ಕಲ್ಲಿಕೋಟೆ: ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಅವರು ಪ್ರ.ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮರ್ಕಝ್ನ ವಿರುದ್ದ ಸುಳ್ಳು ಸುದ್ದಿ ಪ್ರಚಾರ ಮಾಡುವವರ ವಿರುದ್ಧ ಕುಂದಮಂಗಲಂ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರನ್ವಯ ಪ್ರಕರಣವನ್ನು ದಾಖಲಿಸಿ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಪೊಲೀಸರು ಇದು ಗಂಭೀರ ಕ್ರಿಮಿನಲ್ ಅಪರಾಧ ಎಂದಿದ್ದಾರೆ.
2012 ರಲ್ಲಿ, ಯು.ಎಸ್ ದೂತಾವಾಸದ ಹಿರಿಯ ಅಧಿಕಾರಿಗಳು ಮರ್ಕಝ್ಗೆ ಭೇಟಿ ನೀಡಿರುವುದನ್ನು ಅವಹೇಳನಕಾರಿಯಾಗಿ ಮತ್ತು ತಪ್ಪಾಗಿ ಚಿತ್ರೀಕರಿಸಿ ಸಾಮಾಜಿಕ ತಾಣದಲ್ಲಿ ಪ್ರಚಾರ ಪಡಿಸಿದ್ದು ಗಂಭೀರ ಅಪರಾಧವಾಗಿದೆ. ಮರ್ಕಝ್ ಅಥಾರಿಟಿಯೊಂದಿಗೆ ಕ್ಷಮೆ ಯಾಚಿಸಿ ಮತ್ತು ಈ ರೀತಿ ಪುನರಾವರ್ತಿಸುವುದಿಲ್ಲ ಎಂದು ಲಿಖಿತವಾಗಿ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಕಾರಣ ಎ.ಪಿ. ಉಸ್ತಾದರ ಅನುಮತಿಯೊಂದಿಗೆ ಈ ಬಾರಿ ಹೆಚ್ಚಿನ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ ನಲ್ಲಿ ಅವರು ಹಂಚಿಕೊಂಡಿದ್ದ ಬರಹಗಳನ್ನು ಹಿಂತೆಗೆದುಕೊಂಡು ಕ್ಷಮೆಯಾಚಿಸಿದ್ದರು.ಮರ್ಕಝ್ ಮತ್ತು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಬಗ್ಗೆ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುವವರ ಕುರಿತು ಸ್ಕ್ರೀನ್ ಶಾಟ್ ನೊಂದಿಗೆ ಮೇಲ್ ಮಾಡಿರಿ.
ಮೇಲ್ ID: markazlegal@gmail.com
ಎಂ. ಲುಕ್ಮಾನ್
ಮೀಡಿಯಾ ಇನ್ಚಾರ್ಜ್, ಮರ್ಕಝ್