ಮಂಗಳೂರು.ಜು,3: ನಿನ್ನೆ ಮಂಜನಾಡಿ ಅಲ್ ಮದೀನ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಮಾತ್ರ ಕುಳಿತಿದ್ದ ಆಟೊ ರಿಕ್ಷಾವೂಂದು ಇದ್ದಕ್ಕಿದ್ದಂತೆ ಡ್ರೈವರ್ ಇಲ್ಲದೆ ಸ್ವಯಂಚಾಲಿತವಾಗಿ ಮುಂದೆ ಸಾಗುವುದನ್ನು ಗಮನಿಸಿದ ಇಕ್ಬಾಲ್ ಮರ್ಝೂಖಿ ಸಖಾಫಿ ಉಸ್ತಾದರು ತನ್ನ ಪ್ರಾಣವನ್ನು ಒತ್ತೆಯಿಟ್ಟು ಆಟೊ ರಿಕ್ಷಾವನ್ನು ಬೆಂಬತ್ತಿ ಎರಡು ಮುಗ್ದ ಜೀವಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ಅದರ ಸಿಸಿಟಿವಿ ದೃಶ್ಯದ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಕ್ಬಾಲ್ ಮರ್ಝೂಖಿ ಸಖಾಫಿ ಉಸ್ತಾದರ ಸಮಯ ಪ್ರಜ್ಞೆ ಧೈರ್ಯ ಸಾಹಸವನ್ನು ಮೆಚ್ಚಲೇಬೇಕು. ಯಾಕೆಂದರೆ ಮೂರು ಚಕ್ರದ ವಾಹನವೊಂದು ಅಷ್ಟು ವೇಗವಾಗಿ ಚಲಿಸುತ್ತಿರುವಾಗ. ಅದನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅವರು ಅಟೋರಿಕ್ಷಾದ ಹ್ಯಾಂಡಲನ್ನು ಸಮಯಪ್ರಜ್ಞೆಯಿಂದ ನಿಯಂತ್ರಿಸುತ್ತಿರದಿದ್ದರೆ ಅವರ ಮೇಲೆಯೇ ಅಟೋ ಬೀಳುವ ಸಂಭವವಿತ್ತು. ಆದರೂ ಅದನ್ನೆಲ್ಲಾ ಮೀರೀ ತನ್ನ ಪ್ರಾಣವನ್ನೆ ಒತ್ತೆಯಿಟ್ಟು ಎರಡು ಮುಗ್ದ ಜೀವಗಳನ್ನು ರಕ್ಷಿಸಿದ ಉಸ್ತಾದರಿಗೊಂದು ಬಿಗ್ ಸೆಲ್ಯೂಟ್.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ