ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ಧ ಮಸ್ಜಿದ್ ಗಳಲ್ಲಿ ಒಂದಾದ ಕಿಲ್ಲೂರು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ಇದರ ಮಹಾಸಭೆಯು ದಕ್ಷಿಣ ಕನ್ನಡ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸದಾತ್ ಕೂರತ್ ತಂಙಳ್ ರವರ ಘನ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕ್ಕರ್ ಹಾಗೂ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರು, ದರ್ಗಾ ಶರೀಫ್ ಕಾಜೂರ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆದ ಜೆ ಯಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ಇವರ ಮಾರ್ಗದರ್ಶನದೊಂದಿಗೆ ಕಿಲ್ಲೂರು ಮಸ್ಜಿದ್ ಹಾಲ್ ನಲ್ಲಿ ನಡೆಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು , ಉಪಾದ್ಯಕ್ಷರಾಗಿ ಶಾಹುಲ್ ಹಮೀದ್ ತಿಮ್ಮನಬೆಟ್ಟು, ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಬೀಜದಡಿ, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಮಲ್ಲಿಗೆಮನೆ ಹಾಗೂ ಸದಸ್ಯರಾಗಿ ಹಂಝತ್ ಕಿಲ್ಲೂರು, HN ಹನೀಫ್, ಮಹಮ್ಮದ್ (ಪುತ್ತುಮೊನಾಕ)ಕಿಲ್ಲೂರು, ಬದ್ರುದ್ದೀನ್ ಕಿಲ್ಲೂರು, ಮುಹಮ್ಮದ್ ಮಣ್ಣಗುಂಡಿ, ಅಶ್ರಫ್ ಕಿಲ್ಲೂರು, ಹನೀಫ್ ಮಲ್ಲಿಗೆ ಇವರನ್ನು ಆಯ್ಕೆ ಮಾಡಲಾಯಿತು.
ಕಿಲ್ಲೂರು ಮಸ್ಜಿದ್ ಆಡಳಿತ ಅಧಿಕಾರಿಯಾಗಿದ್ದ ನಿವೃತ ಸೈನಿಕ ಮೊಹಮ್ಮದ್ ರಾಫಿ ಬೆಳ್ತಂಗಡಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದಗೈದರು.