ಕರ್ನಾಟಕ ರಾಜ್ಯ SJM ವತಿಯಿಂದ ನಡೆಸಲ್ಪಡುವ ಮುಅಲ್ಲಿಂ ಮೆಹರ್ಜಾನ್ ಕಾರ್ಕಳ ರೇಂಜ್ ಮಟ್ಟದ ಕಾರ್ಯಕ್ರಮವು ನೂರುಲ್ ಹುದಾ ಮಸೀದಿ ಬಜಗೋಳಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷರು ಕಾಬೆಟ್ಟು ಅಬ್ದುಲ್ಲಾ ಮದನಿ ವಹಿಸಿದರು. ಕಾರ್ಯದರ್ಶಿ ಸಿದ್ದೀಕ್ ಮುಸ್ಲಿಯಾರ್ ಸ್ವಾಗತಿಸಿದ ನಂತರ ಬೊಲ್ಲೊಟ್ಟು ಮದನಿ, ಅಬ್ದುಲ್ ಖಾದರ್ ಮದನಿ ಬಂಗ್ಲೆಗುಡ್ಡೆ ಕಾರ್ಯಕ್ರಮದ ಮುಂಚೊಣಿ ನಾಯಕತ್ವ ವಹಿಸಿದರು.
ನಂತರ ಪ್ರತಿಬೆಗಳಿಂದ ಹಲವು ವಿದದ ಕಾರ್ಯಕ್ರಮ ನಡೆಯಿತು. ಸಮಾರೂಪ ಸಮಾರಂಭದಲ್ಲಿ ಎಸ್ ಜೆ ಯು ಅಧ್ಯಕ್ಷರಾದ ಸುಲೈಮಾನ್ ಸ ಅದಿ, ನೆಲ್ಲಿಕಾರ್ ಮಸೀದಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಬಜಗೋಳಿ ಪ್ರಾಸ್ತವಿಕವಾಗಿ ಮಾತನಾಡಿದರು.
ಬಜಗೋಳಿ ಮಸೀದಿ ಅಧ್ಯಕ್ಷರಾದ ಪುತ್ತಾಕ ಗುರ್ಗಲ್ಗುಡ್ಡೆ, ಇಕ್ಬಾಲ್ ಮಾರ್ಕೆಟ್, ಉಸ್ಮಾನಾಕ, ರಹಿಮಾಕ ಉಪಸ್ತಿತರಿದ್ದರು.
ಸ್ಪರ್ದಾಲುಗಳ ಪೈಕಿ ವೈಯುಕ್ತಿಕ ಚಾಂಪಿಯನ್ ಆಗಿ ಸೀನಿಯರ್ ವಿಭಾಗದಲ್ಲಿ ಖಲಂದರ್ ಸಅದಿ ಸಾಣೂರ್ ಹಾಗೂ ಜೂನಿಯರ್ ವಿಭಾಗದಲ್ಲಿ ಅಬ್ದುರ್ರಹ್ಮಾನ್ ಹುಮೈದಿ ಬಜಗೋಳಿ ಹೊರಹೊಮ್ಮಿದರು.