janadhvani

Kannada Online News Paper

ವಿದ್ವಾಂಸರ ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಎಳೆದು ಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ!

ಉಪ್ಪಿನಂಗಡಿ ಉಲಮಾ ಸಂಗಮದ ಸಾರ್ವಜನಿಕ ಸಮಾರಂಭದಲ್ಲಿ, ಡಾ ಫಾರೂಕ್ ನಈಮಿ ಉಸ್ತಾದರ ಪ್ರಭಾಷಣದ ಕನ್ನಡನುವಾದ.

✍ ಅಬೂಶಝ

ಉಲಮಾಗಳನ್ನು ತಿರಸ್ಕರಿಸುತ್ತಾ ಅವರೊಂದಿಗೆ ಸಮಾಲೋಚನೆ ಇಲ್ಲದೆ ಕೇವಲ ಅರ್ಭಟ, ಅಪಕ್ವತೆಯ ನಡೆಯನ್ನು ಆಯುಧವಾಗಿಸಿ ಬೀದಿ ಬೀದಿಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಾ, ಅದನ್ನು ಮುಸ್ಲಿಂ ಸಮುದಾಯದ ಧ್ವನಿಯಾಗಿ ಹೈಲೆಟ್ ಮಾಡಿ ಮುನ್ನಡೆಯುವ ಅಟ್ಟಹಾಸ ಕೂಟವೊಂದು ಸಮುದಾಯವನ್ನು ತನ್ನ ಹಿಡಿತದಲ್ಲಿ ಬಿಗಿಗೊಳಿಸಲು ಯತ್ನಿಸುವ ಹುನ್ನಾರ ನಡೆಯುತ್ತಿದೆ.

ಖಂಡಿತವಾಗಿಯೂ ನಾನು ಹೇಳ ಬಯಸುತ್ತೇನೆ, ಪ್ರಸ್ತುತ ಅಟ್ಟಹಾಸ ಕೂಟ, ಸಮುದಾಯಕ್ಕೆ ಬಾರೀ ಅಪಾಯವನ್ನು ತಂದೊಡ್ಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಬೆಳೆಯುತ್ತಿರುವ ಹೊಸ ತಲೆಮಾರು ತಮ್ಮ ಕುದಿಯುವ ರಕ್ತದ ಬಲದಿಂದ, ರಟ್ಟೆಬಲ ಪ್ರದರ್ಶನ ಮುಂತಾದ ಅಪಕ್ವ ಭೀಕರ ಮಾರ್ಗಗಳನ್ನು ದಅವತ್ತಾಗಿ ಸ್ವೀಕರಿಸಿದ ಪ್ರಸಕ್ತ ಸಂಧಿಗ್ದ ಘಟ್ಟದಲ್ಲಿ ಅವರ ಅಪಾಯದ ನಡೆಯನ್ನು ತಿದ್ದುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.

ಸಂಧಿಗ್ದ ಘಟ್ಟಗಳಲ್ಲಿ ಸಮುದಾಯವನ್ನು ಸ್ಪಷ್ಟವಾದ ಗುರಿಗೆ ತಲುಪಿಸಿದ್ದು ಸರ್ವಕಾಲದಲ್ಲೂ ಉಲಮಾಗಳಾಗಿದ್ದಾರೆ.

ಮಹಾ ವಿದ್ವಾಂಸರಾಗಿದ್ದ ಇಝ್ಝ್ ಬಿನ್ ಸಲಾಂ (ರ) ಅಂದಿನ ಆಡಳಿತಧಿಕಾರಿಗಳ ವಿರುದ್ದ ಫತ್ವಾ ಹೊರಡಿಸಿದ್ದರು. ಹಾಗಾಗಿಯೇ ಅವರಿಗೆ ಬಾಈಉಲ್ ಉಮರಾಅ್ ಎಂಬ ಗೌರವ ನಾಮ ಸಿಕ್ಕಿತು.
ಆಡಳಿತಧಿಕಾರಿಗಳ ತಾತ್ಪರ್ಯಕ್ಕೆ ಅನುಗುಣವಾಗಿ ಫತ್ವ ನೀಡಲು ಮಹಾತ್ಮರು ತಯ್ಯಾರಾಗಲಿಲ್ಲ.
ದಾಸ ಪದ್ದತಿಯೆಂಬ ವಂಶದಲ್ಲಿ ಜನಿಸಿದ ಮಮಾಲಿಕ್ ಗಳ ಕೈಯಲ್ಲಿ ಅಧಿಕಾರವಿದ್ದು, ಅವರು ಸರಕಾರದ ಸೊತ್ತಾಗಿರುವುದರಿಂದ ಅವರು ಸ್ವತಂತ್ರರಾಗದೆ ಆಡಳಿತ ನಡೆಸಬಾರದು.
ಆದ್ದರಿಂದ ಸರಕಾರದ ಸೊತ್ತುಗಳಾದ ದಾಸ ವಂಶಜರು ತಮ್ಮ ಬೆಲೆಯಷ್ಟು ಹಣವನ್ನು ಸರಕಾರಕ್ಕೆ ಕಟ್ಟಿದ ವಿಮೋಚನೆಗೊಂಡ ನಂತರವಷ್ಟೇ ಅವರ ಅಧಿಕಾರ ಊರ್ಜಿತಗೊಳ್ಳುವುದು, ಆದ್ದರಿಂದ ಅವರು ಸ್ವತಂತ್ರರಾಗದೆ ಅಧಿಕಾರ ನಡೆಸುವಂತಿಲ್ಲ ಎಂದು ಸರಕಾರದ ವಿರುದ್ದ ಫತ್ವಾ ಹೊರಡಿಸಿದಾಗ ಕುಪಿತಗೊಂಡ ಸರಕಾರ ಇಮಾಮ್ ಇಝ್ಝ್ (ರ)ರವರಿಗೆ ಗಡಿಪಾರು ಆದೇಶ ನೀಡಿತು!

ಆದೇಶ ಪಾಲಿಸಿ, ಇಮಾಮ್ ರವರು ರಾಜ್ಯ ಬಿಟ್ಟು ಹೊರಡಲನುವಾದಾಗ, ರಾಜ್ಯದ ಎಲ್ಲಾ ಜನರು ಇಮಾಮರ ಜೊತೆ ಮನೆ ಮಠ ಸೊತ್ತು ಎಲ್ಲವನ್ನು ಬಿಟ್ಟು ಹೊರಡಲನುವಾದರು.
ಪ್ರಜೆಗಳಿಲ್ಲದೆ ರಾಜ್ಯಡಳಿತ ಹೇಗೆ ನಡೆಸುವುದೆಂದು ಕಂಗಲಾದ ಆಡಳಿತ ವರ್ಗ ಇಮಾಮ್ ಅವರಲ್ಲಿ ಊರು ಬಿಟ್ಟು ಹೋಗದಂತೆ ಭಿನ್ನವಿಸಿಕೊಂಡರು.
ಇಮಾಮರು ತನ್ನ ಫತ್ವಾ ಜಾರಿಗೊಳಿಸದೆ ಈ ಊರಲ್ಲಿ ತಂಗುವುದಿಲ್ಲವೆಂಬ ಧೃಢ ತೀರ್ಮಾನ ತೆಗೆದುಕೊಂಡಾಗ ಗತ್ಯಂತರವಿಲ್ಲದೆ ಆಡಳಿತ ನಡೆಸುವ ಮಮಾಲಿಕ ವರ್ಗ ತಮ್ಮ ಬೆಲೆಯನ್ನು ಸರಕಾರದ ಬೊಕ್ಕಸಕ್ಕೆ ಕಟ್ಟಿ ಸ್ವತಂತ್ರರಾಗುವ ತೀರ್ಮಾನ ತೆಗೆದು ಇಮಾಮರ ಫತ್ವಾದ ಮುಂದೆ ಮಂಡಿಯೂರಿದರು.

ಹಾಗಾಗಿಯೇ ಇಮಾಮ್ ಇಝ್ಝ್ ಬಿನ್ ಅಬ್ದುಸ್ಸಲಾಂ (ರ) ರವರು *ಬಾಈಉಲ್ ಉಮರಾಅ್*
‘ಅಧಿಕಾರಿಗಳನ್ನು ವ್ಯಾಪಾರ ಮಾಡಿದವರು’
ಎಂಬ ಗೌರವ ನಾಮಕ್ಕೆ ಪಾತ್ರರಾದರು.

ಹೌದು ಇಲ್ಮ್ ಮತ್ತು ಈಮಾನ್ ನ ಮುಂದೆ ಮಂಡಿಯೂರದ ಆಡಳಿತಗಳಿಲ್ಲ, ಅಧಿಕಾರಿಗಳೂ ಇಲ್ಲ ಎಂಬುದನ್ನು ಇಂದಿನ ಯುವ ತಲೆಮಾರು ಮನದಟ್ಟು ಮಾಡಬೇಕು.

ಅಧಿಕಾರ ಇಲ್ಲದೆಯೇ ಅಧಿಕಾರಿ ವರ್ಗಗಳನ್ನು ನಿಯಂತ್ರಿಸುವ ಶಕ್ತಿ ಉಲಮಾಗಳಿಗಿದೆ.

ಕೇವಲ ಆವೇಶ ನಮ್ಮನ್ನು ನಾಶದ ಕೂಪಕ್ಕೆ ತಳ್ಳುತ್ತದೆ ಎಂಬ ಸತ್ಯವನ್ನು ನಾವು ತಿಳಿಯಲೇ ಬೇಕು.

ಭಾರತದಲ್ಲಿ ಅಕ್ಬರ್ ಎಂಬ ಅಹಂಕಾರಿ ದೊರೆ ದೀನೀ ಇಲಾಹೀ ಎಂಬ ನೂತನ ಧರ್ಮ ಸ್ಥಾಪಿಸಿದಾಗ ಅವನ ರಾಜ ದರ್ಬಾರಿನ ಮುಂದೆ ಧೈರ್ಯದೊಂದಿಗೆ ಹೋಗಿ ನೂತನ ಧರ್ಮವನ್ನು ಕೈಬಿಡುವಂತೆ ಆಜ್ಞಾಪಿಸುವಷ್ಟು ಧೃಡತೆ ಮುಜದ್ದಿದುಲ್ ಅಲ್ಫಸಾನಿ ಸಯ್ಯದ್ ಸರ್ಹಿಂದಿ(ರ) ರವರಿಗೆ ಸಾದ್ಯವಾದದ್ದು ಅವರ ಇಲ್ಮ್ ಮತ್ತು ಈಮಾನಿನ ನಿಮಿತ್ತವಾಗಿದೆ.

ದೊರೆಗಳ ವಿರುದ್ದ ಮಾತೆತ್ತಿದವರ ರುಂಡ ಚೆಂಡಾಡುವ ಭೀಕರ ಸನ್ನಿವೇಶಗಳಾವುದು ಅವರ ಸಮರ್ಥ ನಾಯಕತ್ವ ಮತ್ತು ಸತ್ಯ ಹೇಳುವುದಕ್ಕೆ ತಡೆಯಾಗಿ ನಿಂತಿಲ್ಲ.
ಆತ್ಮಜ್ಞಾನದ ಅನುಭೂತಿ ಅನುಭವಿಸುವುದು ಒಂದು ಕಡೆಯಾದರೆ, ಫತುಹುಲ್ ಮಈನ್ ಎಂಬ ಸಮಗ್ರ ಕರ್ಮ ಸರಣಿ ಕಿತಾಬ್ ಮತ್ತೊಂದು ಕಡೆ ರಚನೆಯಾಗುವಾಗ ಮಗದೊಂದು ಕಡೆ ಭಾರತದ ಸ್ವತಂತ್ರ ಸಮರಕ್ಕೆ ಸಜ್ಜಾಗುವುದಕ್ಕೆ ಹೇತುವಾಗುವ *ಫತುಹುಲ್ ಮುಬೀನ್* ಅಥವಾ *ತುಹ್ಫತುಲ್ ಮುಜಾಹಿದೀನ್* ವಿರಚಿತಗೊಳ್ಳುತ್ತಿದ್ದವು.

ಎಲ್ಲಾ ಕಾಲದಲ್ಲೂ ಈ ಉಮ್ಮತ್’ಗೆ ಸರಿಯಾದ ಪಕ್ವತೆಯ ಹೋರಾಟ ಮಾರ್ಗ ತೋರಿಸಿ ಕೊಟ್ಟವರು ಉಲಮಾಗಳಾಗಿರುವರು.

ಇದೀಗ ಕೆಲವೊಂದು ಅಟ್ಟಹಾಸ ಕೂಟ ಇಸ್ಲಾಮಿನ ಹೆಸರಲ್ಲಿ ಹೋರಾಟ ಎಂದು ಹೇಳುತ್ತಾ ಅದಕ್ಕಾಗಿ ಇಸ್ಲಾಂ ನಿಷಿದ್ದಗೊಳಿಸಿದ ಬೀದಿ ನಾಟಕ, ಯುವತಿಯರ ಬೀದಿ ಪ್ರದರ್ಶನ, ಹಾಡು, ಮ್ಯೂಸಿಕ್, ಅಪಕ್ವ ಆವೇಶ ಅರ್ಭಟ ಮುಂತಾದುವುಗಳನ್ನು ಬಳಸುತ್ತಾ ಇಸ್ಲಾಮಿನ ಸುಂದರ ಮುಖವನ್ನು ವಿರೂಪಗೊಳಿಸಿ ಸಮುದಾಯವನ್ನು ನಾಶದ ಕೂಪಕ್ಕೆ ತಳ್ಳುತ್ತಿರುವ ಪ್ರಸಕ್ತ ಸನ್ನಿವೇಶಗಳಲ್ಲಿ ಈ ಎಲ್ಲಾ ಅನಾಚಾರ ಪ್ರತಭಟನೆಗಳನ್ನು ಕೈಕಟ್ಟಿ ನಿಂತು ನೋಡುವಂತಿಲ್ಲ.

ಇದರ ವಿರುದ್ದ ಶಕ್ತಿಯುತವಾದ ಪ್ರತಿರೊಧ ಪ್ರತ್ಯಕ್ಷಗೊಳ್ಳಲೇ ಬೇಕು.

ನಮ್ಮ ಉಲಮಾಗಳ ಪೆನ್ನುಗಳಿಂದ ಅಝ್ಕಿಯಾ, ಫತುಹುಲ್ ಮುಈನ್ ಗ್ರಂಥಗಳು ವಿರಚಿತವಾಗುವುದರ ಜೊತೆಗೆ ಇಸ್ಲಾಂ ವಿರುದ್ದ ಶಕ್ತಿಗಳ ಹೋರಾಟಕ್ಕಾಗಿ ತುಹ್ಫತುಲ್ ಮುಜಾಹಿದೀನ್, ಶೈಕುಲ್ ಬತ್ತಾರ್ ಮುಂತಾದ ಹರಿತ ಲೇಖನಿಗಳು ಅದೇ ಪೆನ್ನಿನಿಂದ ಹೊರ ಹೊಮ್ಮುತ್ತಿತ್ತು.

ಆದರೆ ಅಲ್ಲೆಲ್ಲೂ ಹೋರಾಟದ ಬೀದಿಯನ್ನು ಬಿಕರಿ ಮಾಡುವ ಪರಾಮರ್ಶೆಗಳು ಇರಲಿಲ್ಲ.
ಕೇವಲ ಆವೇಶ, ಅರ್ಬಟ, ಅಟ್ಟಹಾಸ ಇರಲಿಲ್ಲ.
ಇಸ್ಲಾಂ ನಿಷಿದ್ದಗೊಳಿಸಿದ ಯಾವುದೇ ಕಾರ್ಯಗಳು ಮಾಡುವಂತೆ ಮೊಹರು ಇರಲಿಲ್ಲ.
ಅದೇನು ಹೋರಾಟವಿದ್ದರೂ ಉಲಮಾಗಳ ಹಿಂದೆ ನಿಂತು ಇಲ್ಮ್ ಮತ್ತು ಈಮಾನಿನ ವಜ್ರಾಯುಧಗಳ ಮೂಲಕ ಮಾತ್ರವಾಗಿರಬೇಕೆಂಬ ತಾಕೀತು ಇತ್ತು.
ಆವಾಗಲೇ ಸಮುದಾಯಕ್ಕೆ ವಿಜಯ ದಕ್ಕುತ್ತದೆ ಎಂದು ಉಪದೇಶವಿತ್ತು.

ಮಹಾತ್ಮರಾದ ವೆಲಿಯಂಗೊಡು ಉಮರ್ ಖಾಝಿ(ರ) ಬ್ರಿಟೀಷರ ವಿರುದ್ದ ಹೋರಾಟದ ರಣಕಹಳೆ ಮೊಳಗಿಸಲಿಕ್ಕಾಗಿ ಯಾವುದಾದರೂ ಕರಾಟೆ ಶಾಲೆಗೆ ಹೋಗಿ ಕರಾಟೆ ಅಬ್ಯಾಸ ಮಾಡಿ ಬಂದರಲಿಲ್ಲ, ಅಥವಾ ಯಾವುದಾದರೊಂದು ಟ್ರೈನಿಂಗ್ ಸೆಂಟರ್’ನಿಂದ ದೈಹಿಕ ಅಭ್ಯಾಸ ಪಡೆಯಲೂ ಇಲ್ಲ.
ಮಮ್ಮಿಕುಟ್ಟಿ ಉಸ್ತಾರೆಂಬ ಸಾತ್ವಿಕ ವಿದ್ವಾಂಸನ ಆದ್ಯಾತ್ಮಿಕ ಗರಡಿಯಲ್ಲಿ ಪಳಗಿದ ಉಮರ್ ಖಾಝಿ(ರ),
ಶರೀಅತ್ತಿನ ಇಲ್ಮ್ ಕರಗತ ಮಾಡಿ, ಖಾದಿರಿಯ್ಯ ತರೀಕತಿನ ಕಠಿಣವಾದ ವಲಾಇಫ್ ರೂಡಿ ಮಾಡಿ, ಅಚಂಚಲವಾದ ಈಮಾನ್ ನ ಬಲದೊಂದಿಗೆ ಕೃತ್ಯವಾದ ಇಬಾದತಿನ ಮೂಲಕ ದೇಹವನ್ನು ದಂಡಿಸಿ ಹೋರಾಟದ ಅಂಗಳಕ್ಕೆ ದುಮುಕಿದರು.

ವಿಜಯ ಕಟ್ಟಿಟ್ಟ ಬುತ್ತಿಯಾಗಿತ್ತು!

ಬ್ರಿಟೀಷರು ಸಹಿತ ಸಾಮ್ರಾಜ್ಯ ಶಕ್ತಿಗಳು ಖಾಝಿಯ ಮುಂದೆ ಮಂಡಿಯೂರಲೇ ಬೇಕಾಯಿತು.!

ಖಾಝಿಯವರ ಮುಖ್ಯ ಆಯುಧ ಪ್ರವಾದಿ ಪ್ರೇಮ ಮತ್ತು ಅಚಂಚಲ ಈಮಾನ್ ಆಗಿತ್ತು. ಅದರ ಮೂಲಕವೇ ಸೂರ್ಯನು ಅಸ್ತಮಿಸದ ಬ್ರಿಟೀಷ್ ಸರಕಾರವನ್ನು ಮೆಟ್ಟಿ ನಿಂತರು.
(ಪ್ರವಾದಿ ಪ್ರೇಮವೇ ಇಲ್ಲದೆ ಸುಕ್ಕುಗಟ್ಟಿದ ಇಸ್ಲಾಮನ್ನು ಪ್ರಚಾರ ಮಾಡಿ ಪುಣ್ಯ ಪ್ರವಾದಿಯ ಹಸಿರು ಖುಬ್ಬವನ್ನು ಪುಡಿಗೆಯ್ಯಬೇಕೆಂದು ಅರಚುವವನ ಹಿಂಬಾಲಕರನ್ನು ಬಗಲಿಗೇರಿಸಿ ನಡೆಸುವ ಇಂದಿನ ನವ ಯುವಕರ ಹೋರಾಟಕ್ಕೆ ಅಲ್ಲಾಹನ ಸಹಾಯ ಇರಲಿಕ್ಕಿಲ್ಲ ಎಂಬ ಸತ್ಯವನ್ನು ನಾವು ಮನದಟ್ಟು ಮಾಡಿಕೊಡಬೇಕಾದ ಸಮಯವಿದು)

ಹೀಗೆ ನಾವು ಪ್ರತಿಯೊಬ್ಬ ಹೋರಾಟಗಾರರ ಚರಿತ್ರೆಯನ್ನು ಕಲಿಯಬೇಕು. ನಿನ್ನೆಯ ಚರಿತ್ರೆಗಳು ಇಂದಿನ ಪಾಠವಾಗಿದೆ. ನಾಳೆಗೆ ಬೇಕಾಗಿರುವ ಆತ್ಮವಲೋಕನವಾಗಿದೆ.

ಅಲ್ ಹಂದುಲಿಲ್ಲಾಹ್
ನಾವು ಮಹಾ ಭಾಗ್ಯವಂತರು.
ನಾವು ಇದುವರೆಗೆ ಚರ್ಚೆ ನಡೆಸಿದ ಉಲಮಾಗಳ ಉತ್ತರಾಧಿಕಾರಿಗಳಾಗಿದ್ದಾರೆ ನಮ್ಮ ಇಂದಿನ ಉಲಮಾಗಳು.
ಕೇವಲ ಒಂದು ಉಸ್ತಾದಿನ ನೆರಳಿನಲ್ಲಿ ಜನ ಕೂಟವಾಗಿ ಮಾರ್ಪಾಡುಗೊಂಡವರಲ್ಲ ನಮ್ಮ ಉಲಮಾಗಳು.
ಇಲ್ಮ್ ಮತ್ತು ಈಮಾನ್ ವಿಷಯಗಳಲ್ಲಿ ಅವರು ಮುಹಮ್ಮದ್ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ತನಕ ತಲುಪುವ ಶ್ರೇಷ್ಟ ಪರಂಪರೆಯ ಕೊಂಡಿಗಳಾಗಿದ್ದಾರೆ.

ಅಲ್ ಹಂದುಲಿಲ್ಲಾಹ್!
ನಾವು ಅದೆಷ್ಟು ಭಾಗ್ಯವಂತರೆಂದರೆ ನಮಗೆ ಇಂದು ನೇತೃತ್ವ ಕೊಡುತ್ತಿರುವ ಈ ವೇದಿಕೆಯಲ್ಲಿ ಆಸೀನರಾಗಿದ್ದ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್, ತಾಜುಶ್ಶರೀಅ ಉಸ್ತಾದ್, ಬೇಕಲ ಉಸ್ತಾದರಂತಹ ದಿಗ್ಗಜ ಉಲಮಾಗಳ ಕುರಿತು ಇವರು ಯಾರೆಂದು ಕೇಳಿದರೆ ನಿನ್ನೆಯ ಹೋರಾಟ ಭೂಮಿಕೆಯಲ್ಲಿ ಸ್ಪಷ್ಟವಾದ ಗುರಿ ತೋರಿಸಿ ಸಮುದಾಯವನ್ನು ಮುನ್ನಡೆಸಿದ ಮದ್ಸ್’ ಹಬಿನ ಇಮಾಮುಗಳು, ಅವರನ್ನು ಅನುಸರಿಸಿ ಬಂದ ಇಮಾಮುಗಳು, ಸಲಾಹುದ್ದೀನ್ ಅಯ್ಯೂಬಿ, ಉಮರ್ ಮುಕ್ತಾರ್ ರವರಂತೆ ಚರಿತ್ರೆ ಪುಟಗಳಲ್ಲಿ ಹಾದು ಹೋದ ಕ್ರಾಂತಿಕಾರಿ ಪುರುಷರ ಅನುಯಾಯಿಗಳಾಗಿದ್ದಾರೆಂದು ಎದೆ ತಟ್ಟಿ ಹೇಳಬಹುದು.

ಇಂತಹ ಧೀರ ಉಲಮಾಗಳ ಧೀರ ನೇತೃತ್ವದ ಹಿಂದೆ ಬಂಡೆಗಲ್ಲಿನಂತೆ ಅಚಂಚಲವಾಗಿ ನಿಲ್ಲಬೇಕೆ ಹೊರತು, ಯಾವುದೊ ಕೆಲವು ಅಭ್ಯಾಸ ಕೂಟ, ರಾಜಕೀಯ ತಾತ್ಪರ್ಯಕ್ಕೆ ಅನುಗುಣವಾಗಿ ಪ್ರಹಸನ ನಡೆಸುವ ತಾತ್ಕಾಲಿಕ ಚಿಂತೆಯ ಅಟ್ಟಹಾಸ ವರ್ಗದ ಹಿಂದೆ ಯಾವುದೇ ಯುವಕರು ಹೋಗದಂತೆ ಭೊದನೆ ನೀಡಬೇಕಾದುದು ಕಾಲದ ಅನಿವಾರ್ಯತೆಯಾಗಿದೆ.

ಸಮುದಾಯ ಎದುರಿಸುವ ಯಾವುದೇ ಕ್ಲಿಷ್ಟಕರ, ತ್ರಾಸದಾಯಯಕ ಸಂಧರ್ಭಗಳಲ್ಲಿಯೂ, ಅವರನ್ನು ಸರಿಯಾದ ದಿಕ್ಕಿನಲ್ಲಿ ಸಂಚರಿಸುವಂತೆ ಧೀರ ನೇತೃತ್ವ ಕೊಡಬೇಕಾದವರು ಉಲಮಾಗಳಾಗಿದ್ದಾರೆ. ಕಾರಣ ಅವರಿಗೆ ಇಲ್ಮ್ ಇದೆ, ಅಚಂಚಲವಾದ ಈಮಾನ್ ಇದೆ.
ಎಲ್ಲರೂ ಸುಖ ನಿದ್ರೆಯಲ್ಲಿರುವಾಗಲೂ ನಮ್ಮ ಉಲಮಾಗಳು
ಅರ್ಧರಾತ್ರಿ ಎದ್ದು ಅಲ್ಲಾಹನಲ್ಲಿ ಈ ಸಮುದಾಯ ಎದುರುಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅಲ್ಲಾಹನಲ್ಲಿ ಮೊರೆಯಿಡುತ್ತಾ ಇರುತ್ತಾರೆ.
(ಸತ್ಯ ವಿಶ್ವಾಸಿಯ ಅತ್ಯಂತ ದೊಡ್ಡ ಆಯುಧ ‘ಪ್ರಾರ್ಥನೆ’ ಎಂಬುದನ್ನು‌ ನಾವು ಮರೆಯಬಾರದು.)

ಡಮಸ್ಕಸ್ ಎಂಬ ಪಟ್ಟಣ ವಿದ್ವಾಂಸರ ಪಟ್ಟಣವಾಗಿತ್ತು. ಅದ್ಯಾತ್ಮಿಕತೆಯ ಉತ್ತುಂಗ ಶಿಖರದಲ್ಲಿ ರಾರಾಜಿಸುತ್ತಿದ್ದ ಡಮಸ್ಕಸ್ ನಗರದ ಉಲಮಾಗಳ ಕುರಿತು ಇಮಾಮ್ ಸುಯೂಥಿ(ರ) ಗ್ರಂಥ ಬರೆದಿದ್ದಾರೆ.
ಡಮಸ್ಕಸ್ ಉಲಮಾಗಳ ನೇತೃತ್ವದಲ್ಲಿರುವಾಗ ಶಾಂತಿ ಸಮಾದಾನದ ಸಂಪತ್ಪರಿತ ವಿದ್ಯೆಯ ನಾಡಾಗಿತ್ತು
ಆದರೆ ಕೆಲವೊಂದು ಅಟ್ಟಹಾಸ ವರ್ಗದ ಯುವಕರು ಡಮಸ್ಕಸನ್ನು ಉಲಮಾಗಳ ಕೈಯಿಂದ ತಪ್ಪಿಸಿ ಆವೇಶ ಅರ್ಭಟದ ಇಸ್ಲಾಮಿನ ಕನಸು ಕಂಡಾಗ ಇದೀಗ ಅಲ್ಲಿನ ದುರಂತ ದಾರುಣ ಕಥೆಯನ್ನು ನಾವು ದಿನನಿತ್ಯ ಪತ್ರಗಳಲ್ಲಿ ನೋಡುತ್ತಿದ್ದೇವೆ.
ಸಿರಿಯ ಡಮಸ್ಕಸ್ ಸೇರಿದಂತೆ ಅಟ್ಟಹಾಸ ಯುವಕರ ದಾಳಿಗೆ ತುತ್ತಾದ ಮುಸ್ಲಿಂ ರಾಷ್ಟ್ರಗಳ ಶೋಚನೀಯ ಅವಸ್ಥೆ.

ಅಲಪ್ಪೊ ಎಂಬ ನಗರದ ಕುರಿತು ನೀವು ಕೇಳಿರಬಹುದು. ತಾರೀಕ್ ಹಲಬ್ (ಅಲಪ್ಪೋ)ಎಂಬ ಗ್ರಂಥವನ್ನು ನಾವು ಓದಬೇಕು.
ಉಲಮಾಗಳ ನೇತೃತ್ವದಿಂದ ಆ ನಾಡು ಹಿಂದೆ ಸರಿದಾಗ ಇದೀಗ ಅರಬ್ ನ್ಯೂಸ್ ಗಳಲ್ಲಿ ವಾರ್ತೆ ಬರುವ ಹಾಗೆ ಆ ನಾಡು ಕಣ್ಣೀರಿನ ರಕ್ತದೋಕುಳಿ ಹರಿಯುವ ನಾಡಾಗಿ ಬದಲಾಗಿದೆ.
ಉಲಮಾಗಳ ವಿದ್ವಾಂಸರ ನೇತೃತ್ವದಲ್ಲಿ
ಇಸ್ಲಾಮಿನ ನಾಗರಿಕತೆಯ ಸುಂದರ ಕಥೆಗಳನ್ನು ಹೇಳುತ್ತಿದ್ದ ಡಮಸ್ಕಸ್, ಸಿರಿಯಾ, ಬಸರವೆಂಬ ವೈಜ್ಞಾನಿಕ ನಗರಗಳೆಲ್ಲವು ಅಟ್ಟಹಾಸ ಕೂಟದ ಯುವಕರ ಕೈಯಲ್ಲಿ ಸಿಲುಕಿದಾಗ ನುಚ್ಚು ನೂರಾಗುತ್ತಿರುವ ವಾರ್ತೆ ನಾವು ದಿನನಿತ್ಯ ಕೇಳುತ್ತಿದ್ದೇವೆ.

ದಕ್ಷಿಣಕನ್ನಡ ಸಹಿತ ಕರ್ನಾಟಕ ಕೇರಳ ಮಾತ್ರವಲ್ಲ ಭಾರತದಾದ್ಯಂತ ನಮ್ಮ ಉಲಮಾಗಳು ನಾಡಿನ ಶಾಂತಿ ಸಮಾದಾನಕ್ಕಾಗಿ ಹೋರಾಡುತ್ತಿದ್ದಾರೆ.
ಯಮನ್ ರಾಜ್ಯಕ್ಕೆ ಯಾತ್ರಗೆಯ್ಯುವುದಕ್ಕೆ ಭಾರತ ಸರಕಾರ ನಿಯಂತ್ರಣ ಏರ್ಪಡಿಸಿದ ವಾರ್ತೆ ಇಂದಿನ ಪತ್ರಿಕೆಯಲ್ಲಿ ಇತ್ತು.
ಅಲ್ಲಿಯೂ ಅಹ್ಲುಸ್ಸುನ್ನ ವಲ್ ಜಮಾತಿನ ವಿದ್ವಾಂಸರ ನೇತೃತ್ವದಲ್ಲಿ ದಾರುಲ್ ಮುಸ್ತಫಾ ಅಧೀನದಲ್ಲಿ ಶಾಂತಿಯ ಪ್ರಕ್ರಿಯೆ ನಡೆಯುತ್ತಿದೆ.

ಇದೇ ರೀತಿ ಜಗತ್ತಿನಾದ್ಯಂತ ಅಹ್ಲುಸ್ಸುನ್ನತಿ ವಲ್ ಜಮಾತಿನ ಉಲಮಾಗಳ ನೇತೃತ್ವ ಶಕ್ತಿಯಾಗಬೇಕಾಗಿದೆ.
ರೋಹಿಂಗ್ಯನ್ ಮುಸ್ಲಿಮರ ದಯನೀಯ ಸ್ಥಿತಿಗೆ ನಾವು ಕಣ್ಣೀರು ಸುರಿಸುತ್ತೇವೆ ಅಲ್ಲಿಯೂ ಉಲಮಾಗಳ ನೇತೃತ್ವ ಇಲ್ಲದೆ ಹೋದದ್ದು ಮತ್ತು ಮಿಶನರಿಗಳ ಪ್ರವೇಶದ ಕುರಿತು ನಾವು ತಿಳಿದವರಾಗಿದ್ದೇವೆ.
ನಾವು ಚರಿತ್ರೆ ಕಲಿಯಬೇಕು.
ದಾರಾಳವಾಗಿ ಅದ್ಯಯನ ನಡೆಸಬೇಕು. ಪುಸ್ತಕಗಳನ್ನು ಚರಿತ್ರೆಗಳನ್ನು ಓದಬೇಕು.
ಜಗತ್ತಿನಾದ್ಯಂತ ಮುಸ್ಲಿಮ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ರಕ್ತದೋಕುಳಿ ಮತ್ತು ಅಶಾಂತಿಗೆ ನಿಮಿತ್ತವಾದದ್ದು ಅವರು ವಿದ್ವಾಂಸರ ನಾಯಕತ್ವನ್ನು ತಿರಸ್ಕರಿಸಿದ ಕಾರಣದಿಂದಾಗಿದೆ.
ಈ ಮಹತ್ತರವಾದ ಸಂದೇಶವನ್ನು ಎಲ್ಲರಿಗೂ ತಲುಪಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕಾದು ಕಾಲದ ಅಗತ್ಯವಾಗಿದೆ.

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ.

“ನನ್ನ ಸಮುದಾಯಲ್ಲಿ ಒಂದು ತಂಡ ಬರಲಿದೆ. ಅವರಿಗೆ ನನ್ನಲ್ಲಿ ಅತ್ಯಂತ ಪ್ರೀತಿ ಇರುತ್ತದೆ. ಅವರು ನನ್ನನ್ನು ನೋಡಿಲ್ಲವಾದರೂ ನನ್ನೊಂದಿಗಿರುವ ಅಪಾರ ಸ್ನೇಹದ ಹೆಸರಲ್ಲಿ ಅವರು ಈ ಉಮ್ಮತ್ ನ್ನು ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ ನೇತೃತ್ವ ನೀಡುವರು, ಅವರನ್ನು ನಾನು ಹೌಲಿನ ಬಳಿ ಕಾಯುತ್ತಿರುವೆನು”

ಅಲ್ ಹಂದುಲಿಲ್ಲಾಹ್…
ಸಂತೋಷವಾಗುತ್ತಿದೆ…..
ಆಶಿಕುರ್ರಸೂಲರಾದ ನಮ್ಮ ಉಲಮಾ ಸಾದಾತುಗಳು. ರಬೀವುಲ್ ಅವ್ವಲ್ ತಿಂಗಳಲ್ಲಿ ಜಗತ್ತಿನಾದ್ಯಂತ ಸಂಚರಿಸಿ ಅತ್ಯಂತ ಅಧಿಕ ಪ್ರವಾದಿ ಪ್ರೇಮ ಪ್ರಭಾಷಣ ಮಾಡಿ ಜನರನ್ನು ಪ್ರವಾದಿ ಪ್ರೇಮದ ಅನುರಾಗದ ಕಡೆ ಗಮನಹರಿಸುವಂತೆ ಮಾಡುತ್ತಿರುವ ಶೈಖುನಾ ಎ.ಪಿ. ಉಸ್ತಾದ್, ವಿರೋದಿಗಳ ಕುತಂತ್ರ ಮೂಲಕ ರಿಯಾದಿನ ಸೆರೆಮನೆವಾಸ ಗೈದಾಗ ವಿಮೋಚನೆಯ ದಾರಿಯಾಗಿ ಪ್ರವಾದಿಯವರ ಮದ್ಹ್ ನ ಕಿತಾಬ್ ರಚಿಸಲು ನೇರ್ಚೆ ಮಾಡಿದ ಸುಲ್ತಾನುಲ್ ಉಲಮಾ, ಪ್ರವಾದಿ ಕೀರ್ತನೆ ಕೇಳುವಾಗಲೆಲ್ಲಾ ಇಶ್ಕ್ ನ ಕಣ್ಣೀರು ಹರಿಸುವ ತಾಜುಶ್ಶರೀಅ ಅಲಿಕುಂಞಿ ಉಸ್ತಾದರಂತಹ ಉಲಮಾ ಶ್ರೇಷ್ಟರು ನಮಗೆ ನೇತೃತ್ವ ನೀಡಲು ಇದ್ದಾರೆ.

error: Content is protected !! Not allowed copy content from janadhvani.com