janadhvani

Kannada Online News Paper

ಸೌದಿ: ನಜ್ರಾನ್‌ನಲ್ಲಿ ಶಾಲೆ ಮೇಲೆ ಹೂತಿ ದಾಳಿ- ಅಹದ್ ರುಫೈದಾದಲ್ಲಿ ಏಷ್ಯಾ ಮೂಲದ ವ್ಯಕ್ತಿಗೆ ಗಾಯ

ಖಮೀಸ್ ಮುಶೈತ್ ನಗರದತ್ತ ಹೌತಿಗಳು ಉಡಾಯಿಸಿದ್ದ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಯೆಮನ್‌ನಲ್ಲಿನ ಸಮ್ಮಿಶ್ರ ಪಡೆಗಳ ಅಧಿಕೃತ ವಕ್ತಾರ ಬ್ರಿಗೇಡಿಯರ್ ಜನರಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದ್ದಾರೆ.

ಅಬಹಾ: ಸೌದಿ ಅರೇಬಿಯಾದ ದಕ್ಷಿಣ ಭಾಗದ ಅಸೀರ್ ಪ್ರದೇಶದ ಅಹದ್ ರುಫೈದಾದಲ್ಲಿ ಹೌತಿಗಳು ಉಡಾಯಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆದು ನಾಶಪಡಿಸಿದ ಬಳಿಕ ಅದರ ಅವಶೇಷಗಳು ಬಿದ್ದು ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಶುಕ್ರವಾರ ಅಹದ್ ರುಫೈದಾ ಪ್ರದೇಶದತ್ತ ಹೌತಿಗಳು ಉಡಾಯಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆದು ನಾಶಪಡಿಸಲಾಗಿದೆ ಎಂದು ನಾಗರಿಕ ರಕ್ಷಣಾ ಪಡೆ (ಸಿವಿಲ್ ಡಿಫೆನ್ಸ್) ವಕ್ತಾರರು ತಿಳಿಸಿದ್ದಾರೆ. ಕಟ್ಟಡವೊಂದರೊಳಗಿನ ಪ್ರಾರ್ಥನಾ ಸಭಾಂಗಣ ಹಾಗೂ ಹಲವು ವಾಹನಗಳಿಗೆ ಹಾನಿಯಾಗಿರುವುದಾಗಿ ಸಿವಿಲ್ ಡಿಫೆನ್ಸ್ ತಿಳಿಸಿದೆ.

ಜನರು ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಹೌತಿ ಸಂಘಟನೆ ದಾಳಿಗಳನ್ನು ಮುಂದುವರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಸಂಭವಿಸಿದ ಹಾನಿಯನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ನಜ್ರಾನ್‌ನ ಶಾಲೆ ಮೇಲೂ ದಾಳಿ

2026 ಅಕ್ಟೋಬರ್ 2ರ ಶುಕ್ರವಾರ ಹೌತಿಗಳು ನಜ್ರಾನ್ ನಗರದ ಶಾಲೆಯೊಂದರ ಮೇಲೂ ದಾಳಿ ನಡೆಸಿದ್ದಾರೆ ಎಂದು ಸಿವಿಲ್ ಡಿಫೆನ್ಸ್ ತಿಳಿಸಿದೆ. ಹೌತಿಗಳು ಉಡಾಯಿಸಿದ ಪ್ರಕ್ಷೇಪಕವು ಶಾಲೆಯ ಮೇಲೆ ಬಿದ್ದು ಭೌತಿಕ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಖಮೀಸ್ ಮುಶೈತ್ ನಗರದತ್ತ ಹೌತಿಗಳು ಉಡಾಯಿಸಿದ್ದ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಯೆಮನ್‌ನಲ್ಲಿನ ಸಮ್ಮಿಶ್ರ ಪಡೆಗಳ ಅಧಿಕೃತ ವಕ್ತಾರ ಬ್ರಿಗೇಡಿಯರ್ ಜನರಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದ್ದಾರೆ.

ನಾಗರಿಕರು ಮತ್ತು ಅವರ ಆಸ್ತಿಪಾಸ್ತಿಗಳನ್ನು ಹೌತಿಗಳು ಮತ್ತೆ ಗುರಿಯಾಗಿಸಿಕೊಂಡಿರುವುದರ ಮುಂದುವರಿದ ಭಾಗವೇ ಈ ದಾಳಿಗಳಾಗಿವೆ ಎಂದು ಸಮ್ಮಿಶ್ರ ಪಡೆಗಳ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿರಿ...