ಮನಾಮ: ಕೆಸಿಎಫ್ ಬಹರೈನ್ ರಬೀಹ್ – 23 ಸ್ವಾಗತ ಸಮಿತಿ ವತಿಯಿಂದ ಸಮಾಪ್ತಿ ಸಮ್ಮಿಲನ ಕಾರ್ಯಕ್ರಮವು ದಿನಾಂಕ 03/11/2023 ರಂದು ಶುಕ್ರವಾರ ರಾತ್ರಿ ಗುದೈಬಿಯಾ ಹೆಂಡೊಲೆಸ್ ಪಾರ್ಕ್ ನಲ್ಲಿ ಉತ್ತಮ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾದ ಖಲಂದರ್ ಉಸ್ತಾದರು ದುಆಗೈದರು. ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬೂಬಕರ್ ಮದನಿ ಉಸ್ತಾದರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಸ್ವಾಗತ ಸಮಿತಿ ಚೆಯರ್ಮ್ಯಾನ್ ನಝೀರ್ ಹಾಜಿ ದೇರ್ಲಕಟ್ಟೆ ಯವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕೆಸಿಎಫ್ ಗೆ ಸದಸ್ಯರನ್ನು ಸೇರ್ಪಡೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅಡ್ಯಾರ್ ಕಣ್ಣೂರು ನಿರ್ಮಾಣ ಹಂತದಲ್ಲಿರುವ ಮರ್ಕಝುಲ್ ಇಸ್ಲಾಮಿಯಾ ಕೆಸಿಎಫ್ ಭವನದ ಪೂರ್ತೀಕರಣಕ್ಕಾಗಿ ಎಲ್ಲರೂ ಕೈಜೋಡಿಸಿ ಸಹಕರಿಸಬೇಕೆಂದು ಕರೆಯಿತ್ತರು. ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರರು ಕೆಸಿಎಫ್ ನ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಕಾರ್ಯಕರ್ತರಿಗೆ ಸಂಘಟನಾ ತರಬೇತಿ ನೀಡಿದರು.
ಕೆಸಿಎಫ್ ಮನಾಮ ಸೆಕ್ಟರ್ ಅಧ್ಯಕ್ಷರಾದ ಅಹ್ಮದ್ ಮುಸ್ಲಿಯಾರ್ ರವರು ಮಾತನಾಡಿ ಇತ್ತೀಚಿಗೆ ಉಮ್ರಾ ಯಾತ್ರೆಯಲ್ಲಿದ್ದ ಸ್ತ್ರೀ ಯೊಬ್ಬರು ಮರಣ ಹೊಂದಿದಾಗ ನಡೆಸಿದ ಸಾಂತ್ವನ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಅಭಿಮಾನದಿಂದ ಹೇಳಿದರು.
ಕೆಸಿಎಫ್ ಗುದೈಬಿಯಾ ಸೆಕ್ಟರ್ ಅಧ್ಯಕ್ಷರಾದ ಟಿ.ಎಂ. ಉಸ್ತಾದರು ಕೆಸಿಎಫ್ ನ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಕೈಜೋಡಿಸಿ ರಿಫಾಈ ದಫ್ ರಾತೀಬನ್ನು ಯಶಸ್ವಿ ಗೊಳಿಸಲು ಕರೆನೀಡಿದರು.
ಲತೀಫ್ ಪೆರೋಲಿ ಅವರು ರಸಪ್ರಶ್ನೆ ಹಾಗೂ ತರ್ಲೆ ಪ್ರಶ್ನೋತ್ತರಗಳು ಕಾರ್ಯಕರ್ತರನ್ನು ಮನೋರಂಜಿಸಿತು ಮತ್ತು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ಕೆಸಿಎಫ್ ನೋರ್ತ್ ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಅಝೀಮ್ ಕಾಪು ಬಹರೈನ್ ತೊರೆದು ಉದ್ಯೋಗ ನಿಮಿತ್ತ ದುಬೈ ಯಾತ್ರೆ ಕೈಗೊಳ್ಳುವ ನಿಟ್ಟಿನಲ್ಲಿ ಅವರನ್ನು ರಾಷ್ಟ್ರೀಯ ಸಮಿತಿ, ನೋರ್ತ್ ಝೋನ್, ಮುಹರ್ರಕ್ ಸೆಕ್ಟರ್ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಖಲಂದರ್ ಉಸ್ತಾದ್ ಅಝೀಂರವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅಝೀಂ ಕಾಪುರವರು ಬಹರೈನಿಗೆ ಬಂದಾಗ ನಾನು ಒಬ್ಬಂಟಿಯಾಗಿದ್ದೆ. ನಿಮ್ಮಂತಹಾ ಸ್ನೇಹಿತರನ್ನು ನನಗೆ ಪರಿಚಯಿಸಿದ್ದು ಈ ಕೆಸಿಎಫ್ ಎಂಬ ಸಂಘಟನೆಯಾಗಿದೆ. ಈಗ ನಾನು ನಿಮ್ಮನ್ನು ಬಿಟ್ಟು ದುಬೈಗೆ ಯಾತ್ರೆ ಹೋಗುತ್ತಿದ್ದೇನೆ. ನಮ್ಮ ಸಂಪರ್ಕ ಸದಾ ಮುಂದುವರಿಯಲಿ. ಇನ್ನು ಮುಂದಕ್ಕೂ ಈ ಸಂಘಟನೆಯಲ್ಲಿ ದುಡಿಯುವ ಅವಕಾಶವನ್ನು ಅಲ್ಲಾಹು ಒದಗಿಸಲೆಂದು ಮನನೊಂದು ಪ್ರಾರ್ಥಿಸುತ್ತಾ ಖೇದದಿಂದ ದು:ಖವನ್ನು ತಾಳಲಾರದೇ ಕಣ್ಣೀರು ಹರಿಸಿಬಿಟ್ಟರು.
ಕಾರ್ಯಕರ್ತರು ಮಗ್ನರಾದರು.
ಜನಾಬ್ ಜಮಾಲುದ್ದೀನ್ ವಿಟ್ಲರವರು ಅಝೀಂ ರವರ ಯಾತ್ರೆಗೆ ಶುಭ ಹಾರೈಸಿದರು.
ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಿದ್ದೀಖ್ ಉಸ್ತಾದರು ಪೆಲೇಸ್ತೀನಿನ ನೊಂದ ಜನತೆಯ ರಕ್ಷಣೆಗಾಗಿ ಪ್ರಾರ್ಥಿಸಿದರು.
ಸ್ವಾಗತ ಸಮಿತಿ ಕನ್ವಿನರ್ ಲತೀಫ್ ಪೆರೋಲಿ ಸ್ವಾಗತಿಸಿದರು. ಸಂಘಟನಾ ಇಲಾಖೆ ಕಾರ್ಯದರ್ಶಿ
ಮನ್ಸೂರ್ ಬೆಳ್ಮ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ವರದಿ: ಎಂ.ಎ.ವೇಣೂರು,ಬಹ್ರೈನ್