janadhvani

Kannada Online News Paper

ಅಬುಧಾಬಿ: ಮೂವರು ಏಷ್ಯನ್ ವಂಶಜರಾದ ಮೊಬೈಲ್ ಕಳ್ಳರ ಬಂಧನ

ಅಬುಧಾಬಿ: ಪೊಲೀಸರು ಮೂವರು ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. 100,000 ದಿರ್ಹಂ ಬೆಲೆಬಾಳುವ ಮೊಬೈಲ್‌ಗಳನ್ನು ಅಲ್ ಐನ್ ನಲ್ಲಿನ ಒಂದು ಅಂಗಡಿಯಿಂದ ಕಳವು ಮಾಡಲಾಗಿತ್ತು.

ಅಲ್ ಐನ್ ಪೊಲೀಸ್ ಕ್ರಿಮಿನಲ್ ಸೆಕ್ಯುರಿಟಿ ಸೆಕ್ಟರ್‌ನ ನಿರ್ದೇಶಕ ಕರ್ನಲ್ ಮುಬಾರಕ್ ಸೈಫ್ ಅಲ್-ಸಬೌಸಿ ಈ ಬಗ್ಗೆ ಮಾಹಿತಿ ನೀಡಿದರು.
ಅಲ್ ಐನ್ ನಲ್ಲಿರುವ ಒಂದು ಅಂಗಡಿಯಿಂದ 100 ಫೋನ್ ಗಳನ್ನು ಅಪಹರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ಪಡೆದಿದ್ದರು. ಘಟನೆಯ ಬಗ್ಗೆ ಪೊಲೀಸರ ಸಮಗ್ರ ತನಿಖೆಯಿಂದ ಅಪರಾಧಿಗಳ ಬಂಧನ ನಡೆದಿದೆ. ಅಂಗಡಿಗಳ ಗಾಜನ್ನು ಹೊಡೆದು ಈ ಕಳವು ನಡೆಸಾಲಾಗಿತ್ತು.

ಪೊಲೀಸರು ಶಂಕಿತರನ್ನು ಬಂಧಿಸಿ ವಿಚಾರಿಸಿದಾಗ ಅವರು ಕಳವು ನಡೆಸುರುವುದಾಗಿ ಒಪ್ಪಿಕೊಂಡರು ಎಂದು ಡೈರೆಕ್ಟರ್ ತಿಳಿಸಿದ್ದಾರೆ.

ಅಂಗಡಿ ಮಾಲೀಕರು ಎಚ್ಚರವಾಗಿರಬೇಕು ಮತ್ತು ಭದ್ರತಾ ವ್ಯವಸ್ಥೆಯನ್ನು ಅಂಗಡಿಗೆ ಅಳವಡಿಸಬೇಕು ಎಂದು ಕರ್ನಲ್ ಅಲ್-ಸಬೌಸಿ ಹೇಳಿದ್ದಾರೆ .ಬಂಧಿಸಲಾದ ಮೂವರೂ ಏಷ್ಯನ್ನರು ಎನ್ನಲಾಗಿದೆ.

error: Content is protected !! Not allowed copy content from janadhvani.com