janadhvani

Kannada Online News Paper

ಬಹುನಿರೀಕ್ಷಿತ ಆಪಲ್ ಪೇ- ಡಿಜಿಟಲ್ ಪಾವತಿ ಸೇವೆಯು ಒಮಾನ್‌ನಲ್ಲಿಯೂ ಲಭ್ಯ

ಯುಎಇ, ಸೌದಿ ಅರೇಬಿಯಾ, ಕತಾರ್ ಮತ್ತು ಬಹ್ರೇನ್‌ನಲ್ಲಿ, ಈಗಾಗಲೇ ಅಸ್ತಿತ್ವದಲ್ಲಿರುವ Apple Pay ಅನ್ನು ಬಳಸಿಕೊಂಡು ಫೋನ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಪಾವತಿ ಸೇವೆಯನ್ನು ಒದಗಿಸಲಾಗುತ್ತದೆ.

ಮಸ್ಕತ್: ಬಹುನಿರೀಕ್ಷಿತ ಆಪಲ್ ಪೇ ಡಿಜಿಟಲ್ ಪಾವತಿ ಸೇವೆಯು ಮುಂಬರುವ ಬೇಸಿಗೆಯಲ್ಲಿ ಒಮಾನ್‌ನಲ್ಲಿಯೂ ಪ್ರಾರಂಭವಾಗಲಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.

ಯುಎಇ, ಸೌದಿ ಅರೇಬಿಯಾ, ಕತಾರ್ ಮತ್ತು ಬಹ್ರೇನ್‌ನಲ್ಲಿ, ಈಗಾಗಲೇ ಅಸ್ತಿತ್ವದಲ್ಲಿರುವ Apple Pay ಅನ್ನು ಬಳಸಿಕೊಂಡು ಫೋನ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಪಾವತಿ ಸೇವೆಯನ್ನು ಒದಗಿಸಲಾಗುತ್ತದೆ. Comex 2024 ನಲ್ಲಿ ಮಾತನಾಡುತ್ತಾ, ಸೆಂಟ್ರಲ್ ಬ್ಯಾಂಕ್ ಆಫ್ ಒಮಾನ್ (CBO) ಅಧಿಕಾರಿಯೊಬ್ಬರು ಮುಂದಿನ ಎರಡು ತಿಂಗಳೊಳಗೆ Apple Pay ಅನ್ನು ಪ್ರಾರಂಭಿಸಲಾಗುವುದು ಎಂದು ದೃಢಪಡಿಸಿದರು. ಪ್ರಮುಖ ಬ್ಯಾಂಕ್‌ಗಳೂ ಇದನ್ನು ಖಚಿತಪಡಿಸಿವೆ.

ಐಫೋನ್ ಬಳಕೆದಾರರಿಗೆ,ಕಾರ್ಡ್ ಸ್ವೈಪ್ ಮಾಡುವ ಬದಲು Apple Pay ಅನ್ನು ಬಳಸಬಹುದು. ಹಿಂದಿನ ವರ್ಷ, CBO ಬ್ಯಾಂಕ್‌ಗಳಿಗೂ ಪಾವತಿ ಸೇವೆ ಒದಗಿಸುವವರಿಗೂ ಕಾರ್ಡ್ ಟೋಕನೈಸೇಶನ್ ಸೇವೆ ನೀಡುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿಲಾಗಿತ್ತು. ಈ ಮೂಲಕ ಪ್ರಸ್ತುತ ಕಾರ್ಡ್ ಆಧಾರಿತ ಪಾವತಿಗಳ ಬದಲಿಗೆ ಟೋಕನ್ ಆಧಾರಿತ ಸುರಕ್ಷಿತ ವಿಧಾನವನ್ನು ಕಾರ್ಯಗತಗೊಳಿಸುವುದು ಗುರಿಯಾಗಿದೆ.

ಈ ವ್ಯವಸ್ಥೆಯ ಮೂಲಕ ಗ್ರಾಹಕರಿಗೆ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಪಾವತಿ ಕಾರ್ಡ್‌ಗಳನ್ನು ನೋಂದಾಯಿಸಲು ಮತ್ತು ಒಮಾನ್‌ನಲ್ಲಿ ಲಭ್ಯವಿರುವ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಪಾವತಿ ವ್ಯವಸ್ಥೆಗಳ ಮೂಲಕ (ಆಪಲ್ ಪೇ, ಸ್ಯಾಮ್ಸಂಗ್ ಪೇ ) ಸಂಪರ್ಕರಹಿತ ರೀತಿಯಲ್ಲಿ ಪಾವತಿ ಮಾಡಬಹುದು. ಈ ಸೇವೆಯನ್ನು ಬಳಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

error: Content is protected !! Not allowed copy content from janadhvani.com