ಬೆಳ್ತಂಗಡಿ: SჄS 30 ನೇ ವರ್ಷಾಚರಣೆ ಪ್ರಯುಕ್ತ ಕಾರ್ಮಿಕರ ಸಂಗಮ ಹಾಗೂ SSF ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಡ್ರೈವರ್ಸ್ ಮೀಟ್ ಕಾರ್ಯಕ್ರಮವು ಆಗಸ್ಟ್ 27 ರಂದು ಉಜಿರೆಯ ಮಲ್ಜಅ್ ವಿದ್ಯಾಸಂಸ್ಥೆ ಯ ಸಭಾಂಗಣದಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ 200 ಕ್ಕೂ ಅಧಿಕ ಕಾರ್ಮಿಕರು ಹಾಗೂ ಡ್ರೈವರ್ಸ್ ಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ರಾಜ್ಯ ಸದಸ್ಯರೂ ಜಿಲ್ಲಾ ಕಾರ್ಯದರ್ಶಿಯೂ ಆದ ಅಶ್ರಫ್ ಸಖಾಫಿ ಮಾಡಾವು ವಿಷಯ ಮಂಡಿಸಿದರು. ಅನುಗ್ರಹ ಸಮೂಹ ಸಂಸ್ಥೆಯ ವಕ್ತಾರರಾದ ತ್ವಲ್ಹತ್ M.G ಸವಣಾಲು ಕಾರ್ಮಿಕರಿಗೆ ಹಾಗೂ ಚಾಲಕರಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಮಿಕರಿಗೆ ಸ್ಥಳದಲ್ಲಿಯೇ ಆರೋಗ್ಯ ಕಾರ್ಡ್ ಮಾಡಿ ವಿತರಿಸಲಾಯಿತು. SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ M.A ಕಾಸಿಂ ಮುಸ್ಲಿಯಾರ್ ಮಾಚಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು SჄS ಉಜಿರೆ ಸರ್ಕಲ್ ಅಧ್ಯಕ್ಷರಾದ ಸಲೀಂ ಕನ್ಯಾಡಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ಝೋನ್ ಅಧ್ಯಕ್ಷರಾದ ಅಸ್ಸಯ್ಯಿದ್ S.M ಕೋಯ ತಂಙಳ್ ಉಜಿರೆ ಸರ್ಕಲ್ ಕಾರ್ಯದರ್ಶಿ ಖಾಲಿದ್ ಮಸ್ಲಿಯಾರ್ ಉಜಿರೆ ಸುನ್ನೀ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಮುಹಿಯುದ್ದೀನ್ ನಜಾತ್ SSF ರಾಜ್ಯ ಕಾರ್ಯದರ್ಶಿ ಶರೀಫ್ ಬೆರ್ಕಳ SSF ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು ಉಜಿರೆ SჄS ಝೋನ್ ನಾಯಕರಾದ ಅಯ್ಯೂಬ್ ಮಹ್ಲರಿ ಕಾವಳಕಟ್ಟೆ ಅಶ್ರಫ್ ಹಿಮಮಿ, ಪೈಝಲ್ ಬೆಳ್ತಂಗಡಿ ಅಬ್ದುಲ್ಲಾ ಉಜಿರೆ, SჄS ಉಜಿರೆ ಸರ್ಕಲ್ ನಾಯಕರು SSF ಉಜಿರೆ ಸೆಕ್ಟರ್ ನಾಯಕರು ಭಾಗವಹಿಸಿದ್ದರು ಕಾರ್ಯಕ್ರಮ ವನ್ನು SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಅನ್ಸಾರ್ ಸಅದಿ ಮಾಚಾರು ಸ್ವಾಗತಿಸಿ ವಂದಿಸಿದರು.