ಮಂಗಳೂರು: ಇಹ್ಸಾನ್ ಕರ್ನಾಟಕ 15 ವರ್ಷಕ್ಕಿಂತ ಮುಂಚೆ ರಂಝಾನ್ ತಿಂಗಳಲ್ಲಿ ಉತ್ತರ ಕರ್ನಾಟಕಕ್ಕೆ ದಾಇಗಳನ್ನು ಕಳಿಸಿ ಧಾರ್ಮಿಕ ಬೋಧನೆಯ ಮೂಲಕ ಪ್ರಾರಂಬಿಸಿ ಇಂದು ಉತ್ತರ ಕರ್ನಾಟಕದಲ್ಲಿ ಹಲವಾರು ಮಸೀದಿಗಳು ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ಕೇಂದ್ರಗಳು ವಿವಿದ ಜಿಲ್ಲೆಗಳಲ್ಲಿ ತಲೆ ಎತ್ತಿ ನಿಲ್ಲಲು ಕಾರಣವಾಗಿದೆ.
ಇಹ್ಸಾನಿನ ವಿವಿಧ ಕ್ಯಾಂಪಸ್ ಗಳಲ್ಲಿ ಸುಮಾರು 4 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು 70ರಷ್ಟು ಅಧ್ಯಾಪಕ ವೃಂದವನ್ನು ಹೊಂದಿದೆ. ಅನಿವಾಸಿ ಸಂಘಟನೆ ಕೆಸಿಎಫ್ ಇದರ ಬೆನ್ನೆಲುಬಾಗಿದೆ. ಅಲ್ಲದೆ ಪ್ರೀ ಸ್ಕೂಲ್ ನಂತಹ ವಿವಿಧ ಹೊಸ ಸಂಸ್ಥೆಗಳು ಬೆಳೆದು ಬರುತ್ತಿವೆ. ಇದರ ಭಾಗವಾಗಿ 3 ನೇ ಇಹ್ಸಾನೋತ್ಸವ ಕಾರ್ಯಕ್ರಮವು ಮಂಗಳೂರು ಅಡ್ಯಾರ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಇದರ ಪ್ರಯುಕ್ತ ಡಿಸೆಂಬರ್ 17 ರಂದು ಮಂಗಳೂರು ಎಸ್ ವೈ ಎಸ್ ಕೇಂದ್ರ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಇಹ್ಸಾನ್ ಅಧ್ಯಕ್ಷ ಹಫೀಳ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತಾವಿಕವಾಗಿ ರಾಜ್ಯ ವಕಫ್ ಕೌನ್ಸಿಲ್ ಉಪಾಧ್ಯಕ್ಷ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು ಮಾತನಾಡಿದರು. ಕರ್ನಾಟಕ ಸುನ್ನಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಸಭೆಯನ್ನು ಉದ್ಘಾಟಿಸಿದರು.ಸುನ್ನಿ ಸಂಘ ಕುಟುಂಬದ ನಾಯಕರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್ ಶುಭ ಕೋರಿದರು.
ಇಹ್ಸಾನಿನಲ್ಲಿ ಶಿಕ್ಷಣ ಪಡೆಯುತ್ತಿರುವ 4 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನೊಳಗೊಂಡ ತಂಡದಿಂದ ಎಪ್ರಿಲ್ ನಲ್ಲಿ ಮಂಗಳೂರು ಅಡ್ಯಾರ್ ಕಣ್ಣೂರಿನಲ್ಲಿ ಎರಡು ದಿವಸಗಳ ಇಹ್ಸಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿ.
ಇದರ ಪ್ಲಾನಿಂಗ್ ಸಮಿತಿ ಚೇಯರ್ ಮೇನ್ ಆಗಿ ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್ ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು ಹಾಗೂ ಸದಸ್ಯರು ಗಳಾಗಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ,ಎನ್ ಕೆ ಎಂ ಶಾಫಿ ಸ ಅದಿ ಬೆಂಗಳೂರು, ಕೆಕೆಎಂ ಕಾಮಿಲ್ ಸಖಾಫಿ, ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಎಮ್ ವೈ ಹಫೀಳ್ ಸ ಅದಿ ಕೊಡಗು,ಹಸೈನಾರ್ ಆನೆಮಹಲ್ ,ಹಾಫಿಳ್ ಯಾಕುಬ್ ಸಅದಿ ನಾವೂರು,ನವಾಝ್ ಸಖಾಫಿ ಅಡ್ಯಾರ್ ಪದವು,ಖಲೀಲ್ ಮಾಲಿಕಿ,ಹಂಝ ಮೈಂದಾಲ,ಸಲೀಂ ಕನ್ಯಾಡಿ,ತೌಸೀಫ್ ಸಅದಿ ಹರೇಕಲ,ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೆಸಿಎಫ್ ನಾಯಕರದ ಅಬೂಬಕ್ಕರ್ ಹಾಜಿ ರೈಸ್ಕೊ, ಖಮರುದ್ದೀನ್ ಗೂಡಿನಬಳಿ, ಹಸೈನಾರ್ ಅಮಾನಿ ಅಜ್ಜಾವರ,ಅಬೂಸಾಲಿಹ್ ಸಖಾಫಿ, ಜೌಹರಿ ಖತರ್, ಇಕ್ಬಾಲ್ ಮಂಜನಾಡಿ ಉಪಸ್ಥಿತರಿದ್ದರು.ಇಹ್ಸಾನ್ ಈ.ಓ ಅನ್ವರ್ ಅಸ್ಅದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







