janadhvani

Kannada Online News Paper

SჄS ಮಾಣಿ ಸಮಿತಿ ವತಿಯಿಂದ ಪ್ರಾಥಮಿಕ ತರಬೇತಿ ಶಿಬಿರ

ಮಾಣಿ : ತಾನು ಪಾಲಿಸುವುದನ್ನು ಇತರರಿಗೆ ಬೋಧಿಸಬೇಕು ಮತ್ತು ತನ್ನ ವ್ಯಕ್ತಿತ್ವದಿಂದ ಇತರರನ್ನು ಆಕರ್ಷಿಷಿಸಲು ಸಾಧ್ಯವಾಗುವುದಾದರೆ ಆತ ನಾಯಕನ ಗುಣಹೊಂದಿದವನಾಗುತ್ತಾನೆ ಎಂದು ಎಸ್‌ವೈ‌ಎಸ್ ಪುತ್ತೂರು ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ಹೇಳಿದರು. ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಮಾಣಿ ಸರ್ಕಲ್ ಸಮಿತಿ ವತಿಯಿಂದ ಕೊಡಾಜೆಯಲ್ಲಿ ನಡೆದ ” ಪ್ರಾಥಮಿಕ ತರಬೇತಿ ಶಿಬಿರ ನಡೆಸಿಕೊಟ್ಟು ಮಾತನಾಡಿದರು.

ಹೈದರ್ ಸಖಾಫಿ ಶೇರಾ ರವರ ಅಧ್ಯಕ್ಷತೆಯಲ್ಲಿ ಇಬ್ರಾಹಿಂ ಮದನಿ ಕೊಡಾಜೆ ಕಾರ್ಯಕ್ರಮ ಉದ್ಘಾಟಿಸಿದರು, ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು,

ಈಸ್ಟ್ ಜಿಲ್ಲಾ ಎಸ್‌ವೈ‌ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಶುಭಹಾರೈಸಿದರು,ಕಾರ್ಯಕ್ರಮದಲ್ಲಿ ನಾಯಕರುಗಳಾದ ಯೂಸುಫ್ ಹಾಜಿ ಸೂರಿಕುಮೇರು, ಅಬ್ದುಲ್ ಕರೀಂ ಸೂರಿಕುಮೇರು, ರಫೀಕ್ ಮದನಿ ಪಾಟ್ರಕೋಡಿ,ನಝೀರ್ ಅಮ್ಜದಿ ಸರಳಿಕಟ್ಟೆ,ಜಮಾಲ್ ಝುಹ್ರಿ ನೇರಳಕಟ್ಟೆ, ಫಾರೂಕ್ ಹನೀಫಿ ಪರ್ಲೊಟ್ಟು,ಕಾಸಿಂ ಮುಸ್ಲಿಯಾರ್ ಸೂರ್ಯ,ಯೂಸುಫ್ ಕೊಡಾಜೆ,ಅಬೂಬಕ್ಕರ್ ಕೊಡಾಜೆ,ಶಾಫಿ ಕೊಡಾಜೆ,ಕಲಂದರ್ ಬುಡೋಳಿ,ಹಮೀದ್ ಬುಡೋಳಿ,ಮುಸ್ತಫಾ ಬುಡೋಳಿ,ಸಾಜಿದ್ ಪಾಟ್ರಕೋಡಿ,ಮುಂತಾದವರು ಉಪಸ್ಥಿತರಿದ್ದರು, ಶೇರಾ ಬುಡೋಳಿ, ಸೂರಿಕುಮೇರು, ನೇರಳಕಟ್ಟೆ, ಮಿತ್ತೂರು, ಸೂರ್ಯ, ಪಾಟ್ರಕೋಡಿ ಯುನಿಟ್ ಗಳ ಎಕ್ಸಿಕ್ಯುಟಿವ್ ನಾಯಕರುಗಳು ಶಿಬಿರದಲ್ಲಿ ಪಾಲ್ಗೊಂಡರು,ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು,ಜಲೀಲ್ ಮುಸ್ಲಿಯಾರ್ ಕೊಡಾಜೆ ಧನ್ಯವಾದಗೈದರು.

error: Content is protected !! Not allowed copy content from janadhvani.com