janadhvani

Kannada Online News Paper

ಬೇಂಗಿಲ ಜಮಾಅತ್: ಜಿಸಿಸಿ ಗಲ್ಫ್ ಗೈಸ್ ಸಮಿತಿಗೆ ನೂತನ ಸಾರಥ್ಯ

ಉಪ್ಪಿನಂಗಡಿ: ಮುಹ್ಯುದ್ದೀನ್ ಜುಮಾ ಮಸೀದಿ ಬೇಂಗಿಲ ಜಮಾಅತ್ ಗೊಳಪಟ್ಟ GCC ಗಲ್ಫ್ ಗೈಸ್ ಬೇಂಗಿಲ ಇದರ ಮಹಾಸಭೆಯು Online ಮೂಲಕ ಬಹು ಅಬ್ದುಲ್ ಲತೀಫ್ ಝುಹ್ರಿ (ಖತೀಬರು M.J.M.ಬೇಂಗಿಲ) ಇವರ ನೇತೃತ್ವದಲ್ಲಿ ನಡೆಯಿತು.

ಈ ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ಹಲವಾರು ಉಪಯುಕ್ತ ಕಾರ್ಯಾಚರಣೆಗಳನ್ನು ನಡೆಸುತ್ತಾ ಬಂದಿದೆ.ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗಳನ್ನು ಇನ್ನಷ್ಟು ಭಲಿಷ್ಟ ಗೊಳಿಸಲು ನೂತನ ಸಮಿತಿಯನ್ನು ರಚನೆ ರಚಿಸಲಾಯ್ತು.

ನೂತನ ಸಮಿತಿಯ ಪದಾಧಿಕಾರಿಗಳು:
ಕಾರ್ಯಾಧ್ಯಕ್ಷರಾಗಿ ಮುಹಿಯುದ್ದೀನ್ ಜುಮಾ ಮಸೀದಿ ಬೇಂಗಿಲ ಖತೀಬರಾದ ಅಬ್ದುಲ್ ಲತೀಫ್ ಝುಹ್ರಿ, ಗೌರವ ಅಧ್ಯಕ್ಷರಾಗಿ ಇಬ್ರಾಹಿಮ್ ಬೇಂಗಿಲ KSA ಇವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಿಗಾಗಿ ನಡೆದ online ಚುನಾವಣೆ ಮುಖಾಂತರ KCF ನಾಯಕ ಸಂಘಟನಾ ಚತುರ ಅಬ್ದುಲ್ ಕರೀಮ್ ಲತೀಫಿ ಬೇಂಗಿಲ KSA ಇವರು ಬಹುಮತದೊಂದಿಗೆ ಆಯ್ಕೆಯಾದರು, ಮುಹಮ್ಮದ್ ರಫೀಖ್ ಮದನಿ ಬೇಂಗಿಲ UAE, ಹಾಗೂ ಅಬೂಬಕ್ಕರ್ ಸಖಾಫಿ ಬೇಂಗಿಲ KSA ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಿಯಾಝ್ ಬೊಳ್ಳಗುಳಿ ಕತ್ತಾರ್ ಹಾಗೂ ಜೊತೆಕಾರ್ಯದರ್ಶಿಯಾಗಿ ಇಬ್ರಾಹಿಮ್ ನಿರ್ಕಾಜೆ KSA, ಹಾಗೂ ರವೂಫ್ ಕಲ್ಲೇರಿ ಸೋಕಿಲ UAE, ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಬೇಂಗಿಲ KSA, ಸಂಘಟನಾ ಕಾರ್ಯದರ್ಶಿಯಾಗಿ
ಸಿದ್ದೀಕ್ ಸೋಕಿಲ UAE ಇವರನ್ನು ಆಯ್ಕೆ ಮಾಡಲಾಯಿತು.

ಊರಿನ ಅಭಿವೃದ್ಧಿಗಾಗಿ ಉತ್ತಮ ರೀತಿಯಲ್ಲಿ ಸಲಹೆಗಳನ್ನು ನೀಡಲು ಸಲೆಹೆಗಾರರಾಗಿ
ಅಬ್ಬಾಸ್ ಮುಸ್ಲಿಯಾರ್ ಹೊಸೊಕ್ಲು ಇವರನ್ನು ಮತ್ತು ಸಲಹಾ ಸಮೀತಿ ಸದಸ್ಯರಾಗಿ ಅಶ್ರಫ್ ಬೊಳ್ಳಗುಲಿ, ಅಬ್ದುರ್ಹ್ಮಾನ್ ನಿರ್ಕಜೆ, ಆದಂ ಬೊಳ್ಳಗುಲಿಯವರನ್ನು ಪ್ರಮುಖರಾಗಿ ನೇಮಿಸಲಾಯಿತು. ಲೆಕ್ಕ ಪರಿಶೋಧಕರಾಗಿ ಹೈದರ್ ಹೋಸೊಕ್ಲು ಹಾಗೂ ಸ್ವಲಾತ್ ಕೊರ್ಡಿನೇಟರಾಗಿ ಇಸ್ಮಾಯಿಲ್ ಸಅದಿ ಬೇಂಗಿಲ ಇವರನ್ನು ನೇಮಕಮಾಡಲಾಯಿತು.

ಶರೀಫ್ ಮಿತ್ತರಿಪಾದೆ, ಇರ್ಪಾನ್ ಕೆದಿಲ, ಸಮದ್ ಬೇಂಗಿಲ,‌ ಕಾಸಿಂ ಬೇಂಗಿಲ, ನಾಸಿರ್ ಹೊಸೊಕ್ಲು, ಸ್ವಾದಿಕ್ ಸೋಕಿಲ ಮುಂತಾದ ಪ್ರಮುಖ ಕಾರ್ಯಕರ್ತರನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ನೂತನ ಕಾರ್ಯದರ್ಶಿ ರಿಯಾಝ್ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com