ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶವಾಗಿದೆ ಭವ್ಯ ಭಾರತ. ಹಣೆಗೆ ಕುಂಕುಮ ಧರಿಸಿದ ಹಿಂದುವೂ, ಮಾಲೆ ಧರಿಸಿದ ಕ್ರೈಸ್ತನೂ, ತಲೆಗೆ ಟೊಪ್ಪಿ ಧರಿಸಿದ ಮುಸ್ಲಿಮನು ತೋಳಿಗೆ ತೋಳು ಸೇರಿಸಿ ಒಗ್ಗಟ್ಟಿನಿಂದ ಬಾಳಿದಾಗಲೇ ಸ್ವತಂತ್ರ್ಯ ಭಾರತ ಅರ್ಥಪೂರ್ಣವಾಗುವುದು.
ಪರಕೀಯರ ದಬ್ಬಾಳಿಕೆಯಿಂದ ಭವ್ಯ ಭಾರತವು ಸ್ವತಂತ್ರ್ಯಗೊಂಡು ಏಳು ದಶಕಗಳು ಕಳೆದರೂ ದೇಶವು ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ ತೀರಾ ಹಿಂದುಳಿದು ನಿಂತಿದೆ. ಜಾತಿ, ಧರ್ಮದ ಹೆಸರೇಳಿಕೊಂಡು ಮನುಷ್ಯ, ಮನುಷ್ಯರ ನಡುವೆ ರಕ್ತತರ್ಪಣಗಳು ನಡೆಯುತ್ತಿರುವ ಪ್ರಸಕ್ತವಾದ ಸನ್ನಿವೇಶದಲ್ಲಿ ಮನುಷ್ಯ ಜೀವಗಳ ಪ್ರಾಣಿಗಳಿಗಿಂತಲೂ ಕೀಳಾಗಿ ಹೋಗಿದೆ. ಪ್ರಾಣಿಗಳ ಹೆಸರಿನಲ್ಲಿ ಮನುಷ್ಯ ಬಲಿಗಳು ನಡೆಯುತ್ತಲೇ ಇದೆ..!!
ದೇಶಕ್ಕೆ ಎದುರಾದ ಬಾಹ್ಯ ಸಮಸ್ಯೆಗಳಿಗಿಂತಲೂ, ದೇಶದೊಳಗೆ ಪರಿಹರಿಸಲಾಗದ ರೂಪದಲ್ಲಿನ ಆಂತರಿಕ ಸಮಸ್ಯೆಗಳು ವಿಕೃತ ರೂಪವನ್ನು ಪಡೆಯುತ್ತಿರುವ ಸಂದರ್ಭದಲ್ಲಿ *ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ* ಅನ್ನುವ ಧ್ಯೇಯವಾಕ್ಯದಡಿಯಲ್ಲಿ ಸ್ವತಂತ್ರ್ಯ ಭಾರತದ ಉದಾತ್ತ ಸಂದೇಶವನ್ನು ಸಾರುತ್ತಾ ದಕ್ಷಿಣ ಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ವತಿಯಿಂದ ಬಿ.ಸಿ ರೋಡ್ ನಲ್ಲಿ ಇದೇ ಬರುವ ಆಗಸ್ಟ್ 10ನೇ ಶುಕ್ರವಾರದಂದು ಅಪರಾಹ್ನ 3:00ಗಂಟೆಗೆ *ಬೃಹತ್ ಆಝಾದಿ ರ಼್ಯಾಲಿ* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಮೂರು ದಶಕಗಳಿಂದ ಕನ್ನಡ ಮಣ್ಣಿನಲ್ಲಿ ಧರ್ಮಜಾಗೃತಿಯ ರಣಕಹಳೆಯನ್ನು ಮೊಳಗಿಸುತ್ತಾ, ಸೌಹಾರ್ದ ಭಾರತಕ್ಕಾಗಿ ಸದೃಢ ಯುವಸಮೂಹವನ್ನು ಸೃಷ್ಟಿಸುತ್ತಾ, ಅನೈಕ್ಯತೆ, ಅಶ್ಲೀಲತೆ, ಅಧಾರ್ಮಿಕತೆಯಿಂದ ಯುವ ಸಮೂಹವನ್ನು ದೂರವಿರಿಸಿ, ಕೋಮುವಾದ, ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಿಸಿ ಒಳಿತಿನೆಡೆಗೆ ಆಕರ್ಷಿತರಾಗುವ ನವ ಸಮೂಹವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಕೋಮುವಾದವನ್ನು ಆಹ್ವಾನಿಸುವವನು, ಅದರ ಹೆಸರಲ್ಲಿ ಯುದ್ಧ ಮಾಡುವವನು, ಅದಕ್ಕೋಸ್ಕರ ಮರಣ ಹೊಂದುವವನು ಮುಸ್ಲಿಮನಲ್ಲ ಅಂತ ಕಲಿಸಿದ ಧರ್ಮದ ಅನುಯಾಯಿಗಳನ್ನು, ಒಬ್ಬ ನಿರಪರಾಧಿಯನ್ನು ಕೊಂದರೆ ಸಕಲ ಮಾನವ ಕುಲವನ್ನೇ ಕೊಂದಂತೆ ಎಂದು ಕಲಿತ ಧರ್ಮದ ಅನುಯಾಯಿಗಳನ್ನೇ ಇಸ್ಲಾಂ ಧರ್ಮದ ಹೆಸರೇಳಿಕೊಂಡು ಅಧರ್ಮಿಗಳು ನಡೆಸುವ ದೇಶದ್ರೋಹ ಕೆಲಸಗಳ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನೇ ಸಂಶಯಿಸಿ ನೋಡುವ ಕಾಲಘಟ್ಟದಲ್ಲಿ ಇಸ್ಲಾಂ ಅದು ಶಾಂತಿಯ ಧರ್ಮ , ಖರ್’ಆನ್ ಜಗತ್ತಿಗೆ ಶಾಂತಿಯನ್ನು ಕಲಿಸಿಕೊಟ್ಟ ಗ್ರಂಥವಾಗಿದೆ, ನೈಜ ಮುಸಲ್ಮಾನರಿಗೆ ಎಂದೂ ಭಯೋತ್ಪಾದಕನಾಗಿರಲು ಸಾಧ್ಯವಿಲ್ಲ. ಕಾಲಕ್ಕೆ ಅನುಸಾರವಾಗಿ ಇಸ್ಲಾಂ ಧರ್ಮದ ನೈಜ ಆಶಯ, ಆದರ್ಶಗಳನ್ನು ಜನರಿಗೆ ಮನದಟ್ಟು ಮಾಡುವ ರೀತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿರುವ ಅತೀ ದೊಡ್ಡ ಧಾರ್ಮಿಕ ಸಂಘಟನೆ ಎಸ್ಸೆಸ್ಸಫ್ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡು ಬರುತ್ತಿರುವ ಆಝಾದಿ ರ಼್ಯಾಲಿ ಬಿ.ಸಿ ರೋಡಿನ ರಾಜಬೀದಿಯಲ್ಲಿ ರಾಜಗಾಂಭೀರ್ಯದೊಂದಿಗೆ ಹಾದುಹೋಗುವಾಗ ಈ ಐತಿಹಾಸಿಕ ನಿಮಿಷಗಳಿಗೆ ನೀವೂ ದೃಶ್ಯಸಾಕ್ಷಿಗಳಾಗಿ ಈ ಕಾರ್ಯಕ್ರಮವನ್ನು ವಿಜಯೊಗೊಳಿಸಿರಿ.
ಸ್ನೇಹಜೀವಿ ಅಡ್ಕ_