ವಿಟ್ಲ .ಜೂನ್,15: ಕೊಡಂಗಾಯಿ ಸುನ್ನೀ ಸೆಂಟರ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಮದ್ರಸತುಲ್ ಖಳ್’ರಿಯ್ಯಾ “ಫತ್’ಹೇ ಮುಬಾರಕ್” (ಮದ್ರಸ ಪ್ರಾರಂಭೊತ್ಸವ) ಕಾರ್ಯಕ್ರಮವು ಇಂದು ಬೆಳಿಗ್ಗೆ ನಡೆಯಿತು.
ದಾರುನ್ನಜಾತ್ ಎಜುಕೇಷನ್ ಸೆಂಟರ್ ಟಿಪ್ಪು ನಗರ ಇದರ ಅಧ್ಯಕ್ಷರೂ ಸೂಫಿವರ್ಯರೂ ಆದ ಪಿ.ಕೆ ಅಬೂಬಕರ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಟಿಪ್ಪು ನಗರ ದಾರುನ್ನಜಾತ್ ಮುದರ್ರಿಸ್ ಮಹಮ್ಮದ್ ಅಲ್ ಪಾಳಿಲಿ ಅಲ್ ಕಾಮಿಲ್ ಸಖಾಫಿ ಅವರು ,ಮದ್ರಸ ಪ್ರಸ್ತಾನದ ಶಿಲ್ಪಿ ಶೈಖುನಾ ನೂರುಲ್ ಉಲಮಾ ಎಂ.ಎ. ಉಸ್ತಾದರು ಧಾರ್ಮಿಕ ಶಿಕ್ಷಣಕ್ಕಾಗಿ ಮಾಡಿದ ಕ್ರಾಂತಿಯ ಬಗ್ಗೆ ಸ್ಮರಿಸುತ್ತಾ ಸಭೆಯನ್ನು ಉದ್ಘಾಟಿಸಿ ಭಾಷಣ ಮಾಡಿದರು.
ಕೊಡಂಗಾಯಿ ಸುನ್ನಿ ಸೆಂಟರ್ ಅಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಅವರು, ಜಗತ್ತಿನಲ್ಲಿ ಅತೀ ಹೆಚ್ಚು ಶೈಕ್ಷಣಿಕ ಕ್ರಾಂತಿಯನ್ನು ಸೃಷ್ಟಿಸಿದ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾದ ಪಠ್ಯ ಪದ್ಧತಿಯ ಮದ್ರಸ ದಾಖಲಾತಿ ಪಾರಂನ್ನು SSF ಕೊಡಂಗಾಯಿ ಶಾಖೆಯ ಉಪಾಧ್ಯಕ್ಷರಾದ ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿಯವರಿಗೆ ವಿತರಿಸುವ ಮೂಲಕ ಮದ್ರಸ ಪ್ರಾರಂಭೊತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ SჄS ಕೊಡಂಗಾಯಿ ಬ್ರಾಂಚ್ ಉಪಾಧ್ಯಕ್ಷರಾದ ಸಿ.ಹೆಚ್. ಮಹ್ಮೂದ್ ಮುಸ್ಲಿಯಾರ್, ಸುನ್ನಿ ಸೆಂಟರ್ ಕೊಡಂಗಾಯಿ ಉಪಾಧ್ಯಕ್ಷರಾದ ಸಿ.ಹೆಚ್.ಉಮರ್ ಮುಸ್ಲಿಯಾರ್, ಕೆಸಿಎಫ್ ಕಾರ್ಯಕರ್ತರಾದ ಸುಲೈಮಾನ್ ಹಾಜಿ ಜಾರ ಸಹಿತ ಹಲವಾರು ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಲ್ ಮದರಸತುಲ್ ಖಿಲ್’ರಿಯ್ಯಾ ಕೊಡಂಗಾಯಿ ಅದ್ಯಾಪಕರಾದ ಅಬ್ಬಾಸ್ ಮದನಿ ಉಸ್ತಾದ್ ಸ್ವಾಗತಿಸಿದರು. ಕೊನೆಯಲ್ಲಿ SSF ಕೊಡಂಗಾಯಿ ಶಾಖೆ ಮಾಜಿ ಕಾರ್ಯದರ್ಶಿ ಎಂ.ಕೆ.ಮುಹಮ್ಮದ್ ತಮೀಮ್ ವಂದಿಸಿದರು.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ