✍#ಸ್ನೇಹಜೀವಿ ಅಡ್ಕ
ರಂಝಾನ್ ತಿಂಗಳು ಆಗಮಿಸುವಾಗ ಬಹುತೇಕರು ರಂಝಾನ್ ಕಿಟ್ ಕೊಡುವುದರಲ್ಲೇ ಬ್ಯುಝಿಯಾಗಿರುತ್ತಾರೆ. ಇದು ಉತ್ತಮವಾದ ಕಾರ್ಯವೇ.
ಆದರೆ ಆ ರಂಝಾನ್ ಕಿಟ್ ಬಹುತೇಕವಾಗಿ ಸಿಗುವುದು ಇಲ್ಲಿನ ಬಡ ಕುಟುಂಬಗಳಿಗೆ ಆಗಿರುತ್ತದೆ. ಬಡ ಕುಟುಂಬಗಳಿಗೆ ರಂಝಾನ್ ಕಿಟ್ ಕೊಡುವುದೂ ಒಳ್ಳೆಯದೇ. ಕೆಲವೊಂದು ಕುಟುಂಬಗಳಿಗೆ ಸಿಗುವ ರಂಝಾನ್ ಕಿಟ್ ಗಳ ಸಂಖ್ಯೆ ಹತ್ತರಿಂದ ಇಪ್ಪತ್ತರಷ್ಟು ಆಗಿರುತ್ತದೆ. ಆ ರಂಝಾನ್ ಕಿಟ್ ನಲ್ಲಿ ಸಿಗುವ ಕೆಲವೊಂದು ವಸ್ತುಗಳು ರಂಝಾನ್ ಮುಗಿಯುವುದೊರಳಗೆ ಕೆಟ್ಟು ಹೋಗುವ ಸಾಧ್ಯತೆ ಇರುವುದರಿಂದ ಅದು ದುರುಪಯೋಗ ಆಗುವ ಸಾಧ್ಯತೆನೇ ಹೆಚ್ಚು.
ಮುಸ್ಲಿಂ ಸಮುದಾಯದ ಮಧ್ಯಮ ವರ್ಗದ ಕುಟುಂಬಗಳು ಇಲ್ಲಿ ಶ್ರೀಮಂತ ವರ್ಗಕ್ಕಿಂತಲೂ ಬಡತನದಲ್ಲಿ ಜೀವಿಸುವ ಅದೆಷ್ಟೋ ಮನೆಗಳಿಗೆ.
ಮಗಳಿಗೆ ಮದುವೆ ಮಾಡಿದ ಸಾಲ, ಮನೆಗೆ ರೇಶನ್ ತಂದ ಸಾಲ ಹೀಗೆ ಸಾಲಗಳ ಮೇಲೆ ಸಾಲವಾಗಿ ಕಷ್ಟದಾಯಕ ಜೀವನ ನಡೆಸುತ್ತಿರುವ ಅದೆಷ್ಟೋ ಕುಟುಂಬಗಳು ಕಣ್ಣೀರಿನಿಂದ ಕಳೆಯುತ್ತಿದೆ. ನಿಮ್ಮ ರಂಝಾನ್ ನ ಸಹಾಯ ಹಸ್ತಗಳು ಅಂತವರ ಕಣ್ಣೀರು ಒರೆಸುವಂತಾಗಿದ್ದರೆ ನೀವು ಕೂಡ ಈ ರೀತಿಯಾಗಿ ಸಹಾಯ ಮಾಡಲು ಪ್ರಯತ್ನಿಸಿರಿ.
- ನಿಮ್ಮ ಊರಿನಲ್ಲಿರುವ ರೇಶನ್ ಅಂಗಡಿಗಳ ಮಾಲಿಕರಲ್ಲಿ ವಿಚಾರಿಸಿ, ದೈನಂದಿನವಾಗಿ ಅಲ್ಲಿಂದ ರೇಶನ್ ತೆಗೆದುಕೊಂಡು ಹೋಗುವ ಅಥವಾ ಮಾಸಿಕವಾಗಿ ತೆಗೆದುಕೊಂಡು ಹೋಗುವವರ ಯಾವುದಾದರೂ ಸಾಲಗಳಿದ್ದಲ್ಲಿ ಅವರನ್ನು ವಿಚಾರಿಸಿ ಅವರ ಸಾಲಗಳನ್ನು ಕೊಟ್ಟು ಸಹಕರಿಸಬಹುದು.
- ನಿಮ್ಮೂರಿನ ಆಸ್ಪತ್ರೆಗಳಿಗೆ ತೆರಳಿ ಅಲ್ಲಿ ಹೊರ ಹಾಗೂ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳನ್ನು ಸಮೀಪಿಸಿ ಅವರ ಪರಿಸ್ಥಿತಿಗಳನ್ನು ಅರ್ಥೈಸಿ, ಸಹಾಯ ಹಸ್ತವನ್ನು ಮಾಡಲು ಅರ್ಹತೆ ಹೊಂದಿದವರಾಗಿದ್ದಲ್ಲಿ ಅವರಿಗೆ ಸಹಾಯ ಹಸ್ತವನ್ನು ನೀಡಿರಿ.
- ಕೆಲ ಮಧ್ಯಮ ವರ್ಗದ ಹೆತ್ತಂದಿರು ತಮ್ಮ ಮಗಳ ಮದುವೆಗಾಗಿ ಇಂತಿಷ್ಟು ದಿನಗಳ ನಿಗದಿ ಪಡಿಸಿ ಚಿನ್ನದಂಗಡಿಯಲ್ಲಿ ಸಾಲ ಮಾಡಿ ಚಿನ್ನ ಪಡೆದು ಸಾಲವನ್ನು ಮರುಪಾವತಿಸಲಾಗದೆ ಕಷ್ಟಪಡುವವರಿದ್ದಾರೆ. ಅಂತಹ ಕುಟುಂಬಕ್ಕೆ ನೆರವಾಗಿರಿ.
- ಮನೆ ಕಟ್ಟಲು ಪ್ರಾರಂಭಿಸಿ ಆರ್ಥಿಕವಾಗಿ ಸದೃಢರಾಗದ ಕಾರಣದಿಂದ ಅದನ್ನು ಮುಂದುವರಿಸಲಾಗೆ ಚಡಪಡಿಸುವ ಅದೆಷ್ಟೋ ಕುಟುಂಬಗಳು ದಯನೀಯ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ನಿಮ್ಮ ಸಹಾಯದ ಕಣ್ಣೋಟಗಳು ಇಂತವರ ಮೇಲೆ ಬೀರುವಂತಾಗಲಿ.
ಇನ್ನೂ ಅನೇಕ ರೀತಿಯಲ್ಲಿ ಈ ರಂಝಾನ್ ತಿಂಗಳಲ್ಲಿ ನಿಮಗೆ ಬಡವರಿಗೆ ನೆರವಾಗಬಹುದು. ನಿಮ್ಮ ಅವರ ನಡುವಿನ ಸಹಾಯ, ಸಹಕಾರಗಳನ್ನು ಅಲ್ಲಾಹನು ಕಾಣುವನು. ಜನರ ತೋರ್ಪಡಿಕೆಗೆ , ಸೋಶಿಯಲ್ ಮೀಡಿಯಾಗಳಲ್ಲಿ ಸಿಗುವ ಮೆಚ್ಚುಗೆಗೋಸ್ಕರ ಫೋಟೋದ ಮೊರೆ ಹೋಗದಿರಿ. ನಿಮ್ಮ ಸಹಾಯಗಳು ಅಲ್ಲಾಹು ಮೆಚ್ಚುವಂತಾಗಲಿ.
ನಮ್ಮ – ನಿಮ್ಮೆಲ್ಲರ ಸದುದ್ದೇಶಗಳನ್ನು ಸರ್ವಶಕ್ತನು ನೆರವೇರಿಸಿಕೊಡಲಿ – ಆಮೀನ್.