janadhvani

Kannada Online News Paper

ಉನ್ನಾವ್‌ ಸಂತ್ರಸ್ತೆಗೆ ಬೆದರಿಕೆ- ನಾಳೆ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ

ನವದೆಹಲಿ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿಗೆ ಬರೆದೆ ಪತ್ರದ ಕುರಿತು ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆಯನ್ನು ಗುರುವಾರ ನಡೆಸುವ ಸಾಧ್ಯತೆ ಇದೆ.

ನನಗೆ ಬೆದರಿಕೆಯೊಡ್ಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಕೆಲವು ಜನರು ನನ್ನ ಮನೆಗೆ ಬಂದು ಪ್ರಕರಣ ವಾಪಸ್ ಪಡೆಯಿರಿ. ಇಲ್ಲದಿದ್ದರೆ ಸುಳ್ಳು ಪ್ರಕರಣ ದಾಖಲಿಸಿ ಇಡೀ ಕುಟುಂಬವನ್ನು ಜೈಲಿಗೆ ಹಾಕುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು’ ಎಂದು ಸಂತ್ರಸ್ತೆ ಜುಲೈ 12ರಂದು ಪತ್ರ ಬರೆದಿದ್ದರು.

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಜುಲೈ 28, ಭಾನುವಾರದಂದು ಅಪಘಾತಕ್ಕೀಡಾಗಿತ್ತು. ಸಂತ್ರಸ್ತೆಯನ್ನು ಹತ್ಯೆಗೈಯ್ಯಲು ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್ ನಡೆಸಿದ ಸಂಚು ಇದು ಎಂದು ಸಂತ್ರಸ್ತೆಯ ಅಮ್ಮ ದೂರಿದ್ದರು.ಅಪಘಾತ ಸಂಭವಿಸುವುದಕ್ಕಿಂತ ಕೆಲವು ದಿನಗಳ ಹಿಂದೆ ತನ್ನ ಮನೆಗೆ ಕೆಲವು ಜನರು ಬಂದು ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ತೆ ಪತ್ರದಲ್ಲಿ ಬರೆದಿದ್ದಾರೆ.

‘ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರವೇ ಪತ್ರದ ಬಗ್ಗೆ ಮಾಹಿತಿ ತಿಳಿದಿದ್ದು, ಪತ್ರ ನನಗೆ ತಲುಪಿರಲಿಲ್ಲ’ ಎಂದು ಸಿಜೆಐ ಗೊಗೊಯ್‌ ಹೇಳಿದ್ದಾರೆ.