ದುಬೈ: ಯುಎಇ ಘೋಷಿಸಿರುವ ಎರಡು ತಿಂಗಳ ಕ್ಷಮಾದಾನ ಇಂದು ಕೊನೆಗೊಳ್ಳಲಿದೆ. ಅಕ್ರಮ ನಿವಾಸಿಗಳನ್ನು ನೇಮಿಸಿಕೊಳ್ಳುವ ಉದ್ಯೋಗದಾತರಿಗೆ ಶುಕ್ರವಾರದಿಂದ 1 ಮಿಲಿಯನ್ ದಿರ್ಹಂ ವರೆಗೆ ದಂಡ ವಿಧಿಸಲಾಗುತ್ತದೆ. ನವೆಂಬರ್ 1 ರಿಂದ ರಾಷ್ಟ್ರವ್ಯಾಪಿ ತಪಾಸಣೆ ಆರಂಭವಾಗಲಿದೆ ಎಂದು ವಲಸೆ ಮತ್ತು ರೆಸಿಡೆನ್ಸಿ ಇಲಾಖೆ ಪ್ರಕಟಿಸಿದೆ.
ವೀಸಾ ಅವಧಿ ಮುಗಿದಿರುವ ಅಕ್ರಮ ನಿವಾಸಿಗಳಿಗೆ ಯುಎಇ ಘೋಷಿಸಿರುವ ಕ್ಷಮಾದಾನ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿತ್ತು. ಈ ಅವಧಿಯಲ್ಲಿ ಹೊಸ ವೀಸಾಕ್ಕೆ ಬದಲಾಯಿಸಲು ಮತ್ತು ದಂಡವಿಲ್ಲದೆ ಸ್ವದೇಶಕ್ಕೆ ಹಿಂತಿರುಗಲು ಅವಕಾಶವಿತ್ತು. ಕ್ಷಮಾದಾನದ ಲಾಭ ಪಡೆದು ತಮ್ಮ ದೇಶಕ್ಕೆ ಹಿಂತಿರುಗುವವರಿಗೆ ಮತ್ತೆ ಯುಎಇ ಪ್ರವೇಶಕ್ಕೆ ಯಾವುದೇ ನಿಷೇಧವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ತಿಂಗಳ ಕ್ಷಮಾದಾನ ಅಕ್ಟೋಬರ್ 31 ರಂದು ಕೊನೆಗೊಳ್ಳಲಿರುವುದರಿಂದ ಯುಎಇ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಸಿಟಿಜನ್‌ಶಿಪ್, ಕಸ್ಟಮ್ಸ್ ಮತ್ತು ಪೋರ್ಟ್ ಸೆಕ್ಯುರಿಟಿಯು ಸಕಾಲಿಕ ಎಚ್ಚರಿಕೆಯನ್ನು ನೀಡಿದೆ.