ಪುತ್ತೂರು ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ಇದರ ವಾರ್ಷಿಕ ಕೌನ್ಸಿಲ್ ಬನ್ನೂರು ಸುನ್ನಿ ಸೆಂಟರ್ ನಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದ ರಾಜ್ಯ ಎಸ್ ಎಂ ಎ ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ, ಇದೀಗ ವ್ಯಾಪಕವಾಗಿ ಯುವ ಸಮೂಹ ಬಲಿ ಆಗುತ್ತಿರುವ ಮಾದಕ ದ್ರವ್ಯದ ಬಗ್ಗೆ ಮೋಹಲಾಗಳಲ್ಲಿ ಜಾಗೃತಿ ಮೂಡಿಸಬೇಕು. ಮಾತ್ರವಲ್ಲದೆ ಜಾತಿ ಮತ ಭೇದವಿಲ್ಲದೆ ಮಾದಕ ದ್ರವ್ಯದ ವಿರುದ್ಧ ಹೋರಾಟ ಮಾಡಿ ಅದರ ಜಾಲವನ್ನು ಕಿತ್ತೊಗೆಯಬೇಕು ಎಂದರು. ಇಲ್ಲದಿದ್ದರೆ ಸಮಾಜಕ್ಕೆ ಮಾರಕವಾಗಲಿದೆ, ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಂಘ-ಸಂಸ್ಥೆಗಳು ಕೈಜೋಡಿಸಿ ಮಾದಕ ದ್ರವ್ಯದ ಜಾಲವನ್ನು ನಿರ್ನಾಮ ಮಾಡಬೇಕಾಗಿದೆ ಎಂದರು.
ಎಸ್ ಎಮ್ ಎ ನಡೆಸುವ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೊಹಲ್ಲಾಗಳಲ್ಲಿ ಜಾರಿಗೊಳಿಸಿ ಪ್ರವಾದಿ (ಸ ಅ ) ತೋರಿಸಿಕೊಟ್ಟ ಆದರ್ಶವನ್ನು ಮೈಗೂಡಿಸಿಕೊಂಡು ಸಮುದಾಯದ ಏಳಿಗೆಗೆ ಮೊಹಲ್ಲಾಗಳ ಸಬಲೀಕರಣ ಗೊಳಿಸಲು ಆಡಳಿತ ಸಮಿತಿ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಂ ಎ ಪುತ್ತೂರು ರೀಜನಲ್ ಸಮಿತಿ ಅಧ್ಯಕ್ಷರಾದ ಹಸನ್ ಶಿಹಾಬುದ್ದೀನ್ ನಿರ್ವಹಿಸಿದರು ಕಾರ್ಯಕ್ರಮವನ್ನು ಎಸ್ ಜೆ ಎಂ ಪುತ್ತೂರು ಅಧ್ಯಕ್ಷರಾದ ಶರೀಫ್ ಸಖಾಫಿ ಉದ್ಘಾಟಿಸಿದರು ಎಸ್ ಎಂ ಎ ಪುತ್ತೂರು ರೀಜಿನಲ್ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸಹದಿ ವರದಿ ಲೆಕ್ಕಪತ್ರ ಸಭೆಗೆ ಮಂಡಿಸಿದರು ಸಭೆಯ ವೀಕ್ಷಕರಾಗಿ ಎಸ್ ಎಂ ಎ ವಿಟ್ಲ ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ಭಾಗವಹಿಸಿದರು ದಾಹೂದ್ ಅಶ್ರಫಿ ಸ್ವಾಗತಿಸಿದರು ಈ ಸಂದರ್ಭದಲ್ಲಿ ಇಸ್ಮಾಯಿಲ್ ಹಾಜಿ ಬನ್ನೂರು, ರಝಾಕ್ ಹಾಜಿ ಅಳೆಕೆಮಜಲ್, ಅಬ್ಬಾಸ್ ಹಾಜಿ ಅರಿಯಡ್ಕ, ರಫೀಕ್ ಸಖಾಫಿ ಬನ್ನೂರು, ಸಲೀಂ ಮದನಿ ಉಪಸ್ಥಿತರಿದ್ದರು.
ಸುಮಾರು 16 ಮೊಹಲ್ಲಾ ಪ್ರತಿನಿಧಿಗಳು ಭಾಗವಹಿಸಿದರು.