ಸೌದಿ ಅರೇಬಿಯಾ ಕರ್ನಾಟಕ ಕಲ್ಚರಲ್ ಫೌಂಡೇಶನ್ “ಸಮಾಜ ಸೇವೆಯಲ್ಲಿ ಸಮರ್ಪಣೆಯ ಹತ್ತು ವರ್ಷಗಳು” ಎಂಬ ದ್ಯೇಯ ವಾಕ್ಯದಲ್ಲಿ ಆಯೋಜಿಸಿದ ಕೆ.ಸಿ.ಎಫ್ ಡೇ ಕಾರ್ಯಕ್ರಮವು ಕೆ.ಸಿ.ಎಫ್ ಅಲ್ ಖಸೀಂ ಝೋನ್ ಅಧೀನದ ಉನೈಝ ಸೆಕ್ಟರ್ ವತಿಯಿಂದ ಅತ್ಯಂತ ಯಶಸ್ವಿಯಾಗಿ KCF ಅಲ್ ರಾಸ್ ಕಛೇರಿಯಲ್ಲಿ ಆಚರಿಸಲಾಯಿತು.
KCF ಉನೈಝಾ ಸೆಕ್ಟರ್ ಕೋಶಾಧಿಕಾರಿಯಾದ ಅಬ್ದುಲ್ ರಶೀದ್ ಸೂರಿಂಜೆ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ KCF ಅಲ್ ರಾಸ್ ಯುನಿಟ್ ನೇತಾರ ನಝೀರ್ ದಾರಿಮಿ ಸ್ವಾಗತ ಭಾಷಣ ಹಾಗೂ ದುಆಕ್ಕೆ ನೇತೃತ್ವವನ್ನು ನೀಡಿದರು. KCF ಬುರೈದಾ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಲತೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆಯವರು ಕೆ.ಸಿ.ಎಫ್ ಕಳೆದ ಹತ್ತು ವರ್ಷಗಳಿಂದ ಸಮುದಾಯಕ್ಕೆ ಅರ್ಪಿಸಿದ ಸಾಮೂಹಿಕ ಕಾರ್ಯಕ್ರಮಗಳು ಹಾಗೂ ಕೆ.ಸಿ.ಎಫ್ ನಡೆದು ಬಂದ ಹೆಜ್ಜೆಗಳ ಕುರಿತು ಬಹಳ ಅರ್ಥವತ್ತಾಗಿ ಕ್ಲಿಪ್ಪಿಂಗ್ ಸಹಿತ ವಿವರಿಸಿದರು.
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಪ್ರಸ್ತಾವಿಕ ಭಾಷಣವನ್ನು ಮಾಡಿದರು,ಹಸನ್ ಮದನಿ ಮಂಡೆಕೋಲು ವಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಲ್ ರಾಸ್ ಯೂನಿಟ್ ಅಧ್ಯಕ್ಷರಾದ ಶಂಸುದ್ದೀನ್ ಉಜಿರೆಬೆಟ್ಟು, ಕಾರ್ಯದರ್ಶಿಯಾದ ಯೂಸುಫ್ ಉಚ್ಚಿಲ, ನೇತಾರರಾದ ರಶೀದ್ ಬೆಳ್ಳಾರೆ,ಫೈಸಲ್ ಮಠ ಮುಂತಾದ ಹಲಾವರು ಗಣ್ಯಾತಿ ಗಣ್ಯರು, ಸದಸ್ಯರು ಉಪಸ್ಥಿತರಿದ್ದರು.
ವರದಿ:- ಆಸಿಫ್ ಅಜಿಲಮೊಗರು.