janadhvani

Kannada Online News Paper

ಡಿಸೆಂಬರ್ 12 ಪುರಭವನದಲ್ಲಿ ಎಸ್. ಎಂ. ಎ. ವತಿಯಿಂದ ವಕ್ಫ್ ಜಾಗೃತಿ ಸಮಾವೇಶ

ಮಂಗಳೂರು : ಕರ್ನಾಟಕ ರಾಜ್ಯಾದ್ಯಂತ ಮೊಹಲ್ಲಾಗಳನ್ನು ಕೇಂದ್ರೀಕರಿಸಿಕೊಂಡು ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಎಸ್. ಎಂ. ಎ. ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿಸೆಂಬರ್ 12 ಗುರುವಾರ ಬೆಳಗ್ಗೆ 10 ರಿಂದ ಅಪರಾಹ್ನ 1 ಗಂಟೆಯ ತನಕ ಮಂಗಳೂರಿನ ಪುರಭವನದಲ್ಲಿ ವಕ್ಫ್ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಎಸ್. ಎಂ. ಎ. ರಾಜ್ಯಾಧ್ಯಕ್ಷ ಉಜಿರೆ ಸಯ್ಯಿದ್ ಇಸ್ಮಾಯಿಲ್ ತಂಙ್ಙಳ್ ರವರ ಅಧ್ಯಕ್ಷತೆಯಲ್ಲಿ‌ ನಡೆಯುವ ಕಾರ್ಯಕ್ರಮವನ್ನು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಮೂಲಕ ಚಾಲನೆ ನೀಡಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದ ಉದ್ಘಾಟನೆಯನ್ನು ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನ ಎನ್‌.ಕೆ. ಎಂ. ಶಾಫಿ ಸಅದಿಯವರು ನೆರವೇರಿಸಲಿದ್ದು ಎಸ್. ಎಂ. ಎ. ರಾಜ್ಯ ಕೋಶಾಧಿಕಾರಿ ಹಮೀದ್ ಹಾಜಿ ಕೊಡುಂಗೈ ಪ್ರಾಸ್ತಾವಿಕವಾಗಿ ಮಾತನಾಡಲಿರುವರು. ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಘಟನಾ ನಿಲುವನ್ನು ಡಾ. ಎಂ. ಎಸ್. ಎಂ. ಅಬ್ದುಲ್ ರಶೀದ್ ಝೈನೀ ಕಾಮಿಲ್ ಸಖಾಫಿ, ವಕ್ಫ್ ಕಾಯಿದೆ ಜಾರಿಯ ಆತಂಕ ಹಾಗೂ ಹೋರಾಟ ಎಂಬ ವಿಷಯದಲ್ಲಿ ವಕ್ಫ್ ಬೋರ್ಡ್ ಮಾಜಿ ಕಾರ್ಯನಿರ್ವಹಣಾಧಿಕಾರಿ ಮುಜೀಬುಲ್ಲಾ ಝಫಾರಿ, ಮುಸ್ಲಿಂ ಸಮುದಾಯದ ಆತಂಕಗಳು ಎಂಬ ವಿಷಯದಲ್ಲಿ ಖ್ಯಾತ ವಕೀಲರಾದ ದಿನೇಶ್ ಹೆಗಡೆ ಉಳೇಪಾಡಿಯವರು ಮಾತಾಡುವರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮೌಲಾನಾ ಕಾವಲ್ ಕಟ್ಟೆ ಹಝ್ರತ್, ಪ್ರಧಾನ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ, ಯೆನೇಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಹಾಜಿ, ಸುನ್ನೀ ಸಂಘಟನೆಗಳ ನಾಯಕರಾದ ಪಿ. ಪಿ. ಅಹ್ಮದ್ ಸಖಾಫಿ‌ ಕಾಶಿಪಟ್ಣ, ಎಸ್. ಪಿ. ಹಂಝ ಸಖಾಫಿ, ಎಸ್. ವೈ.ಎಸ್. ಅಧ್ಯಕ್ಷ ಹಫೀಳ್ ಸಅದಿ ಕೊಳಕೇರಿ, ಎಸ್. ಜೆ.ಎಂ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೆ. ಎಂ‌. ಕಾಮಿಲ್ ಸಖಾಫಿ, ಎಸ್ ಎಸ್ ಎಫ್ ಅಧ್ಯಕ್ಷ ಸುಫ್ಯಾನ್ ಸಖಾಫಿ, ಸಾಮಾಜಿಕ ಮುಖಂಡರಾದ ಬಿ. ಎಂ. ಪಾರೂಕ್, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ವಕ್ಫ್ ಜಿಲ್ಲಾ ಅಧ್ಯಕ್ಷ ಲಕ್ಕಿಸ್ಟಾರ್ ನಾಸಿರ್, ಎಸ್.ಎಂ.ಆರ್. ರಶೀದ್ ಹಾಜಿ, ಹೈಝಂ ಶಾಕಿರ್ ಹಾಜಿ, ಎಚ್. ಎಚ್. ಅಮೀನ್ ಮುಂತಾದವರು ಭಾಗವಹಿಸಲಿರುವರು ಎಂದು ಎಸ್.ಎಂ.ಎ. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com