ದುಬೈ: ಕಾಲಾವಧಿ ಮುಗಿದ ವೃತ್ತಿ ಹುಡುಕುವ ವಿಸಾದಲ್ಲಿ ಯುಎಇಯಲ್ಲಿ ಮುಂದುವರಿಯುವ ಅನಿವಾಸಿಗಳು ಭಾರೀ ದಂಡ ಪಾವತಿಸಬೇಕಾಗುತ್ತದೆ ಎಂದು ಫೆಡರಲ್ ಅಥಾರಿಟಿಯು ಎಚ್ಚರಿಕೆ ನೀಡಿದೆ.
ಆರು ತಿಂಗಳ ಅವಧಿ ಮುಗಿವಯುವ ಮುನ್ನ ಕೆಲಸಕ್ಕೆ ಸೇರಬೇಕು ಅಥವಾ ದೇಶ ತೊರೆಯಬೇಕೆಂದು ಅಥಾರಿಟಿ ತಿಳಿಸಿದ್ದು, ಇಂತಹ ವಿಸಾಗಳ ಕಾಲಾವಧಿಯು ಜೂನ್‌ನಲ್ಲಿ ಕೊನೆಗೊಳ್ಳಲಿದೆ ಎಂದಿದೆ.
ಕೆಲಸ ಕಳಕೊಂಡು ಕೆಲಸ ಹುಡುಕುವವರಿಗೆ ಪ್ರಾಯೋಗಿಕನಿಲ್ಲದೆ ಆರು ತಿಂಗಳ ವರೆಗೆ ಯುಎಇಯಲ್ಲಿ ಮುಂದುವರಿಯಲು ಮತ್ತು ಕಡತಗಳನ್ನು ಕಾನೂನಿನ ಅನುಸಾರವಾಗಿ ಸರಿಪಡಿಸಲು ಕಳೆದ ವರ್ಷದಿಂದ ಜಾರಿಗೆ ಬಂದ ವಿಧಾನವಾಗಿತ್ತು ವೃತ್ತಿ ಅನ್ವೇಷಣಾ ವಿಸಾ.
ಅಂತಹ ವಿಸಾದ ಕಾಲಾವಧಿ ಮುಗಿದ ನಂತರವೂ ಯುಎಇಯಲ್ಲಿ ಉಳಿದುಕೊಂಡವರ ಮೇಲೆ ವಿಸಾ ಕಾನೂನು ಉಲ್ಲಂಘನೆ ಅನುಸಾರ ಪ್ರಕರಣ ಧಾಖಲಿಸಲಾಗುವುದು. ಪ್ರಥಮ ದಿನ ನೂರು ದಿರ್ಹಂ ದಂಡ ವಿಧಿಸಲಾಗುತ್ತಿದ್ದು, ನಂತರದ ಪ್ರತೀ ದಿನಗಳಿಹೆ ತಲಾ ಇಪ್ಪತ್ತೈದು ದಿರ್ಹಂ ನಂತೆ ದಂಡ ಪಾವತಿಸ ಬೇಕಾಗಬಹುದು. ವೃತ್ತಿ ಅನ್ವೇಷಣಾ ವಿಸಾದ ನವೀಕರಣ ಸಾಧ್ಯವಿಲ್ಲ ಎಂದು ಅಥಾರಿಟಿ ತಿಳಿಸಿದೆ.
ಇಂತಹ ವಿಸಾದಲ್ಲಿ ಇರುವವರು ಯಾವುದಾದರೂ ಕೆಲಸಕ್ಕೆ ಸೇರುವುದು ಇಲ್ಲವೇ ದೇಶ ತೊರೆಯಬೇಕಾಗಬಹುದು ಎಂದು ಫೆಡರಲ್ ಅಥಾರಿಟಿ ಫಾರ್ ಸಿಟಿಝನ್ ಷಿಪ್ ಆ್ಯಂಡ್ ಐಡೆಂಟಿಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಸಯೀದ್ ರಖಾನ್ ಅಲ್ ರಾಷಿದೀ ತಿಳಿಸಿದ್ದಾರೆ.
ಅಂತಹ ವಿಸಾದಲ್ಲಿರುವವರೊಂದಿಗೆ ಕೆಲಸ ಮಾಡಿಸದಂತೆ ಮತ್ತು ಅವರ ವಿಸಾ ಸ್ಟೇಟಸ್ ಕಾನೂನಾತ್ಮಕಗೊಳಿಸಿದ ನಂತರ ಮಾತ್ರ ಕೆಲಸ ನೀಡುವಂತೆ ತಿಳಿಸಿದ ಅವರು, ವೃತ್ತಿ ಅನ್ವೇಷಣಾ ವಿಸಾ ಅಥವಾ ಸಂದರ್ಶಕ ವಿಸಾದಲ್ಲಿರುವವರನ್ನು ಕೆಲಸಕ್ಕೆ ನೇಮಕಗೊಳಿಸಿದರೆ ಅಂತಹ ಸಂಸ್ಥೆಗಳು 50,000 ದಿರ್ಹಂ ದಂಡ ಕಟ್ಟಬೇಕಾಗುತ್ತದೆ. ಕಳೆದ ಡಿಸೆಂಬರ್ ನಲ್ಲಿ ನೀಡಲಾದ ವೃತ್ತಿ ಅನ್ವೇಷಣಾ ವಿಸಾಗಳ ಕಾಲಾವಧಿಯು ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಅಥಾರಿಟಿ ಎಚ್ಚರಿಕೆ ನೀಡಿದೆ.