ಬೆಂಗಳೂರು : ಕನ್ಯಾನ ಶಾಹುಲ್ ಹಮೀದ್ ವಲಿಯುಲ್ಲಾಹಿ ಮಖಾಂ ಉರೂಸ್ ಪ್ರಯುಕ್ತ ಕಾರ್ಯಕ್ರಮಕ್ಕೆ ಮುಖ್ಯಾತಿಥಿಯಾಗಿ ಆಗಮಿಸಿ ಪ್ರಭಾಷಣ ನಡೆಸಿ ಹಿಂದಿರುಗುವಾಗ ಮಿತ್ತನಡ್ಕ ಎಂಬಲ್ಲಿ ದುಷ್ಕರ್ಮಿಗಳಿಂದ ಆಕ್ರಮಣ ನಡೆದಿದೆ.
ಪ್ರಖ್ಯಾತ ಸುನ್ನೀ ವಿದ್ವಾಂಸರೂ ಪ್ರಸಿದ್ಧ ಪ್ರಭಾಷಕರೂ ಹಾಗೂ ಕೇರಳ ರಾಜ್ಯ ಹಿಂದುಳಿದ ವಿಭಾಗ ಆಯೋಗದ ಸದಸ್ಯರಾದ ಜಸ್ಟೀಸ್ ಮುಳ್ಳೂರುಕ್ಕರ ಮುಹಮ್ಮದಲಿ ಸಖಾಫಿಯವರ ವಾಹನದ ಮೇಲೆ ದುಷ್ಕರ್ಮಿಗಳಿಂದ ನಡೆದ ಆಕ್ರಮಣವನ್ನು ಸುನ್ನೀ ಲೇಖಕರ ಬಳಗ ತೀವ್ರವಾಗಿ ಖಂಡಿಸಿದೆ.
ಉಸ್ತಾದರಿಗೆ ಈ ಮುಂಚೆಯು ಫೋನ್ ಕಾಲ್ ಮೂಲಕ ಈ ಭಾಗದಿಂದ ಜೀವ ಬೆದರಿಕೆ ಬಂದಿತ್ತು ಅದಕ್ಕೆ ವಿರುದ್ದವಾಗಿ ಉಸ್ತಾದ್ ರವರು ಕಾನೂನು ಪರವಾಗಿ ಹೋರಾಟ ನಡೆಸುತ್ತಾ ಇದ್ದಾರೆ. ಸಮಾಜದ ಶಾಂತಿ ಒಗ್ಗಟ್ಟನ್ನು ಮುರಿಯುವ ಇಂತಹ ಆಕ್ರಮಿಗಳನ್ನು ಪೊಲೀಸರು ಶೀಗ್ರ ಬಂಧಿಸಿ ಆಕ್ರಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಗೆ ಅನುಗುಣವಾಗಿ ಕೂಡಲೇ ಕಾನೂನು ಕ್ರಮ ಜರುಗಿಸಬೆಕೆಂದು ಸುನ್ನೀ ಲೇಖಕರ ಬಳಗ ಒತ್ತಾಯಿಸಿದೆ.