ಈಶ್ವರಮಂಗಲ (ಜನಧ್ವನಿ ವಾರ್ತೆ): ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ರಿ) SSF ಈಶ್ವರಮಂಗಲ ಸೆಕ್ಟರ್ ಇದರ ವಾರ್ಷಿಕ ಮಹಾ ಸಭೆಯು ಡಿ.13 ರಂದು ಸೆಕ್ಟರ್ ಅಧ್ಯಕ್ಷರಾದ ರವೂಫ್ ಮಾಡನ್ನೂರು ರವರ ಅಧ್ಯಕ್ಷತೆಯಲ್ಲಿ ಹುಸೈನ್ ಜೌಹರಿಯವರ ದುವಾದೊಂದಿಗೆ ತ್ವೈಬ ಸೆಂಟರ್ ನಲ್ಲಿ ನಡೆಯಿತು. ತ್ವೈಬ ಮುದರ್ರಿಸರಾದ ದಾವೂದುಲ್ ಹಕೀಂ ಹಿಮಮಿ ಸಖಾಫಿ ಸಂಘಟನೆಯ ಪಾಮುಖ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಸಭೆಯನ್ನು ಉದ್ಘಾಟಿಸಿದರು.
2017-18 ರ ವಾರ್ಷಿಕ ವರದಿಯನ್ನು ಶಾಫಿ ಕೊಪ್ಪಳ ವಾಚಿಸಿದರು ಹಾಗೂ ಲೆಕ್ಕ ಪತ್ರವನ್ನು ಶಫೀಕ್ ಮುಸ್ಲಿಯಾರ್.ಬಿ.ಸಿ. ಮಂಡಿಸಿ ಸಭೆಯಲ್ಲಿ ಎಲ್ಲರ ಸಮ್ಮತಿಯೊಂದಿಗೆ ಅನುಮೋದಿಸಲಾಯಿತು.
ನಂತರ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಮಜೀದ್ ಕಬಕ ರವರ ನೇತೃತ್ವದಲ್ಲಿ ನೂತನ ಸಮೀತಿಯನ್ನು ರಚಿಸಲಾಯಿತು. 17 ಕಾರ್ಯಕಾರಿಗಳನ್ನೊಳಗೊಂಡ ಸಮೀತಿಯಲ್ಲಿ ಅಧ್ಯಕ್ಷರಾಗಿ ಹುಸೈನ್ ಜೌಹರಿ ಪಾಳ್ಯತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಮುಸ್ಲಿಯಾರ್.ಬಿ.ಸಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಅಣಿಲೆ,
ಕ್ಯಾಂಪಸ್ ಕಾರ್ಯದರ್ಶಿಯಾಗಿ ಸೆಲೀತ್ ಮಾಡನ್ನೂರ್, ಉಪಾಧ್ಯಕ್ಷರುಗಳಾಗಿ ಶಂಶುದ್ದೀನ್ ಹನೀಫಿ ಮೀನಾವು ಹಾಗೂ ಶಾಫಿ ಕೊಪ್ಪಳ, ಜೊತೆ ಕಾರ್ಯದರ್ಶಿಗಳಾಗಿ ಸಲ್ಮಾನ್.ಬಿ.ಸಿ ಹಾಗೂ ಇರ್ಷಾದ್ ಕುಕ್ಕಾಜೆ ಯವರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ಇತ್ತೀಚೆಗೆ ನಮ್ಮಿಂದ ವಿದಾಯ ಹೇಳಿದ ಪಿ.ಎ ಉಸ್ತಾದರ ಹೆಸರಲ್ಲಿ ತಹ್ಲೀಲ್ ಸಮರ್ಪಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ SYS ಈಶ್ವರಮಂಗಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ತ್ವೈಬಾ ಸೆಂಟರ್ ಚಿರಪರಿಚಿತರಾಗಿದ್ದ ಮರ್ಹೂಂ ಪಿ.ಎ ಉಸ್ತಾದರ ಕುರಿತು ಕೆಲವು ಉಪದೇಶವಗಳನ್ನು ನೀಡಿ ಸ್ಮರಿಸಿದರು ಹಾಗೂ ಸಿದ್ದೀಖ್ ಹಾಜಿ ಕಬಕ ನೂತನ ಕಾರ್ಯಕಾರಿ ಸಮಿತಿ ಯನ್ನು ಅಭಿನಂಧಿಸಿ ಮಾತನಾಡಿದರು. ನಂತರ ಕಡತಗಳನ್ನು ನೂತನ ಸಮಿತಿಗೆ ಹಸ್ತಾಂತರಿಸಿಲಾಯಿತು.
ಶಾಫಿ ಕೊಪ್ಪಳ ಇವರು ವಂದಿಸಿದರು.