ಆಧುನಿಕ ಮಕ್ಕಳು ಅಂತರ್ಜಾಲಗಳಲ್ಲಿ ಅಂತರ್ಲೀನವಾಗಿ ಮಾರಕವಾದ ಮದ್ಯ ಮಾದಕಗಳ ದಾಸರಾಗಿ , ಪಾಶ್ಚಾತ್ಯನ್ ಫ್ಯಾಷನ್ ಸಂಸ್ಕ್ರತಿಯ ಗುಲಾಮರಾಗಿ ದಾರಿ ತಪ್ಪುತ್ತಿರುವ ದುರಂತ ಒಂದೆಡೆಯಲ್ಲಾದರೆ, ಪುಟ್ಟ ಕಂದಮ್ಮಗಳನ್ನು ಅತ್ಯಾಚಾರ ಮಾಡಿ ಕೊಂದು ಎಸೆಯುತ್ತಿರುವ ಭೀಬತ್ಸವಾದ ದ್ರಶ್ಯಗಳು ಇಂದು ದೇಶದೆಲ್ಲೆಡೆ ನಡೆಯುತ್ತಿದೆ. ಈ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಸಮಿತಿಯು ರಾಜ್ಯದಾದ್ಯಂತ ಪ್ರತೀ ಸೆಕ್ಟರ್ ಮಟ್ಟದಲ್ಲಿ ” *ನಮ್ಮ ಮಕ್ಕಳು ನಮ್ಮವರಾಗಲು*” ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು *ಎಸ್ಸೆಸ್ಸೆಫ್ ಪಡುಬಿದ್ರಿ ಸೆಕ್ಟರ್* ಮಟ್ಟದ ಜಾಗ್ರತಿ ಕಾರ್ಯಕ್ರಮವು ಸೆಕ್ಟರ್ ಅದ್ಯಕ್ಷರಾದ ಪಿ.ಎಮ್ ಎಸ್ ಸಿದ್ದೀಕ್ ಪಡುಬಿದ್ರಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪಡುಬಿದ್ರಿ ಪೇಟೆಯಲ್ಲಿ ಎಸ್ಸೆಸ್ಸೆಫ್ ಕಾಪು ಡಿವಿಷನ್ ಉಪಾಧ್ಯಕ್ಷ ರಾದ ಶಾಹುಲ್ ಹಮೀದ್ ನ ಈಮಿಯವರ ದುಆದ ಮೂಲಕ ಚಾಲನೆಗೊಂಡು ಬೈಕ್ ಜಾಥಾದ ಮೂಲಕ ಹೆಜಮಾಡಿ ಜಂಕ್ಷನ್ ಬಳಿ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಪ್ರತಿಭೆಯಾದ ಮಾಸ್ಟರ್ ಮುಝಮ್ಮಿಲ್ ಪಡುಬಿದ್ರಿ ಚುಟುಕು ಭಾಷಣವನ್ನು ಹಾಗೂ ರಝಾಕ್ ಕಂಚಿನಡ್ಕ ಇವರು ಪ್ರಾಸ್ತಾವಿಕ ಭಾಷಣ ವನ್ನು ಮಾಡಿದರು.
ಮುಹ್ಯುಸ್ಸುನ್ನಃ ದರ್ಸ್ ಕನ್ನಂಗಾರ್ ಇದರ ವಿದ್ಯಾರ್ಥಿ ಯಾದ ಶರೀಫ್ ಚಾರ್ಮಾಡ್ ಹಾಗೂ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಯಾದ ಮುಹಮ್ಮದ್ ರಕೀಬ್ ಕನ್ನಂಗಾರ್ ರವರು ಕಾರ್ಯಕ್ರಮ ದಲ್ಲಿ ಮುಖ್ಯ ಪ್ರಭಾಷಣವನ್ನು ಮಾಡಿದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾದ ಅಹ್ಮದ್ ಶಬೀರ್ ಸಖಾಫಿ, ಕಂಚಿನಡ್ಕ ಜುಮಾ ಮಸ್ಜಿದ್ ಖತೀಬರಾದ ಅಬ್ದುಲ್ ಲತೀಫ್ ಮದನಿ, ಸದರ್ ಮುಅಲ್ಲಿಂ ಅಶ್ರಫ್ ಸ ಅದಿ, ಕನ್ನಂಗಾರ್ ಹಯಾತುಲ್ ಇಸ್ಲಾಂ ಮದ್ರಸ ಮುಅಲ್ಲಿಂ ಹುಸೈನ್ ಮುಸ್ಲಿಯಾರ್, ಪಡುಬಿದ್ರಿ ಗ್ರಾ.ಪಂ ಸದಸ್ಯರಾದ ಹಸನ್ ಕಂಚಿನಡ್ಕ, ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಾದ್ಯಮ ವಿಭಾಗದ್ಯಕ್ಷರಾದ ಎಮ.ಕೆ ಇಬ್ರಾಹಿಂ ಮಜೂರ್ ಉಪಸ್ಥಿತಿ ಇದ್ದರು.