ ರಾಷ್ಟ್ರೀ ಯ ಸಮಿತಿಯು ದಮ್ಮಾಮ್ ಹೊಲಿಡೇಸ್ ಹೋಟೆಲ್ ನಲ್ಲಿ ಹಮ್ಮಿಕೊಂಡ ಅನುಸ್ಮರಣೆ ಸಭೆಯಲ್ಲಿ ಮಾತನಾಡಿದರು.
ಸಭೆಯ ಉದ್ಘಾಟನೆಯನ್ನು ಕೆಸಿಎಫ್ ಸೌದಿ ರಾಷ್ಟ್ರೀ ಯ ಸಮಿತಿ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಬೈತಾರ್ ನಿರ್ವಹಿಸಿ, ಉಸ್ತಾದರ ಸ್ವಭಾವ, ಕೆಸಿಎಫ್ ನೊಂದಿಗಿನ ನಂಟು, ಮಂಜನಾಡಿ ಪರಿಸರ ಇವತ್ತು ಸಮನ್ವಯ ಶಿಕ್ಷಣದ ಮಹಾ ಸಮುಚ್ಚಯವಾಗಿ ಮಾರ್ಪಡಲು ಶ್ಯೆಖುನಾ ಶರಫುಲ್ ಉಲಮಾರ ಅವಿರತ ಪರಿಶ್ರಮದ ಬಗ್ಗೆ ವಿವರಿಸಿ ಇದಕ್ಕೆ ನಾವೆಲ್ಲರೂ ಕೈಜೋಡಿಸಿ ಸಹಕರಿಸಬೇಕುಂದು ಕರೆಯಿತ್ತರು.

ಸಭೆಯ ಅಧ್ಯಕ್ಷತೆಯನ್ನು ಅಲ್ ಮದೀನಾ ಸೌದಿ ರಾಷ್ಟ್ರೀ ಯ ಸಮಿತಿಯ ಅಧ್ಯಕ್ಷರಾದ ಎನ್ ಎಸ್ ಅಬ್ದುಲ್ಲಾ ಮಂಜನಾಡಿ ವಹಿಸಿ, ಅಲ್ ಮದೀನಕ್ಕಾಗಿ ಪ್ರಾರಂಭ ಘಟ್ಟದಲ್ಲಿ ಕಷ್ಟಪಟ್ಟ ಅನು ಭವಗಳನ್ನು ಉಲ್ಲೇಖಿಸಿ ಬಹಳ ದುಃಖ ತೃಪ್ತರಾಗಿ ವಿವರಿಸುತ್ತಾ ನಿಜಕ್ಕೂ ಉಸ್ತಾದರು ದ್ವಿಲೋಕದಲ್ಲೂ ವಿಜಯದ ಸಾಲಿನಲ್ಲಿ ಸೇರಿದ್ದಾರೆ. ನಾವು ಕೂಡಾ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಅಲ್ಲಾಹನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಸಭೆಯಲ್ಲಿ ಅಲ್ ಕೋಬರ್ ಘಟಕದ ಸ್ಥಾಪಕಾಧ್ಯಕ್ಷ ಬಹು ಅಬ್ದುಲ್ಲಾ ಫೈಝಿ ದುವಾ ಮಾಡಿದರು.ಉಸ್ತಾದರ ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಸೌದಿ ಪರ್ಯಟನೆಯ ಸಮಯದಲ್ಲಿ ನಡೆದ ಅನುಭವಗಳನ್ನು ಎಳೆಎಳೆಯಾಗಿ ವಿವರಿಸುತ್ತಾ ಆಗಮಿಸಿದ ಗಣ್ಯರನ್ನು ರಾಷ್ಟ್ರೀ ಯ ಸಮಿತಿ ಪ್ರ. ಕಾರ್ಯದರ್ಶಿ ಎಂ ಜಿ ಇಕ್ಬಾಲ್ ಮಲ್ಲೂರು ಸ್ವಾಗತಿಸಿದರು.

ದಮ್ಮಾಮ್ ಐಸಿಎಫ್ ದಾಯಿ ಝೈದ್ ಸಖಾಫಿ ,ದಮ್ಮಾಮ್ ಘಟಕಾಧ್ಯಕ್ಷ ಅಝೀಝ್ ಮುಸ್ಲಿಯಾರ್ ಕುತ್ತಾರ್ ,ಇಕ್ಬಾ ಲ್ ಕ್ಯೆರಂಗಳ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಸಫ್ವಾನ್ ತಂಙಳ್, ರಾಷ್ಟ್ರೀ ಯ ಸಮಿತಿ ಸಲಹೆಗಾರರಾದ ಟಿ ಎಚ್ ಬಷೀರ್ ತೋಟಾಲ್, ರಾಷ್ಟ್ರೀಯ ಸಮಿತಿ ಜೊತೆ ಕಾರ್ಯದರ್ಶಿ ಉಸ್ಮಾನ್ ಮಂಜನಾಡಿ, ಅಲ್ ಕೊಬಾರ್ ಘಟಾಕಾಧ್ಯಕ್ಷ ಮಹಮ್ಮದ್ ಮಲೆಬೆಟ್ಟು, ಮಾಜಿ ಅಧ್ಯಕ್ಷ ಕಾಸಿಂ ಅಡ್ಡೂರು, ರಯಿಸ್ಕೊ ಚೇರ್ಮಾನ್ ಅಬೂಬಕ್ಕರ್ ಉಪಸ್ಥಿತರಿದ್ದರು.ಬಹಳಷ್ಟು ಅಭಿಮಾನಿಗಳು ಭಾಗವಹಿಸಿ ಮಯ್ಯತ್ ನಮಾಝ್ ನಿರ್ವಹಿಸಿದರು. ಕೊನೆಯಲ್ಲಿ ಓರ್ಗನೈಸರ್ ಹೈದರ್ ನಈಮಿ ಧನ್ಯವಾದ ಸಲ್ಲಿಸಿದರು.






