ರಿಯಾದ್: ಸೌದಿ ಅರೇಬಿಯಾದಲ್ಲಿ ಗೃಹ ಕಾರ್ಮಿಕರು ಮನೆಯಲ್ಲಿ ಕೆಲಸ ಮಾಡಲು ನಿರಾಕರಿಸಿದರೆ ಅವರ ವಿರುದ್ಧ ದಂಡ ಸೇರಿದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಸಾನಿದ್ ಪ್ಲಾಟ್‌ಫಾರ್ಮ್ ತಿಳಿಸಿದೆ.2000 ರಿಯಾಲ್‌ಗಳ ದಂಡ ಮತ್ತು ಸೌದಿಗೆ ಪ್ರಯಾಣ ನಿಷೇಧವನ್ನು ವಿಧಿಸಲಾಗುತ್ತದೆ.
ಒಪ್ಪಂದವನ್ನು ಉಲ್ಲಂಘಿಸುವ ಅಂತಹ ಕಾರ್ಮಿಕರ ವಾಪಸಾತಿ ವೆಚ್ಚವನ್ನು ಮಾಲೀಕರು ಭರಿಸಬೇಕಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಬಂದ ನಂತರ ಕೆಲಸ ಮಾಡದೆ ತಾಯ್ನಾಡಿಗೆ ಕಳುಹಿಸುವಂತೆ ಒತ್ತಾಯಿಸುವವರ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂಬ ಸ್ಥಳೀಯರ ಪ್ರಶ್ನೆಗೆ ಮುಸಾನಿದ್ ಪ್ಲಾಟ್ ಫಾರಂ ಈ ರೀತಿ ಪ್ರತಿಕ್ರಿಯಿಸಿದೆ.
ತಮ್ಮ ಉದ್ಯೋಗ ಒಪ್ಪಂದದ ಅಡಿಯಲ್ಲಿ ಕೆಲಸ ಮಾಡಲು ನಿರಾಕರಿಸುವ ಗೃಹ ಕಾರ್ಮಿಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಉದ್ಯೋಗದಾತರಿಗೆ ಅನುಮತಿ ಇದೆ.ಉಲ್ಲಂಘನೆಗಳ ಸಂಖ್ಯೆ ಮತ್ತು ಗಂಭೀರತೆಯನ್ನು ಅವಲಂಬಿಸಿ ಶಿಕ್ಷೆ ಮತ್ತು ದಂಡಗಳು ಹೆಚ್ಚಾಗಲಿದೆ ಎಂದು ಸಚಿವಾಲಯ ಎಚ್ಚರಿಸಿದೆ.
ಅಂತಹ ಉದ್ಯೋಗಿಗಳ ಹಿಂದಿರುಗುವ ಪ್ರಯಾಣಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸುವುದರಿಂದ ಉದ್ಯೋಗದಾತರಿಗೆ ವಿನಾಯಿತಿ ನೀಡಲಾಗಿದೆ. ಈ ವೆಚ್ಚವನ್ನು ಕೆಲಸಗಾರ ಸ್ವತಃ ಭರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಸರ್ಕಾರದ ವೆಚ್ಚದಲ್ಲಿ ಗಡಿಪಾರು ಮಾಡಲಾಗುವುದು ಎಂದು
ಸಚಿವಾಲಯ ಸ್ಪಷ್ಟಪಡಿಸಿದೆ.