janadhvani

Kannada Online News Paper

ಯುಎಇ: ಆಶ್ರಿತ ವಿಸಾದಲ್ಲಿರುವ ಪುರುಷರಿಗೆ ಕೆಲಸ ಮಾಡಲು ಅನುಮತಿ

ಅಬುಧಾಬಿ: ಯುಎಇಯಲ್ಲಿ ಆಶ್ರಿತ ವಿಸಾದಲ್ಲಿ ವಾಸವಿರುವ ಪುರುಷರಿಗೆ ಕಾರ್ಮಿಕ ವಿಸಾಗೆ ಪರಿವರ್ತನೆಗೊಲ್ಲದೆ ಕೆಲಸ ಮಾಡಲು ಮಾನವಾಭಿವೃದ್ದಿ, ಸ್ವದೇಶೀಕರಣ ಸಚಿವಾಲಯ ಅನುಮತಿ ನೀಡಿದೆ. ಕೆಲಸದ ಪರವಾನಗಿ ಅನುಮತಿಸುವುದರ ಭಾಗವಾಗಿ ಮಾನವಾಭಿವೃದ್ದಿ, ಸ್ವದೇಶೀಕರಣ ಖಾತೆ ಸಚಿವ ನಾಸಿರ್ ಬಿನ್ ತಾನಿ ಅಲ್ ಹಮಾಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಹಿಂದೆ ಆಶ್ರಿತ ವಿಸಾದಲ್ಲಿರುವ ಮಹಿಳೆಯರಿಗೆ ಮಾತ್ರ ಕೆಲಸ ಮಾಡುವ ಅವಕಾಶ ನೀಡಲಾಗಿತ್ತು.

ಕುಟುಂಬಗಳಿಗೆ ಒಳ್ಳೆಯ ಜೀವನ ವ್ಯವಸ್ಥೆ, ಉತ್ತಮ ಆದಾಯವನ್ನು ಖಾತರಿಪಡಿಸುವ ಸಲುವಾಗಿ ಈ ನಡೆ ಎಂದು ಸಂಭಂದಿಸಿದ ಖಾತೆಯ ಅಂಡರ್ ಸೆಕ್ರೆಟರಿ ಸೈಫ್ ಅಹ್ಮದ್ ಅಲ್ ಸುವೈದಿ ಹೇಳಿದ್ದಾರೆ. ಸಚಿವಾಲಯದ ತೀರ್ಮಾನದಂತೆ ಎಲ್ಲಾ ವಲಯಗಳಲ್ಲಿನ ಪರಿಣಿತ ಕಾರ್ಮಿಕರ ಎರಡು ವರ್ಷಗಳ ಕೆಲಸ ಪರವಾನಗಿಗೆ 300 ದಿರ್ಹಮ್ (ಸುಮಾರು 5624 ರೂ.) ದರ ನಿಗದಿಪಡಿಸಲಾಗಿದ್ದು, ಈ ದರವನ್ನು ಉದ್ಯೋಗದಾತ ಪಾವತಿಸಬೇಕಾಗುತ್ತದೆ. ಜುಲೈ ಪ್ರಥಮ ವಾರದಲ್ಲಿ ಕಾರ್ಮಿಕ ಪರವಾನಗಿ ದರವನ್ನು 50ರಿಂದ ಶೇ.90ರ ವರೆಗೆ ಕಡಿತಗೊಳಿಸಿ ಸಚಿವಾಲಯ ಅದೇಶ ಹೊರಡಿಸಿತ್ತು.

error: Content is protected !! Not allowed copy content from janadhvani.com