ರಿಯಾದ್: ಕಳೆದ ಒಂದು ವರ್ಷದಲ್ಲಿ 7143 ಸಂಸ್ಥೆಗಳು ಕಾರ್ಮಿಕ ಮಾರುಕಟ್ಟೆಯನ್ನು ತೊರೆದಿವೆ ಎಂದು ಪ್ರಾದೇಶಿಕ ಮಾಧ್ಯಮ ವರದಿ ಮಾಡಿದೆ. 2017 ರ ಮೂರನೇ ತ್ರೈಮಾಸಿಕದಿಂದ 2018 ರ ಮೂರನೇ ತ್ರೈಮಾಸಿಕ ವರೆಗಿನ ಲೆಕ್ಕ ಪ್ರಕಾರ 7143 ಸಂಸ್ಥೆಗಳು ಮುಚ್ಚಲ್ಪಟ್ಟಿದೆ.
2017 ರ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಇದ್ದ 4,60,858 ಖಾಸಗಿ ಸಂಸ್ಥೆಗಳ ಪೈಕಿ 2018 ರ ಮೂರನೇ ತ್ರೈಮಾಸಿಕದಲ್ಲಿ 4,53,715 ಸಂಸ್ಥೆಗಳು ಮಾತ್ರ ಉಳಿದವು. ಈ ಪೈಕಿ ಬಹುಪಾಲು ಸಣ್ಣ ಸಂಸ್ಥೆಗಳಾಗಿವೆ. ಸರಾಸರಿ, ದಿನವಹಿ 20 ಸಣ್ಣ ಸಂಸ್ಥೆಗಳನ್ನು ಮುಚ್ಚಲಾಗುತ್ತಿವೆ.
ಜನರಲ್ ಆರ್ಗನೈಝೇಶನ್ ಆಫ್ ಸೋಶಿಯಲ್ ಇನ್ಶುರೆನ್ಸ್ ಸಂಸ್ಥೆಯ ಪ್ರಕಾರ ದೇಶದ ಖಾಸಗಿ ವಲಯದಲ್ಲಿ ಹೆಚ್ಚಾಗಿ ಉಳಿದಿರುವುದು ಕೇವಲ ನಾಲ್ಕು ಕಾರ್ಮಿಕರಿರುವ ಅತೀ ಸಣ್ಣ ಸಂಸ್ಥೆಗಳಾಗಿದೆ. ಈ ವಿಭಾಗದಲ್ಲಿ 2,29,361 ಸಂಸ್ಥೆಗಳಿವೆ. ಸುಮಾರು 90,460 ಸಂಸ್ಥೆಗಳಲ್ಲಿ ಒಂಬತ್ತು ಕಾರ್ಮಿಕರು ಕೆಲಸಮಾಡುವುದಾಗಿ ತಿಳಿದು ಬಂದಿದೆ.
ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರುವ ಅನೇಕ ಕಳವಳಕಾರಿ ವಿದ್ಯಾಮಾನ ಗಳಿಂದಾಗಿ ಅನೇಕ ಸಂಸ್ಥೆಗಳನ್ನು ಮುಚ್ಚಲು ಕಾರಣವಾಗಿವೆ.