janadhvani

Kannada Online News Paper

ನೂರುಲ್ ಉಲಮಾ ಮದ್ರಸ ಕಿನ್ಯ: ಫತ್’ಹೇ ಮುಬಾರಕ್ ಸಂಭ್ರಮ

ಮಂಗಳೂರು : ನೂರುಲ್ ಉಲಮಾ ಮದ್ರಸ , ಬದ್ರಿಯಾ ನಗರ ಕಿನ್ಯ , ಸುಮಾರು 45 ದಿನಗಳ ರಮಳಾನ್ ರಜೆಯ ಬಳಿಕ ಜೂನ್ 14 ರಂದು ಮದರಸವು ಪುನರಾರಂಭ ಗೊಂಡಿತು.

ಬುಖಾರಿ ಜುಮಾ ಮಸೀದಿ ಆಡಳಿತ ಸಮಿತಿಯ ಸಹಭಾಗಿತ್ವದಲ್ಲಿ ಮದರಸ ಅಧ್ಯಾಪಕರ ಪೂರ್ವ ಸಿದ್ಧತೆಗಳೊಂದಿಗೆ ಬಹಳ ವಿಜೃಂಭಣೆಯೂಂದಿಗೆ ಕಾರ್ಯಕ್ರಮವು ಜರುಗಿತು.

ಆಡಳಿತ ಸಮಿತಿಯ ಅಧ್ಯಕ್ಷರಾದ ಸುರಿಬೈಲು ಮುಹಮ್ಮದಾಲಿ ಸಖಾಫಿಯವರು ಅಧ್ಯಕ್ಷತೆ ವಹಿಸಿ , ಮಕ್ಕಳ ಭವಿಷ್ಯತ್ತಿನ ಕುರಿತು ಹಿತವಚನ ನೀಡಿದರು. ನೂರುಲ್ ಉಲಮಾ ಮದ್ರಸ ಸದರ್ ಉಸ್ತಾದ್ ಶೌಕತ್ ಅಲೀ ಸಖಾಫಿ ಸ್ವಾಗತಿಸಿ , ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿಯವರು ಸಭೆಯನ್ನು ಉದ್ಘಾಟಿಸಿದರು.

ಉಜಿರೆ ಮಲ್ಜಹ್ ಸಂಸ್ಥೆಯ ವ್ಯವಸ್ಥಾಪಕ ಮಹ್ಬೂಬ್ ಸಖಾಫಿ ಹಾಗೂ ಸಅದಿಯಾ ಫೌಂಡೇಶನ್ ಇದರ ಮುಖ್ಯಸ್ಥ ಕೆ.ಎಚ್. ಇಸ್ಮಾಯಿಲ್ ಸಅದಿ ಬೆಂಗಳೂರು ಮಾತನಾಡಿದರು.

ಸಮಿತಿಯ ಕಾರ್ಯದರ್ಶಿ ಹಾಜಿ ಅಬ್ಬಾಸ್ ನಾಟೆಕಲ್, ಉಪಾಧ್ಯಕ್ಷರಾದ ಮೂಸ ಕುಂಞ , ಮದ್ರಸ ಅಧ್ಯಾಪಕರಾದ ಅಬೂ ತ್ವಾಹಿರ ಯು. ಎಚ್. ಹೈದರ್ ಮುಸ್ಲಿಯಾರ್ ಉಜಿರೆ ಬೆಟ್ಟು, ಇರ್ಷಾದ್ ಮುಸ್ಲಿಯಾರ್ ಬೋಳಿಯಾರ್ , MKM. ಇಸ್ಮಾಯಿಲ್ ಅಧ್ಯಕ್ಷರು SMA ರೀಜನಲ್ ದೇರಳಕಟ್ಟೆ ಹಾಗೂ ವಿದ್ಯಾರ್ಥಿಗಳ ರಕ್ಷಕರು ಉಪಸ್ಥಿತರಿದ್ದರು.

ಪ್ರಸಕ್ತ ಸಾಲಿನ ಪ್ರಥಮ ದಾಖಲೆಯ ಪತ್ರವನ್ನು ಉಮರ್ ಝುಹ್ರಿ ಯವರಿಗೆ ನೀಡುವುದರ ಮೂಲಕ ಈ ವರ್ಷದ ಸೇರ್ಪಡೆಗೆ ಚಾಲನೆ ನೀಡಲಾಯಿತು.

ಮಕ್ಕಳು ಹೊಸ ಹುರುಪಿನೊಂದಿಗೆ ಮದರಸಕ್ಕೆ ಆಗಮಿಸಿದ್ದು ,ಸಭಾ ನಾಯಕರು ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳು ” ತ್ವಾಲಅಲ್ ಬದುರು ಆಲೈನಾ ” ಹಾಡಿನೊಂದಿಗೆ ಬರಮಾಡಿ ಕೊಂಡರು.

error: Content is protected !! Not allowed copy content from janadhvani.com