janadhvani

Kannada Online News Paper

ಸಂಸ್ಕಾರ ಶಿಕ್ಷಣದಿಂದ ಬಲಿಷ್ಠ ಸಮಾಜ -ನ್ಯೂಬಿ ಪ್ರಿ ಸ್ಕೂಲ್ ಉದ್ಘಾಟನೆಯಲ್ಲಿ ಕೆ.ಎಂ.ಮುಸ್ತಫ

ಸುಳ್ಯ: ಧಾರ್ಮಿಕ ತಳಹದಿಯ ಸಂಸ್ಕಾರದಿಂದ ಕೂಡಿದ ಆಧುನಿಕ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳ ಸರ್ವತೋನ್ಮುಖ ಬೆಳವಣಿಗೆಗೆ ಪೂರಕ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫ ಹೇಳಿದರು.

ಸುಳ್ಯದ ಪರಿವಾರಕಾನದ ‘ಗ್ರಾಂಡ್ ಪರಿವಾರ್’ ಕಾಂಪ್ಲೆಕ್ಸ್‍ನಲ್ಲಿ ಆಧುನಿಕ ಪರಿಕಲ್ಪನೆಯ ನ್ಯೂಬಿ ಪ್ರಿ ಸ್ಕೂಲ್‍ನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಏರ್ಪಡಿಸಲಾದ ‘ಎಜು ಎಕ್ಸ್‍ಪೋ 2019’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಾಲಾ ಪ್ರಾರಂಭೋತ್ಸವ ‘ಇಖ್ರಾ ಡೇ’ ಗೆ ಅನ್ಸಾರಿಯಾ ಖತೀಬರಾದ ಬಹು| ಉಮ್ಮರ್ ಮುಸ್ಲಿಯಾರ್ ಮರ್ದಾಳ ಚಾಲನೆ ನೀಡಿದರು. ಪ್ರಾರಂಭದಲ್ಲಿ ಅಸ್ಸೈಯದ್ ತಾಹಿರ್ ಸಅದಿ ತಂಙಳ್‍ರವರು ದುಆಃ ನೆರವೇರಿಸಿದರು. ಪ್ರಾಸ್ತಾವಿಕವಾಗಿ ನೌಫಲ್ ಬೆಳ್ತಂಗಡಿ ಮಾತನಾಡಿ 3 ವರ್ಷದ ಈ ಕೋರ್ಸಿನಲ್ಲಿ 2 ವರ್ಷ 10 ತಿಂಗಳ ಮಗುವಿಗೆ ಪ್ರವೇಶ ಕಲ್ಪಿಸಿ ಸುಲಲಿತವಾಗಿ ಇಂಗ್ಲೀಷ್ ಅಧ್ಯಯನ ಮತ್ತು ವಿದ್ಯಾರ್ಥಿಗಳನ್ನು ವ್ಯಕ್ತಿತ್ವ ವಿಕಸನದ ಮೂಲಕ ಸವ್ಯ ಸಾಚಿಯಾಗಿ ಬೆಳೆಸಲಾಗುವುದು. ವಿದ್ಯಾರ್ಥಿಗಳ ಜೊತೆ ಪೋಷಕರಿಗೂ ತರಬೇತಿ ನೀಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಪುತ್ತೂರಿನ ಯುವ ನ್ಯಾಯವಾದಿ ಶಾಕಿರ್, ನಗರ ಪಂಚಾಯತ್ ಸದಸ್ಯರುಗಳಾದ ಬಿ. ಉಮ್ಮರ್, ಶರೀಫ್ ಕಂಠಿ, ಸುಳ್ಯದ ಧುರೀಣರುಗಳಾದ ಸಮದ್ ಹಾಜಿ ಖಲೀದಿಯಾ ಮೊಗರ್ಪಣೆ, ಹಾಜಿ ಪಿ.ಎ. ಮಹಮ್ಮದ್, ಹಾಜಿ ಐ. ಇಸ್ಮಾಯಿಲ್, ಹಾಜಿ ಅಬ್ದುಲ್ ಮಜೀದ್ ಜನತ, ಹಸೈನಾರ್ ಹಾಜಿ ಗೋರಡ್ಕ, ಹಮೀದ್ ಬೀಜಕೊಚ್ಚಿ, ಅಬ್ದುರ್ರಹ್ಮಾನ್ ಮೊಗರ್ಪಣೆ ಮೊದಲಾದವರು ಭಾಗವಹಿಸಿದ್ದರು. ಕಾಂಪ್ಲೆಕ್ಸ್ ನ ಪಾಕುದಾರರುಗಳಾದ ಎಂ. ಕೆ. ಅಬ್ದುಲ್ ಲತೀಫ್, ಇಬ್ರಾಹಿಂ ಕತ್ತರ್ ಮಂಡೆಕೋಲು ಉಪಸ್ಥಿತರಿದ್ದರು.
ಶಾಲಾ ಪ್ರವರ್ತಕರುಗಳಾದ ರಾಫಿ ಸ್ವಾಗತಿಸಿ ಶಫೀಕ್ ಈಶ್ವರಮಂಗಲ ವಂದಿಸಿದರು.

error: Content is protected !! Not allowed copy content from janadhvani.com