ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ)ಮಂಗಳೂರು ಇದರ ಅಧೀನದಲ್ಲಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿದೆ.
ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುವ
ವಿದ್ಯಾಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದರ ಅಂಗವಾಗಿ ಅಕ್ಟೋಬರ್ 26 ಗುರುವಾರ ಮುಸ್ಸಂಜೆ ಸೌದಿ ಅರೇಬಿಯಾದ ದಮ್ಮಾಂನಲ್ಲಿ ಬೃಹತ್ ಫ್ಯಾಮಿಲಿ ಮುಲಾಖಾತ್ ಆಯೋಜಿಸಲಾಗಿದೆ.
ಡಿಕೆಯಸ್ಸಿ ವಿಷನ್ 30 ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಕೂಡಾ ಈ ಸಮಾರಂಭದಲ್ಲಿ ಹಮ್ಮಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಡಾ! ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಬಿ.ಎಂ.ಫಾರೂಖ್ ಎಂ.ಎಲ್.ಸಿ. ದ.ಕ. ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಮರ್ಕಝುಲ್ ಇಹ್ಸಾನ್ ಮೂಳೂರು ಪ್ರಾಂಶುಪಾಲ ಹಬೀಬುರ್ರಹ್ಮಾನ್, ಪತ್ರಕರ್ತ ಬಿ.ಎಂ. ಹನೀಫ್, ಝಕರಿಯ್ಯಾ ಅಲ್ ಮುಝೈನ್, ಶೇಖ್ ಎಕ್ಸಪರ್ಟೈಸ್, ಇಬ್ರಾಹೀಂ ರಕ್ವಾನೀ, ನಝೀರ್ ಅಲ್ ಫಲಾಹ್, ಶಾಕಿರ್ ಹೈಸಂ, ಇನ್ನಿತರ ಉಲಮಾ- ಉಮರಾ ನಾಯಕರು, ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಸ್ಫರ್ಧೆ, ದಫ್ಫ್, ಕ್ವಿಝ್, ಖಿರಾಅತ್, ನಅತ್ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಲಾಗಿದೆ.