janadhvani

Kannada Online News Paper

ಸೌದಿ: ವಿವಿಧ ಪ್ರಾಂತ್ಯಗಳಲ್ಲಿ ಮಳೆ, ಪ್ರವಾಹ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ

ಜಿಝಾನ್, ಅಸೀರ್, ಅಲ್-ಬಹಾ, ಮಕ್ಕಾ ಮತ್ತು ಮದೀನಾ ಪ್ರದೇಶಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.

ರಿಯಾದ್: ಸೌದಿ ಅರೇಬಿಯಾದ ವಿವಿಧ ಪ್ರದೇಶಗಳಲ್ಲಿ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಳೆಯೊಂದಿಗೆ ಪ್ರವಾಹ ಹಾಗೂ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಜಿಝಾನ್, ಅಸೀರ್, ಅಲ್-ಬಹಾ, ಮಕ್ಕಾ ಮತ್ತು ಮದೀನಾ ಪ್ರದೇಶಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು, ತಬೂಕ್, ಅಲ್-ಜೌಫ್, ಹಾಯಿಲ್, ಖಸೀಮ್, ಉತ್ತರ ಗಡಿ ಪ್ರದೇಶ ಹಾಗೂ ಪೂರ್ವ ಪ್ರಾಂತ್ಯಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ಸ್ಪಷ್ಟಪಡಿಸಿದೆ.

ಇದರ ಜೊತೆಗೆ, ಈ ಪ್ರದೇಶಗಳಲ್ಲಿ ಹಾಗೂ ನಜ್ರಾನ್ ಪ್ರದೇಶದ ಕೆಲವು ಭಾಗಗಳಲ್ಲಿ ಧೂಳಿನ ಬಿರುಗಾಳಿ ಬೀಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯ ಮತ್ತು ಮಕ್ಕಾದ ಕರಾವಳಿ ಪ್ರದೇಶಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆಯೂ ಇದೆ.

ಇದನ್ನೂ ಓದಿರಿ...