ಹೆಜಮಾಡಿ: ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧೀನದಲ್ಲಿ ಸೆಪ್ಟೆಂಬರ್ 29 ರಂದು ಸಂಜೆ 6:30 ರಿಂದ 10ಗಂಟೆಯವರೆಗೆ ಟೀಂ ಹಸನೈನ್ ಕಾರ್ಯಕರ್ತರ ದ್ವಿತೀಯ ಕ್ಯಾಂಪ್ ಕಾಪುವಿನ ಜೇಸೀ ಭವನದಲ್ಲಿ ಮಹ್ಯದ್ದೀನ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದಾರುಲ್ ಇರ್ಶಾದ್ ಮಾಣಿ ವಿದ್ಯಾರ್ಥಿ ಯಾದ ರಫೀಕ್ ಪಯ್ಯಾರ್ ರವರು ಉದ್ಘಾಟಿಸಿದರು. ಶಿಬಿರದಲ್ಲಿ ಕಾರ್ಯಕರ್ತರಿಗೆ 3 ವಿಶೇಷ ತರಭೇತಿಯನ್ನು ನೀಡಲಾಯಿತು. ಮೊದಲನೆಯದಾಗಿ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ರಕೀಬ್ ಕನ್ನಂಗಾರ್ , ಎರಡನೆ ತರಭೇತಿ ಯನ್ನು ಕಾಪು ಡಿವಿಷನ್ ಉಪಾಧ್ಯಕ್ಷರಾದ ಶಾಹುಲ್ ನ ಈಮಿ ಉಚ್ಚಿಲ, ನಡೆಸಿದರು.
ಮೂರನೇಯದಾಗಿ ಬ್ಯಾನರ್ ಬರೆಯುವ ಪ್ರಾಯೋಗಿಕ ತರಭೇತಿಯನ್ನು ಎಸ್ಸೆಸ್ಸೆಫ್ ಕಾಪು ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಶಮೀರ್ ಕೋಡಿ, ಹಾಗೂ ಡಿವಿಷನ್ ನಾಯಕರಾದ ಆದಿಲ್ ರಝಾ ಉಚ್ಚಿಲ ನಡೆಸಿದರು.
ಉಡುಪಿ ಜಿಲ್ಲಾ ಉಪಾದ್ಯಕ್ಷರಾದ ಶಬೀರ್ ಸಖಾಫಿ , ಡಿವಿಷನ್ ಗೈಡ್ ಆಸೀಫ್ ಬೆಳಪು, ಶಿರ್ವ ಸೆಕ್ಟರ್ ಅಧ್ಯಕ್ಷರಾದ ಸಲೀಂ ಪಕೀರ್ಣಕಟ್ಟೆ, ಪ್ರ.ಕಾರ್ಯದರ್ಶಿ ಸ್ವಾದಿಕ್ ಕೊರಂಟಿಕಟ್ಟೆ ,ಡಿವಿಷನ್ ಕ್ಯಾಂಪಸ್ ಗೈಡ್ ರಿಝ್ವಾನ್ ಉಚ್ಚಿಲ, ಜಿಲ್ಲಾ ಮಾದ್ಯಮಾದ್ಯಕ್ಷ ಇಬ್ರಾಹಿಂ ಮಜೂರ್ ಉಪಸ್ಥಿತಿ ಯಿದ್ದರು.
ಡಿವಿಷನ್ ಪ್ರ.ಕಾರ್ಯದರ್ಶಿ ಸಮೀರ್ ಕೋಡಿ ಸ್ವಾಗತಿಸಿ ಉಚ್ಚಿಲ ಸೆಕ್ಟರ್ ಟೀಂ ಹಸನೈನ್ ಅಮೀರರಾದ ಜಾಬೀರ್ ಮೂಳೂರು ವಂದಿಸಿದರು.
ಪ್ರಕಟಣೆ ಪಿ.ಎಮ್ ಸಿದ್ದೀಕ್ ಪಡುಬಿದ್ರಿ