ಜಿದ್ದಾ: ಹಜ್ ಮತ್ತು ಉಮ್ರಾಗಳಿಗಗೆ ವ್ಯವಸ್ಥಿತ ರೂಪುರೇಷೆ ತಂದ ಕಾರಣ ಅಕ್ರಮ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಸಚಿವಾಲಯವು ಕಟ್ಟುನಿಟ್ಟಾಗಿ ವಿವಿಧ ಕಾನೂನುಗಳನ್ನು ಜಾರಿಗೊಳಿಸುತ್ತದ್ದು,ನಿಗದಿತ ಶೇಕಡಾವಾರುಗಿಂತ ಹೆಚ್ಚು ಲೋಪದೋಷಗಳು ಸಂಭವಿಸುವ ಕಂಪನಿಗಳಿಗೆ ಮುಂದೆ ಉಮ್ರಾ ವೀಸಾವನ್ನು ಅನುಮತಿಸಲಾಗುವುದಿಲ್ಲ ಎಂದ್ ಸಚಿವಾಲಯ ತಿಳಿಸಿದೆ.
ಯಾತ್ರಿಕರು ಮಕ್ಕಾ ಮತ್ತು ಮದೀನಾದ ವಾಸಸ್ಥಳಗಳಿಗೆ ತಲುಪಲು ವಿಳಂಬವಾಗುವುದಾದರೆ, ಸೇವಾ ಕಂಪನಿಗಳು ಹನ್ನೆರಡು ಗಂಟೆಗಳೊಳಗೆ ವರದಿ ಮಾಡಬೇಕು. ಹಜ್ ಮತ್ತು ಉಮ್ರಾ ಯಾತ್ರಿಕರು ನಿಗದಿತ ಸಮಯದಲ್ಲಿ ಮರಳದಿರುವುದು ಕಂಡು ಬಂದರೆ ಸಚಿವಾಲಯ ಮತ್ತು ಜವಾಝಾತ್‌ಗೆ ವರದಿ ಸಲ್ಲಿಸಬೇಕು. ಕಡೆಗಣಿಸಿದಲ್ಲಿ ಸೇವಾ ಕಂಪನಿಗಳಿಗೆ ಉಮ್ರಾ ವೀಸಾ ನೀಡಲಾಗುವುದಿಲ್ಲ ಎಂದು ಸಚಿವಾಲಯ ಎಚ್ಚರಿಸಿದೆ.
ಹಜ್ ಮತ್ತು ಉಮ್ರಾ ಸಚಿವಾಲಯವು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದ ಪರಿಣಾಮವಾಗಿ ಉಮ್ರಾ ನಿರ್ವಹಿಸಿದ ಬಳಿಕ ದೇಶದಲ್ಲಿ ಅಕ್ರಮವಾಗಿ ಉಳಿದರುವ ಯಾತ್ರಿಕರ ಸಂಖ್ಯೆ ಈ ವರ್ಷ ಭಾರೀ ಇಳಿಕೆ ಕಂಡಿದೆ. ಕೇವಲ 2332 ಯಾತ್ರಿಗಳು ಮಾತ್ರ ದೇಶದಲ್ಲಿ ಅಕ್ರಮವಾಗಿ ಉಳಿದಿದ್ದಾರೆ.
ಹಜ್ ಸಚಿವಾಲಯವು ವಿವಿಧ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆಯನ್ನು ಚುರುಕುಗೊಳಿಸಿದೆ.