ಮೋರ್ನಿಂಗ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ನ 9ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 13/12/2025 ರಂದು ಮೋರ್ನಿಂಗ್ ಸ್ಟಾರ್ ಕ್ಲಬ್ ಆವರಣದಲ್ಲಿ ಮಹಾಸಭೆ ನಡೆಯಿತು. ಈ ಸಭೆಯಲ್ಲಿ 2025–2027 ಅವಧಿಗೆ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕ್ಲಬ್ನ ಚೇರ್ಮನ್ ಆಗಿ ಇಬ್ರಾಹಿಂ ಅರಫಾ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಫಯಾಝ್ ಇಂಜಿನಿಯರ್ ಸತತ ಎರಡನೇ ಬಾರಿ ಆಯ್ಕೆಯಾದರು, ಪ್ರಧಾನ ಪ್ರಧಾನ ಕಾರ್ಯದರ್ಶಿಯಾಗಿ ರಾಹಿದ್, ಕೋಶಾಧಿಕಾರಿಯಾಗಿ ರಝಾಕ್ ಎಂ.ಕೆ, ಆಯ್ಕೆಗೊಂಡರೆ ಉಪಾಧ್ಯಕ್ಷರಾಗಿ ಅನ್ಸಾರ್ ಅಂಚು, ಕಾರ್ಯದರ್ಶಿಯಾಗಿ ಅಲೀಮ್ ಅವರನ್ನು ನೇಮಕ ಮಾಡಲಾಯಿತು.
ಇದಲ್ಲದೆ ಸಲಹಾ ಮಂಡಳಿ ರಚಿಸಿ ಸದಸ್ಯರಾಗಿ ನಾಸಿರ್, ರಹೀಮ್, ಅಶ್ರಫ್ ಉಮ್ಮಿ ಮತ್ತು ಸಹದ್ ಇವರನ್ನು ನೇಮಕ ಮಾಡಲಾಯಿತು. ಮಾಧ್ಯಮ ವಿಭಾಗದ ಜವಾಬ್ದಾರಿಯನ್ನು ಟಿ.ಎಂ ಖಾದರ್ ಮತ್ತು ಶರೀಫ್ ಮೇಲಂಗಡಿ ಇವರಿಗೆ ವಹಿಸಲಾಯಿತು ಅದರಂತೆ ಮೀಡಿಯಾ ಎಡಿಟರ್ ಆಗಿ ಕಯಬ್ ಕಾರ್ಯ ನಿರ್ವಹಿಸಲಿದ್ದಾರೆ,
ನೂತನವಾಗಿ ಆಯ್ಕೆಯಾದ ಆಡಳಿತ ಸಮಿತಿಯು ಕ್ಲಬ್’ನ ಕ್ರಿಕೆಟ್ ತಂಡಕ್ಕೆ ಹಾರಿಸ್ ಹಾಗೂ ಇರ್ಷಾದ್ ಇಂಜಿನಿಯರ್ ಇವರಿಗೆ ಕ್ರಮವಾಗಿ ನಾಯಕ, ಉಪನಾಯಕತ್ವದ ಮಣೆ ನೀಡಲಾಯಿತು, ಮುಂದಿನ ಅವಧಿಯಲ್ಲಿ ಕ್ಲಬ್ನ ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಿ, ಯಶಸ್ವಿಯ ಪಥ ಸಾಗಿಸುವ ಬಗ್ಗೆ ಸಭೆಯು ಒಕ್ಕೊರಲಲ್ಲಿ ಧ್ವನಿಗೂಡಿಸಿತು, ಸಭೆ ಸೇರಿದ ಪದಾಧಿಕಾರಿಗಳನ್ನು ಹಾಗೂ ಸರ್ವ ಸದಸ್ಯರನ್ನು ಸಭಾಧ್ಯಕ್ಷರಾದ ಪಯಾಝ್ ಇಂಜಿನಿಯರ್ ಸ್ವಾಗತಿಸಿ ವಂದಿಸಿದರು.








