ಸುಳ್ಯ: SSF ಸುಳ್ಯ ಡಿವಿಷನ್ ಹಾಗೂ SYS ಸುಳ್ಯ ಸೆಂಟರ್ ವತಿಯಿಂದ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಜು.22ರಂದು ಬೃಹತ್ ರಕ್ತದಾನ ಶಿಬಿರವು ಸೈಯಿದ್ ಕುಂಞಿಕೋಯ ಸಅದಿ ತಂಙಳ್ ರವರ ನೇತೃತ್ವದಲ್ಲಿ ಝಿಯಾರತ್ನೊಂದಿಗೆ ನಡೆಯ್ತು.
ಸಭಾ ಕಾರ್ಯಕ್ರಮದ ಉದ್ಘಾಟನೆ ಯನ್ನು ಸ್ಥಳೀಯ ಸಹಮುದರ್ರಿಸರಾದ ಮುಹಮ್ಮದ್ ರಾಫಿ ಅಹ್ಸನಿ ಯವರು ನೆರವೇರಿಸಿದರು. ಡಿವಿಷನ್ ನ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ್ ಬೀಜದಕೊಚ್ಚಿ, ಅಬ್ದುಲ್ ಹಮೀದ್ ಸುಣ್ಣಮೂಲೆ, SYS ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಂದುಂಞ ಗೋರಡ್ಕ, ಇಬ್ರಾಹಿಂ ಸಖಾಫಿ ಪುಂಡೂರು, ರಫೀಕ್ ಚಾಯ್ಸ್, ಪತ್ರಕರ್ತರಾದ ಹಸೈನಾರ್ ಜಯನಗರ, ಶಮೀರ್ ಮೊಗರ್ಪಣೆ, SSF ಜಿಲ್ಲಾ ರಕ್ತದಾನ ಶಿಬಿರ ನಾಯಕರಾದ ಅಬ್ದುಲ್ ಕರೀಂ ಬೊಳಂತೂರ್, ಝುಕರಿಯ ನಾರ್ಶ, ಲೇಡಿಗೋಶನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಎಡ್ವರ್ಡ್ ವಾಸ್, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಕೆ.ಎಂ.ಮುಸ್ತಫ ಜನತಾ, ಡಿವಿಷನ್ ಉಪಾಧ್ಯಕ್ಷರಾದ ಹಸೈನಾರ್ ಗುತ್ತಿಗಾರು, ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಕೊಯಂಗಿ, ಸಿದ್ದೀಖ್ ಕಟ್ಟೆಕ್ಕಾರ್ಸ್ ಹಾಗೂ ಮತ್ತಿತರ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಡಿವಿಷನ್ ಬ್ಲಡ್ ಕ್ಯಾಂಪ್ ಉಸ್ತುವಾರಿಯಾದ ಎ.ಎಂ.ಫೈಝಲ್ ಝುಹ್ರಿ ಕಲ್ಲುಗುಂಡಿ ಯವರು ಸ್ವಾಗತಿಸಿ, ಡಿವಿಷನ್ ಬ್ಲಡ್ ಕ್ಯಾಂಪ್ ಸಹ ಉಸ್ತುವಾರಿ ಸಿರಾಜುದ್ದೀನ್ ಹಿಮಮಿ ಕುಂಭಕ್ಕೋಡು ರವರು ವಂದಿಸಿದರು.