janadhvani

Kannada Online News Paper

ಸೌದಿ ಅರೇಬಿಯಾ: ಸ್ವದೇಶೀಕರಣವನ್ನು ಇತರ ಪ್ರಮುಖ ವಲಯಗಳಿಗೂ ವಿಸ್ತರಿಸಲು ಚಿಂತನೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಜಾರಿಗೆ ತರಲಾದ ಸ್ವದೇಶೀಕರಣವನ್ನು ಇತರ ಪ್ರಮುಖ ವಲಯಗಳಿಗೂ ವಿಸ್ತರಿಸುವ ಸೂಚನೆಯನ್ನು ಅಲ್ಲಿನ ಕಾರ್ಮಿಕ, ಸಾರ್ವಜನಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್ ರಾಹ್ಜಿ ನೀಡಿದ್ದಾರೆ. ದೇಶದಲ್ಲಿನ ಉನ್ನತ ಹುದ್ದೆಗಳಿಗೆ ಮತ್ತು ವಿಶೇಷ ಹುದ್ದೆಗಳಿಗೆ ಸ್ವದೇಶೀಯರನ್ನು ನೇಮಕಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಮೂಲಕ ಅಲ್ಲಿನ ಉನ್ನತ ವಿದ್ಯಾಭ್ಯಾಸ ಹೊಂದಿರುವ ಯುವಕ ಯುವತಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಲಭ್ಯವಾಗುವಂತೆ ಶ್ರಮ ವಹಿಸಲಾಗುವುದು ಎಂದವರು ತಿಳಿಸಿದ್ದಾರೆ.

ಸ್ವದೇಶೀಕರಣವನ್ನು ಮೊಟಕುಗೊಳಿಸುವ ಯಾವುದೇ ಕಾನೂನು ಉಲ್ಲಂಘನೆಗಳನ್ನು ಅಂಗೀಕರಿಸಲಾಗದು ಎಂದು ಸಚಿವರು ವ್ಯಕ್ತ ಪಡಿಸಿದ್ದಾರೆ. ಸೌದಿಯ ಯುವತಿ-ಯವಕರು ಉನ್ನತ ವಿದ್ಯಾಭ್ಯಾಸ ಹೊಂದಿದವರಾಗಿದ್ದಾರೆ. ಅವರಿಗೆ ಬೇಕಾದಷ್ಟು ಹುದ್ದೆಗಳನ್ನು ಲಭ್ಯಗೊಳಿಸುವುದು ಸಚಿವಾಲಯದ ಉದ್ದೇಶವಾಗಿದೆ. ಅದಕ್ಕಾಗಿ ಉನ್ನತ ಹುದ್ದೆಗಳು, ವಿಶೇಷ ಹುದ್ದೆಗಳ ಶ್ರಮ ಮುಂದುವರೆದಿದ್ದು, ಅದಕ್ಕಾಗಿ ಯೋಜಿಸಲಾದ ಯೋಜನೆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.