janadhvani

Kannada Online News Paper

ಮಕ್ಕಾದಲ್ಲಿ ಹಜ್ಜಾಜಿಗಳಿಗೆ KCF ವತಿಯಿಂದ ಹಜ್ಜ್ ತರಗತಿ

ಮಕ್ಕಾ: ಕೆಸಿಎಫ್ HVC 2019 ಇದರ ವತಿಯಿಂದ ಮಕ್ಕತುಲ್ ಮುಕರ್ರಮದ ಅಝೀಝಿಯ ಬಿಲ್ಡಿಂಗ್ ನಂಬರ್ 125 ಹಾಗೂ 169 ರಲ್ಲಿ ಮಂಗಳೂರಿನಿಂದ ಬಂದ ಹಜ್ಜಾಜಿಗಳಿಗೆ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉಸ್ತಾದರ ನೇತೃತ್ವದಲ್ಲಿ ಹಜ್ಜ್ ತರಗತಿ ನಡೆಯಿತು.

ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ದುಆ ನಡೆಸಿ ಉದ್ಘಾಟಿಸಿದರು ಮಕ್ಕತುಲ್ ಮುಕರ್ರಮಃ HVC ಕ್ಯಾಪ್ಟನ್ ಮೂಸ ಹಾಜಿ ಕಿನ್ಯ ಸ್ವಾಗತಿಸಿ, KCF ಜಿದ್ದಾ ಝೋನ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಿನ್ಯ ದನ್ಯವಾದ ಸಲ್ಲಿಸಿದರು. ಈ ಸಂದರ್ಭ ಇಂಡಿಯನ್ ಹಜ್ ಕಮಿಟಿ ವೆಲ್ಫೇರ್ ಸರ್ವಿಸ್ ನೇತಾರರಾದ ಖಾಸಿಮ್ ಹಾಜಿ ಹಾಗೂ ಮಕ್ಕಾ ಎಚ್.ವಿ.ಸಿ ವೈಸ್ ಕ್ಯಾಪ್ಟನ್ ಬಶೀರ್ ಕೆಜೆಕಾರ್ ಮತ್ತು ಮೊದಲಾದವರು ಉಪಸ್ಥಿತರಿದ್ದರು.