ದಮ್ಮಾಂ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದ ದಮ್ಮಾಂ ವಲಯ ಅಧೀನದಲ್ಲಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಪ್ರಾಂಶುಪಾಲರಾದ ಜನಾಬ್ ಹಬೀಬುರ್ರಹ್ಮಾನ್ ರವರಿಗೆ 2, ನವಂಬರ್ 2023 ಗುರುವಾರ ರಾತ್ರಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಅಲ್ಪ ಅವಧಿಯಲ್ಲಿ ಡಿಕೆಯಸ್ಸಿಯ ಕಾರ್ಯಕರ್ತರ ಪ್ರವರ್ತನೆಯನ್ನು ಹೊಗಳುತ್ತಾ ಇದೆಲ್ಲದರ ಫಲಿತಾಂಶ ಸ್ವರ್ಗವಾಗಿರಲಿ ಎಂದು ಪ್ರಾರ್ಥಿಸಿದರು. ಪ್ರವರ್ತನೆ ಹಾಗೂ ಗ್ಯಾದರಿಂಗ್ ಗಳು ಜನರ ಮನಸ್ಸಿಗೆ ತೃಪ್ತಿಕರ ಹಾಗೂ ಸಂತೋಷಮಯವಾಗಿದ್ದು ಅಕ್ಟೋಬರ್ 26 ರಂದು ದಮ್ಮಾಂನಲ್ಲಿ ನಡೆದ ಫ್ಯಾಮಿಲಿ ಮುಲಾಖಾತ್ ಸಮಾರಂಭ ಇದಕ್ಕೆ ಸಾಕ್ಷಿ ಎಂದು ನುಡಿದರು.
ಡಿಕೆಯಸ್ಸಿ ದಮ್ಮಾಂ ಝೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆಯವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ಆಗಮಿಸಿದ್ದ ಕೇಂದ್ರ, ವಲಯ, ಘಟಕ ಹಾಗೂ ಫ್ಯಾಮಿಲಿ ಮುಲಾಖಾತ್ ನ ಗಣ್ಯ ಸದಸ್ಯರನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಸೀದಿ ಹಾಜಿ ಬಹ್ರೈನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, ಕೋಶಾಧಿಕಾರಿ ದಾವೂದ್ ಕಜೆಮಾರ್ ಉಪಸ್ಥಿತರಿದ್ದರು.
ಡಿಕೆಯಸ್ಸಿ ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್, ಕೇಂದ್ರ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಫ್ಯಾಮಿಲಿ ಮುಲಾಖಾತ್ 2023 ಚೆಯರ್ಮ್ಯಾನ್ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ, ಡಿಕೆಯಸ್ಸಿ ದಮ್ಮಾಂ ಘಟಕ ಅಧ್ಯಕ್ಷ ಸಯ್ಯದ್ ಬಾವ, ಕೇಂದ್ರ ಸಮಿತಿ ಅಡಿಟರ್ ಇಸ್ಮಾಯೀಲ್ ಹೊಸಂಗಡಿ ಹಾಗೂ ಕೇಂದ್ರ, ವಲಯ,ಘಟಕ ಮತ್ತು ಫ್ಯಾಮಿಲಿ ಮುಲಾಖಾತ್ ಸಮಿತಿಯ ಗಣ್ಯ ಸದಸ್ಯರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.
ಡಿಕೆಯಸ್ಸಿ ಕಾರ್ಯಾಧ್ಯಕ್ಷ ಸೀದಿ ಹಾಜಿಯವರು ಡಿಕೆಯಸ್ಸಿ ವಿಷನ್ 30 ಯ ಎಲ್ಲಾ ಯಶಸ್ವಿ ಕಾರ್ಯಕ್ರಮಗಳಿಗೆ ತಮ್ಮ ಅವಿರತ ಶ್ರಮವಿರಲಿ ಎಂದು ಭಿನ್ನವಿಸಿದರು.
ದಮ್ಮಾಂ ಝೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಫ್ಯಾಮಿಲಿ ಮುಲಾಖಾತ್ 2023 ಯಶಸ್ವಿಗೆ ಕಾರಣಕರ್ತರಾದ ಸಮಿತಿಗೆ ಕೃತಜ್ಞತೆ ಅರ್ಪಿಸಿದರು.
ಕೊನೆಯಲ್ಲಿ ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ರಫೀಖ್ ಸೂರಿಂಜೆ ಡಿಕೆಯಸ್ಸಿ ಹಾಗೂ ಡಿಕೆಯಸ್ಸಿ ವಿಷನ್ 30 ಬಗ್ಗೆ ಕೆಲವೊಂದು ವಿಷಯಗಳನ್ನು ವಿವರಿಸಿ ಧನ್ಯವಾದಗೈದರು ಮತ್ತು ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಕಫ್ಫಾರತುಲ್ ಮಜ್ಲಿಸ್ ಹಾಗೂ ಸ್ವಲಾತುನ್ನಬಿ(ಸ)ಯೊಂದಿಗೆ ಸಭೆ ಮುಕ್ತಾಯ.