ಬೆಳ್ತಂಗಡಿ: SჄS ಬೆಳ್ತಂಗಡಿ ಝೋನ್ ಸಾಂತ್ವನ ಹಾಗೂ ಇಸಾಬ ಕಾರ್ಯಕರ್ತರ TAJHEEZ 2K23 ಕಾರ್ಯಕ್ರಮವು ನವೆಂಬರ್ 03 ಶುಕ್ರವಾರ ಉಜಿರೆ ಮಲ್ಜಅ್ ನಲ್ಲಿ SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್ ಮಾಚಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮವನ್ನು ಜಂಇಯ್ಯತುಲ್ ಮುಫತ್ತಿಶೀನ್ ರಾಜ್ಯಾಧ್ಯಕ್ಷರಾದ ಹಾಫಿಳ್ ಮಹಮ್ಮದ್ ಹನೀಫ್ ಮಿಸ್ಬಾಹಿ ಉದ್ಘಾಟಿಸಿದರು. ಸಾಂತ್ವನ ಹಾಗೂ ಇಸಾಬ ಇದರ ಕುರಿತು SჄS ಈಸ್ಟ್ ಜಿಲ್ಲಾ ದಅ್ವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ವಿಷಯಮಂಡಿಸಿ SჄS ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಹಂಝ ಮದನಿ 30 ನೇ ವರ್ಷಾಚರಣೆಯ ವಿವರಣೆ ನೀಡಿದರು. SჄS ರಾಜ್ಯ ಪ್ರಧಾನ ಕಾರ್ಯದರ್ಶಿ M.B.M ಸ್ವಾದಿಕ್ ಮಲೆಬೆಟ್ಟು ಪ್ರಾಸ್ತಾವಿಕ ಮಾತನಾಡಿದರು. SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಶಾಫಿ ಮದನಿ ಪಾಂಡವರಕಲ್ಲು ಶುಭಾಶಂಸೆಗೈದರು.
SჄS ಜಿಲ್ಲಾ ಇಸಾಬ ಕಾರ್ಯದರ್ಶಿ ಉಸ್ಮಾನ್ ಸೋಕಿಲ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕ ಅಬೂಬಕ್ಕರ್ ಸಮಾಡೈನ್, SჄS ಬೆಳ್ತಂಗಡಿ ಝೋನ್ ಸಾಂತ್ವನ ಕಾರ್ಯದರ್ಶಿ ಸಲೀಂ ಕನ್ಯಾಡಿ ಇಸಾಬ ಕಾರ್ಯದರ್ಶಿ ಅಬ್ದುರ್ರಶೀದ್ ವೇಣೂರು ಜಿಲ್ಲಾ ನಾಯಕರಾದ ಫಾರೂಖ್ ಸಖಾಫಿ ವೇಣೂರು, ಝೋನ್ ಪ್ರ.ಕಾರ್ಯದರ್ಶಿ ನಝೀರ್ ಪೆರ್ದಾಡಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು ಅಯ್ಯೂಬ್ ಮಹ್ಲರಿ ಕಾವಳಕಟ್ಟೆ, ಜಮಾಲುದ್ದೀನ್ ಲತ್ವೀಫಿ ಲಾಡಿ, ಅಶ್ರಫ್ ಮುಂಡಾಜೆ, ಹಾರಿಸ್ ಕುಕ್ಕುಡಿ ಸಿದ್ದೀಖ್ ಪರಪ್ಪು, ಅಝೀಝ್ ಕಾಜೂರು, ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಲೀಂ ಕನ್ಯಾಡಿ ಸ್ವಾಗತಿಸಿ ದನ್ಯವಾದ ಸಲ್ಲಿಸಿದರು.