ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಬುರೈದ ಘಟಕದ ಮಹಾಸಭೆಯು 2023 ನೇ ಮಾರ್ಚ್ ಒಂದರಂದು ಬುರೈದ ಶೈನ್ ಆಡಿಟೋರಿಯಂನಲ್ಲಿ ನಡೆಯಿತು. ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಣ್ಣಂಗಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ನೇತಾರರಾದ ಯಾಕೂಬ್ ಸಖಾಫಿ ಉದ್ಘಾಟಿಸಿದರು.
ದಿಕ್ಸೂಚಿ ಭಾಷಣಗೈದ DKSC ರಿಯಾದ್ ಸಮಿತಿ ಆಧ್ಯಕ್ಷರಾದ ಆಝೀಝ್ ಬಜ್ಪೆ ರವರ
ನೇತೃತ್ವದಲ್ಲಿ ಹಳೆ ಕಮಿಟಿ ಬರ್ಖಾಸ್ತು ಮಾಡಿ 2024-25 ನೇ ಸಾಲಿನ ಹೊಸ ಕಮಿಟಿಯನ್ನು ರಚಿಸಲಾಯಿತು.
ಅಬ್ದುಲ್ ಖಾದರ್ ಕಣ್ಣಂಗಾರ್ ಸತತ ಐದನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು
ಇಸ್ಮಾಯಿಲ್ ಆನಡ್ಕ ಪ್ರ.ಕಾರ್ಯದರ್ಶಿಯಾಗಿಯೂ ಜಾಬಿರ್ ಕೇಕನಾಜೆ ಕೋಶಾದಿಕಾರಿಯಾಗಿಯೂ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ: ಅಬ್ದುಲ್ಲಾ ಕೊಯಿಲ, ರಝಾಕ್ ನೆಕ್ಕಿಲ್.
ಜೊತೆ ಕಾರ್ಯದರ್ಶಿಗಳಾಗಿ : ಝಕರಿಯಾ ಕೊರಿಂಗಿಲ .ಅಝಿಝ ಪುತ್ತೂರು
ಆಡ್ವೈಸಿಂಗ್ ಬೋರ್ಡ್ : ಯಾಕೂಬ್. ಸಖಾಫಿ, ಲತೀಫ್ ಶೇರಿ, ಹುಸೈನ್ ಬನ್ನೂರು , ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಸ್ವಾಲಿಹ್ ಬೆಳ್ಳಾರೆ ಹಾಗೂ ಸಂಚಾಲಕರಾಗಿ ಇರ್ಷಾದ್ ಸಚ್ಚೇರಿಪೇಟೆ , ಜಲೀಲ್ ಕೇಕಣಾಜೆ ಮತ್ತು ಇಸ್ಮಾಯಿಲ್ ಉಚ್ಚಿಲ ಆಯ್ಕೆಯಾದರು.
ಹನ್ನೊಂದು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ನೇತಾರರಾದ ರಿಯಾದ್ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ,ಮುಸ್ತಫಾ ಲತೀಫಿ , ಖಲೀಲ್ ಝಹ್ರಿ ಉಪಸ್ಥಿತರಿದ್ದರು
ಝಕರಿಯಾ ಕೊರಿಂಗಿಲ ಸ್ವಾಗತಿಸಿ ಇಸ್ಮಾಯಿಲ್ ಆನಡ್ಕ ವಂದಿಸಿದರು.