ಉಳ್ಳಾಲ ಅಳೇಕಲ : ವಲಿಯುಲ್ಲಾಹಿ ಅಚ್ಚಿ ಸಾಹಿಬ್,(ಖ. ಸಿ) ದರ್ಗಾ ಶರೀಫ್ ಅಳೇಕಲ ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭ 2025 ಜನವರಿ 12 ರಿಂದ 19 ರ ವರೆಗೆ ಗೌರವಾನ್ವಿತ ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ ನಾಯಕತ್ವದಲ್ಲಿ ಮತ ಪ್ರಭಾಷಣ, ಬುರ್ದಾ ಮಜ್ಲಿಸ್ , ವಾರ್ಷಿಕ ದಿಕ್ರ್ ಹಲ್ಕಾ , ಸೌಹಾರ್ದ ಸಂಗಮ ನಡೆಯಲಿದೆ.
ಎಂಟು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ನಜಾತ್ತುಸ್ಸಿಬಿಯಾನ್ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಮಸ್ಜಿದುಲ್ ಜಾಮಿಉಲ್ ಅಮೀನ್ ಅಧ್ಯಕ್ಷರಾದ ಯು ಎಸ್ ಹಂಝ ಹಾಜಿ ವಹಿಸಿದರು.
ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ಮಖಾಂ ಝಿಯಾರತಿಗೆ ನೇತ್ರತ್ವ ನೀಡಿ ದುಆ ನೆರವೇರಿಸಿದರು. ಸಯ್ಯಿದ್ ಮದನಿ ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು.
ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಸಯ್ಯಿದ್ ಜಲಾಲುದ್ದೀನ್ ತಂಙಲ್ ಮತ್ತು ಸಯ್ಯಿದ್ ಮದನಿ ದರ್ಗಾ ಸದಸ್ಯರಾದ ಸಯ್ಯಿದ್ ಝಿಯಾದ್ ತಂಙಲ್ ಮಾತನಾಡಿದರು.
ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿ ರಚಿಸಲಾಯಿತು. ಚೇರ್ಮನ್ ಆಗಿ ಯು.ಎ ಇಸ್ಮಾಯಿಲ್, ಜನರಲ್ ಕನ್ವೀನರಾಗಿ ಅಶ್ರಫ್ ಸುಳ್ಯ, ಫೈನಾನ್ಸ್ ಕನ್ವೀನರಾಗಿ ಫಾಝಿಲ್ ಮಾಸ್ಟರ್, ಪ್ರಚಾರ ಸಮಿತಿ ಉಸ್ತುವಾರಿಗಳಾಗಿ ಸೆರ್ಕಳ ಇಬ್ರಾಹಿಂ ಸಖಾಫಿ ಹಾಗು ಬಶೀರ್ ಅಳೇಕಲ, ಲೈಟಿಂಗ್ ಲೀಡರಾಗಿ ತೌಸೀಫ್ ಜಿ ಜಿ ಗಾಯ್ಸ್, ಡೆಕೊರೇಷನ್ ಉಸ್ತುವಾರಿಯಾಗಿ ಜಿ ಜಿ ಗಾಯ್ಸ್, ಯು ಡಿ ಹಸನ್ ಹಾಗು ತಾಜುದ್ದೀನ್ ಕಕ್ಕೆತೋಟ, ಸಂದಲ್ ಸಮಿತಿ ಉಸ್ತುವಾರಿಗಳಾಗಿ ಅಮೀರ್ ಜಝೀರ ಹಾಗು ನವಾಝ್ ಪಾಂಡೇಲ್, ಅತಿಥಿಗಳ ಸ್ವೀಕಾರ ಸಮಿತಿಗಳಾಗಿ ಅಶ್ರಫ್ ಸುಳ್ಯ, ಇರ್ಫಾನ್ ಸಅದಿ ಹಾಗು ಬಾಶಿತ್ ತಂಙಳ್, ಸ್ವಯಂ ಸೇವಕರ ನಾಯಕರಾಗಿ ರಶೀದಾಕ ಪಾಂಡೇಲ್ ಹಾಗು ನಝೀರಾಕ, ಸಿಹಿಪಾನೀಯ ಕೌಂಟರ್ ಉಸ್ತುವಾರಿಯಾಗಿ ರಫೀಕ್ ಕಮಿಟಿ ಮತ್ತು ಟ್ರಾಫಿಕ್ ನಿಯಂತ್ರಕರಾಗಿ ರಮೀಝ್ ಜಾರಪಕ್ಕ ಮತ್ತು ತಾಜುದ್ದೀನ್ ಇವರುಗಳನ್ನು ಆರಿಸಲಾಯಿತು.
ಮಸ್ಜಿದ್ ಸಮಿತಿ ಉಪಾಧ್ಯಕ್ಷರಾದ ಫಾರೂಖ್ ಹಾಜಿ, ಕೋಶಾಧಿಕಾರಿ ಸಿ ಎಂ ಇಬ್ರಾಹಿಂ, ಸಯ್ಯಿದ್ ಮದನಿ ದರ್ಗಾ ಸಮಿತಿ ಸದಸ್ಯರಾದ ಯು ಡಿ ಅಶ್ರಫ್ ಉಪಸ್ಥಿತರಿದ್ದರು.
ಸಮಿತಿ ಸದಸ್ಯರಾದ ಫಾಝಿಲ್ ಮಾಸ್ಟರ್ ಸ್ವಾಗತಿಸಿದರು, ಅನ್ಸಾರ್ ಅಳೇಕಲ ನಿರೂಪಿಸಿದರು. ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಯು ಎಸ್ ಜಾಫರ್ ಅಳೇಕಲ ಧನ್ಯವಾದಗೈದರು.